ಬುಧವಾರ, ನವೆಂಬರ್ 20, 2019
27 °C

ಸಂಖ್ಯೆ ಇಲ್ಲದ ನಾಣ್ಯ: ಮುಂದಿನ ಭಾಗ ಖಾಲಿ

Published:
Updated:

ಬೆಂಗಳೂರು: ಹನುಮಂತನಗರದ ಚಿಲ್ಲರೆ ಅಂಗಡಿಯೊಂದರಲ್ಲಿ ಸಿಕ್ಕ ನಾಣ್ಯ ಇದು. ಈ ನಾಣ್ಯದ ಹಿಂಭಾಗ ಮಾತ್ರ ಅಚ್ಚಾಗಿದ್ದು, ಮುಂದಿನ ಭಾಗ ಖಾಲಿಯಾಗಿದೆ.`ವಾರದ ಹಿಂದೆ ಹಣ ಎಣಿಕೆ ಮಾಡುವಾಗ ಈ ನಾಣ್ಯ ಸಿಕ್ಕಿತು. ನಾಣ್ಯದ ಸಂಖ್ಯೆಯ ಭಾಗ ಅಚ್ಚಾಗಿಲ್ಲ. ನಾಣ್ಯ ಒಂದು ರೂಪಾಯಿಯ ಆಕಾರದಲ್ಲಿದೆ. ಆದರೆ, ಹೊಸದಾಗಿ ಬಂದಿರುವ ಎರಡು ರೂಪಾಯಿಯ ನಾಣ್ಯ ಕೂಡಾ ಇದೇ ಅಳತೆಯಲ್ಲಿರುವುದರಿಂದ ಇದು ಎಷ್ಟು ರೂಪಾಯಿಯ ನಾಣ್ಯ ಎಂಬುದು ಗೊತ್ತಾಗುತ್ತಿಲ್ಲ' ಎಂದು ಅಂಗಡಿಯ ಮಾಲೀಕ ಟಿ.ಎನ್.ಶ್ರೀನಿವಾಸ್ ತಿಳಿಸಿದರು. ಶ್ರೀನಿವಾಸ್ ಈ ನಾಣ್ಯವನ್ನು ಭಾನುವಾರ `ಪ್ರಜಾವಾಣಿ' ಕಚೇರಿಗೆ ತಂದಿದ್ದರು.

ಪ್ರತಿಕ್ರಿಯಿಸಿ (+)