ಸಂಗಾತಿ ಆಯ್ಕೆಗೂ ಡಿಎನ್‌ಎ ಪರೀಕ್ಷೆ!

ಬುಧವಾರ, ಜೂಲೈ 17, 2019
30 °C

ಸಂಗಾತಿ ಆಯ್ಕೆಗೂ ಡಿಎನ್‌ಎ ಪರೀಕ್ಷೆ!

Published:
Updated:

ಲಂಡನ್ (ಐಎಎನ್‌ಎಸ್): ಭವಿಷ್ಯದಲ್ಲಿ ಪುರುಷರು ಹಾಗೂ ಮಹಿಳೆಯರು ಜೀವನ ಸಂಗಾತಿ ಆಯ್ಕೆಗೆ ಆನುವಂಶಿಕ ಹೊಂದಾಣಿಕೆಗಳ (ಜೆನೆಟಿಕ್ ಕಂಪಾಟಿಬಿಲಿಟಿ) ಮೇಲೆ ಅವಲಂಬಿಸುವ ಸಾಧ್ಯತೆಯಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.ಜೊತೆಗೆ, ಡಿಎನ್‌ಎ ಪರೀಕ್ಷೆ ಈಗ ಅಗ್ಗವಾಗಿರುವುದರಿಂದ ಜನರು ಮುಂದಿನ ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ತಮ್ಮ ಆನುವಂಶಿಕ ವಿವರ (ಜೆನೆಟಿಕ್ ಕೋಡ್) ಪೂರ್ಣ ವಿವರ ಪಡೆಯಲಿದ್ದಾರೆ ಎಂದು ಬ್ರಿಟನ್ ವಿಜ್ಞಾನಿ ಮತ್ತು ಲಂಡನ್ನಿನ ಇಂಪೆರಿಯಲ್ ಕಾಲೇಜಿನ ಆರ್ಮಂಡ್ ಲೆರೊಯ್ ಹೇಳಿದ್ದಾರೆ.ತಮ್ಮ ಬುದ್ಧಿಮತ್ತೆ, ಕಣ್ಣಿನ ಬಣ್ಣವನ್ನೇ ಹೋಲುವ ಅಥವಾ ತಮಗೆ ಬೇಕಾದ ಸಂತಾನ ಪಡೆಯಲು ಜನರು ಈ ತಂತ್ರಜ್ಞಾನ ಬಳಸುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry