ಸೋಮವಾರ, ಏಪ್ರಿಲ್ 19, 2021
32 °C

ಸಂಗೀತದಿಂದ ನವ ಚೈತನ್ಯ- ಸಾ.ಶಿ. ಮರುಳಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಂಗೀತ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ~ ಎಂದು ಸಾಹಿತಿ ಸಾ.ಶಿ. ಮರುಳಯ್ಯ ಹೇಳಿದರು.ಅರವಿಂದ ಕಲಾವೃಂದವು ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಏರ್ಪಡಿಸಿದ್ದ ಸುಗಮ ಸಂಗೀತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಸಾಹಿತ್ಯ ಸೋಲುವ ಸ್ಥಳದಲ್ಲಿ ಸಂಗೀತ ಜಯಿಸುತ್ತದೆ. ಸಾಹಿತ್ಯವನ್ನು ಹೃದಯಕ್ಕೆ ಮುಟ್ಟಿಸುವಂತಹ ಕಾರ್ಯವನ್ನು ಸಂಗೀತ ಭಾವನಾತ್ಮಕವಾಗಿ ಮಾಡುತ್ತದೆ. ಸಂಗೀತದಿಂದ ನವ ಚೈತನ್ಯ ಮತ್ತು ಶಕ್ತಿಯು ದೊರೆಯುತ್ತದೆ~ ಎಂದರು.`ಬದುಕಿನಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಹಳೆಯ ಸಂಪ್ರದಾಯಗಳು ಅಳಿದು ಅಲ್ಲಿ ಹೊಸ ಸಂಪ್ರದಾಯಗಳು ಜನ್ಮ ತಳೆಯಬೇಕು. ಹಳೆಯದರಲ್ಲಿ ನವೀನತೆ ಕಾಣಬೇಕು. ಆಗಲೇ ಯಾವುದೇ ಒಂದು ಸಮಾಜ ಬಹುಕಾಲ ಬದುಕಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.`ಈಗ ಕನ್ನಡ ಸಾಹಿತ್ಯದಲ್ಲಿ ಪಂಪನ ಚಂಪೂ ಕಾವ್ಯವಿಲ್ಲ. ಕನ್ನಡ ಸಾಹಿತ್ಯದಲ್ಲಿ ಅನೇಕ ಗುರುತರವಾದ ಬದಲಾವಣೆಗಳಾಗಿವೆ. ಇಂದಿನ ಸಾಹಿತ್ಯದಲ್ಲಿ ನವೀನತೆ ಮೈಗೂಡಿದೆ~ ಎಂದು ನುಡಿದರು.`ನಮ್ಮ ಇಂದಿನ ಆಧುನಿಕ ಯುಗದ ಒತ್ತಡವನ್ನು ಕಡಿಮೆ ಮಾಡುವಂತಹ ಶಕ್ತಿ ಸಂಗೀತಕ್ಕಿದೆ. ನಮ್ಮಲ್ಲಿರುವ ಮನುಷ್ಯತ್ವವನ್ನು ಬಡಿದೆಬ್ಬಿಸಿ ನಮ್ಮನ್ನು ಮನುಷ್ಯರನ್ನಾಗಿಸುವ ಚೇತೋಹಾರಿತನ ಸಂಗೀತಕ್ಕಿದೆ~ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ವಿ. ರಾಮಚಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ, ಗಾಯಕಿ ಬಿ.ಕೆ. ಸುಮಿತ್ರ ಮತ್ತು ಅರವಿಂದ ಕಲಾವೃಂದದ ಕಾರ್ಯಾಧ್ಯಕ್ಷ ಎಂ.ಎ. ಅರವಿಂದ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.