ಸಂಗೀತವೊಂದು ದೈವಿ ಕಲೆ

7

ಸಂಗೀತವೊಂದು ದೈವಿ ಕಲೆ

Published:
Updated:

ಬೆಂಗಳೂರು: `ಸಂಗೀತವೊಂದು ದೈವಿ ಕಲೆ. ಈಗ ಗುರು-ಶಿಷ್ಯ ಪರಂಪರೆ ಉಳಿದುಕೊಂಡಿರುವುದು ಸಂಗೀತ ಕ್ಷೇತ್ರದಲ್ಲಿ ಮಾತ್ರ~ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಹೇಳಿದರು.ಪ್ರಪಂಚ ದಿ ವರ್ಲ್ಡ್ ಆಫ್ ಮ್ಯೂಸಿಕ್ ಸಂಸ್ಥೆಯು ನಗರದ ರಾಮ ಮಂದಿರದಲ್ಲಿ ಆಯೋಜಿಸಿದ್ದ ತ್ಯಾಗರಾಜ- ಪುರಂದರದಾಸರ ಆರಾಧನಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಸಮಾಜದ ಎಲ್ಲ ವರ್ಗದವರಿಗೆ ಸಂಗೀತ ಸಿಗುವಂತಾಗಬೇಕು. ವಿದ್ಯಾರ್ಥಿನಿಲಯಗಳಲ್ಲಿ ಸಂಗೀತ ಶಿಕ್ಷಕರನ್ನು ಸರ್ಕಾರ ನೇಮಿಸಬೇಕು~ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವೇಣುವಾದಕ ಎನ್.ರಮಣಿ ಅವರನ್ನು ಸನ್ಮಾನಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry