ಸಂಗೀತ ಅಕಾಡೆಮಿ ಪ್ರಶಸ್ತಿ ಪ್ರಕಟ
ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2010- 11ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗೆ ಈ ಕೆಳಕಂಡ ಕಲಾವಿದರನ್ನು ಆಯ್ಕೆ ಮಾಡಿದೆ.ಗೌರವ ಪ್ರಶಸ್ತಿಗಾಗಿ ಡಾ ಚೂಡಾಮಣಿ ನಂದಗೋಪಾಲ್( ಭರತನಾಟ್ಯ), ಸೋಹನ್ ಕುಮಾರಿ (ಸುಗಮ ಸಂಗೀತ) ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಸಂಗೀತ ವಿಭಾಗ- ಆರ್.ಕೆ. ಪದ್ಮನಾಭ, ಎನ್. ಬಾಲಾಜಿಸಿಂಗ್, ಅಣ್ಣು ದೇವಾಡಿಗ, ಡಿ. ರಾಮು. ಹಿಂದೂಸ್ತಾನಿ ಸಂಗೀತ- ದೊಡ್ಡ ಬಸವಾರ್ಯ ಮಲಕಾಪುರ, ಮಾಧವರಾವ್ ಇನಾಂಧರ್, ನೀಲಾ ಎಂ. ಕೋಡ್ಲಿ, ಹನುಮಣ್ಣ ನಾಯಕ ದೊರೆ.
ನೃತ್ಯ- ನಿರುಪಮ, ರಾಜೇಂದ್ರ, ಬಿ.ಕೆ. ಶ್ಯಾಮಪ್ರಕಾಶ್, ಮಂಜುಳಾ ಪರಮೇಶ್,
ಸುಗಮ ಸಂಗೀತ- ಎಂ.ಎಸ್. ಕಾಮತ್, ಜಯವಂತ್ ಎಸ್. ಕೊಪರ್ಡೆ.
ಕಥಾಕೀರ್ತನ- ಬೇಲೂರು ಭಾಗೀರಥಿ ಭಾಸ್ಕರ್. ಗಮಕ- ಲಲಿತಾ ನಂಜುಂಡಯ್ಯ. ಸಂಕೀರ್ಣ- ಕಲ್ಮಾಡಿ ಆಚಾರ್ಯ ಇವರನ್ನು ಆಯ್ಕೆ ಮಾಡಲಾಗಿದ್ದು ಏಪ್ರಿಲ್ 15 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.