ಗುರುವಾರ , ಮೇ 19, 2022
21 °C

ಸಂಗೀತ ಒಡೆದ ಮನಸ್ಸು ಬೆಸೆಯುವ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗೀತ ಒಡೆದ ಮನಸ್ಸು ಬೆಸೆಯುವ ಸೇತುವೆ

ಗುತ್ತಲ: ಸಂಗೀತ ಒಡೆದ ಮನಸ್ಸುಗಳಿಗೆ ಚಿಕಿತ್ಸೆ ನೀಡುವ ಏಕೈಕ ಔಷಧಿಯಾ ಗಿದ್ದು, ಮನಸ್ಸು ಜೋಡಿಸುವ ಸೇತುವೆ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜ ರಾಜ ಕರೂದಿ ಹೇಳಿದರು.ಮಂಗಳವಾರ ಸಮೀಪದ ಹೊಸರಿತ್ತಿ ಯಲ್ಲಿ ನವರಾತ್ರಿ ಪ್ರಯುಕ್ತ ನಡೆದ 112ನೇ ಶರನ್ನವರಾತ್ರಿ ಸಂಗೀತೋತ್ಸವ ಹಾಗೂ ಗುರುಗುದ್ದಲೀಶ್ವರ ಸಂಗೀತ ಪಾಠ ಶಾಲೆಯ 22ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ದೂರದರ್ಶನದ ಪ್ರಭಾವದಿಂದ ಕುಟುಂಬದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ಸಾಮಾ ಜಿಕ ಸ್ವಾಸ್ತ್ಯಕ್ಕೆ ದಕ್ಕೆ ಒದಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ಪ್ರತಿ ವರ್ಷ ನಡೆಯುವ ಶರನ್ನವರಾತ್ರಿ ಸಂಗೀತೊತ್ಸವ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ ಎಂದ ಅವರು ಕಲೆ ಮತ್ತು ಕಲಾವಿದರ ಪೋಷಣೆಗೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಶಾಘ್ಲೀಸಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಪತ್ರಕರ್ತ ವಸಂತಗೌಡ ಪಾಟೀಲ್ ಮಾತನಾಡಿದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊಸರಿತ್ತಿ ಗುದ್ದಲೀಶ್ವರ ಶ್ರೀ ಮಾತ ನಾಡಿ, ಹೊಸರಿತ್ತಿ ನಾಡಿನ ಭಕ್ತರಿಗೆ ಗುದ್ದಲೀಶ್ವರ ಮಠ ಪ್ರತಿ ವರ್ಷ ಸಂಘಟಿಸುವ ಶರನ್ನವರಾತ್ರಿ ಸಂಗೀತೊತ್ಸವ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಬಸವರಾಜ ರಾಜಗುರು, ಪುಟ್ಟರಾಜ ಕವಿ ಗವಾಯಿ ಗಳು ಸೇರಿದಂತೆ ಈ ನಾಡಿನ ಸುಪ್ರಸಿದ್ದ ಸಂಗೀತ ದಿಗ್ಗಜರು ಶರನ್ನವ ರಾತ್ರಿಯ ವೇದಿಕೆ ಹಂಚಿಕೊಂಡಿದ್ದು ಇದರ ಹಿರಿಮೆ ಹೆಚ್ಚಿಸಿದೆ ಎಂದು ಹೇಳಿದರು.ಏಕಪಾತ್ರಾ ಭಿನಯದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಮಧು ಕೋರಿ, ಪುಷ್ಪಾ ಆಡೂರು, ಶಿವಾನಂದ ಕುರುಬರ, ಸುನಿತಾ ಅಂಕಲ ಕೋಟಿ ಹಾಗೂ ಮಂಜುನಾಥ ಓಬಣ್ಣನ ವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ನಂತರ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನೆರವೇರಿತು. ಕಾರ್ಯ ಕ್ರಮದ ಸಮ್ಮುಖವನ್ನು ಗುಡ್ಡದಆನ್ವೇರಿ ಶಿವಯೋಗಿಶ್ವರ ಶ್ರೀ ವಹಿಸಿದ್ದರು. ತೋಟಪ್ಪಣ್ಣ ಹಳ್ಳಿಕೇರಿ ಸ್ವಾಗತಿಸಿದರು. ಸಂಚಾಲಕ ಸಿದ್ದರಾಜ ಕಲಕೋಟಿ ನಿರೂಪಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.