ಸಂಗೀತ ಕಾರಂಜಿ ದುರಸ್ತಿಯಾಗಲಿ

7

ಸಂಗೀತ ಕಾರಂಜಿ ದುರಸ್ತಿಯಾಗಲಿ

Published:
Updated:

ಯಲಹಂಕ ಉಪನಗರದ ಕೆಂಪೇಗೌಡ ಉದ್ಯಾನದಲ್ಲಿರುವ ಸಂಗೀತ ಕಾರಂಜಿಯನ್ನು ದುರಸ್ತಿಗೊಳಿಸಿದ ಕೇವಲ ನಾಲ್ಕೇ ವಾರಗಳಲ್ಲಿ  ಕಾರಂಜಿಗೆ ಅಳವಡಿಸಿದ್ದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಈ ಉದ್ಯಾನಕ್ಕೆ ಕಾವಲುಗಾರರು ಇಲ್ಲ. ಇದೂ ಅಲ್ಲದೆ ಪಾರ್ಕಿಗೆ ಅಳವಡಿಸಿರುವ ಲೈಟ್‌ಗಳು ಒಡೆದು ಹೋಗಿವೆ. ಮತ್ತು ಮಕ್ಕಳ ಆಟದ ಪರಿಕರಗಳೂ ಮಾಯವಾಗಿವೆ. ಕೋಟ್ಯಂತರ ರೂ. ಖರ್ಚು ಮಾಡಿ ಉದ್ಯಾನವನ ಮಾಡಿಸಿರುವ ಬಿ.ಬಿ.ಎಂ.ಪಿ. ಈ ಉದ್ಯಾನಕ್ಕೆ ರಾತ್ರಿ ಕಾವಲುಗಾರರನ್ನು ನೇಮಿಸುವುದು ಒಳಿತು. ಉಪನಗರದಲ್ಲಿರುವ ಈ ಏಕೈಕ ಸಂಗೀತ ಕಾರಂಜಿಯನ್ನು ಬೇಗ ದುರಸ್ತಿಗೊಳಿಸಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry