ಬುಧವಾರ, ನವೆಂಬರ್ 20, 2019
22 °C

ಸಂಗೀತ ಕಾರ್ಯಕ್ರಮ 14ರಂದು

Published:
Updated:

ಬ್ಯಾಡಗಿ: ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಕಾಂತೇಶ ಕಲ್ಯಾಣ ಮಂಟಪದ ಆವರಣದಲ್ಲಿ ಚಂದನ ಟಿವಿ ವಾಹಿನಿ ಕನಕೋತ್ಸವದ ಅಂಗವಾಗಿ `ಮಧುರ ಮಧುರವೀ ಮಂಜುಳಗಾನ' ಕಾರ್ಯ ಕ್ರಮವನ್ನು ಏ.14 ರಂದು ಸಂಜೆ 7 ಗಂಟೆಗೆ ಆಯೋಜಿಸಿದೆ.

ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ನಾಡೋಜ ಮಹೇಶ ಜೋಷಿ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಪಾಲ್ಗೊಳ್ಳುವರು ಎಂದು  ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)