ಸಂಗೀತ ರೂಪಕದ ಸಂದೇಶ

7

ಸಂಗೀತ ರೂಪಕದ ಸಂದೇಶ

Published:
Updated:

ಡಿ.21ರಂದು ಏಷ್ಯಾ ಪೆಸಿಫಿಕ್ ವರ್ಲ್ಡ್ ಶಾಲೆಯ ಮಕ್ಕಳು ಪಾಶ್ಚಾತ್ಯ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಇಡೀ ಜಗತ್ತಿಗೆ ಭರವಸೆಯ ಸಂದೇಶ ದಾಟಿಸಿದರು.ಶಾಲೆಯ ಕಲೆ ಮತ್ತು ಸಂಸ್ಕೃತಿಯ ಭಾಗವಾಗಿ ಪ್ರತಿ ವರ್ಷದ ಕೊನೆಯಲ್ಲಿ ಆಯೋಜಿಸುವ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮೌಢ್ಯ ಕಳಚಿ ವೈಜ್ಞಾನಿಕ ಮನೋಭಾವ ಬೆಳಸುವುದಾಗಿತ್ತು. ಹೊವಾರ್ಡ್ ಲಿಂಡ್ಸೆ ಹಾಗೂ ರಸೆಲ್ ಕೋರ್ಸ್ ಬರೆದ `ಸೌಂಡ್ ಆಫ್ ಮ್ಯೂಸಿಕ್' ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಈ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಇದರಲ್ಲಿ ಶಾಲೆಯ 5ರಿಂದ 10ರ ವರ್ಷ ವಯಸ್ಸಿನ 35 ಮಕ್ಕಳು ಪಾಲ್ಗೊಂಡಿದ್ದರು.ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಏಳು ಜನ ಮಕ್ಕಳು. ತಾಯಿಯಿಲ್ಲದ ಮಕ್ಕಳನ್ನು ನೋಡಿಕೊಳ್ಳಲು ಮರಿಯಾ ಎಂಬಾಕೆಯನ್ನು ಅವರು ನೇಮಿಸುತ್ತಾರೆ. ಶಿಸ್ತು ಜೀವನದ ಪ್ರಮುಖ ಅಂಶ ಎಂದು ಅರಿತ ಆ ವ್ಯಕ್ತಿ ಒಂದೆಡೆಯಾದರೆ, ಅದಕ್ಕೆ ತದ್ವಿರುದ್ಧವಾದ ಮರಿಯಾ ಮಕ್ಕಳೊಂದಿಗೆ ಹಾಡು, ತಮಾಷೆ, ಹರಟೆ ಹಾಗೂ ನಾಟಕದ ಮೂಲಕ ಸಂವಹನ ನಡೆಸುತ್ತಿರುತ್ತಾಳೆ. ಇಂಥ ವಿಷಯವಿದ್ದರೆ ಸಾಕಲ್ಲವೇ ಪ್ರೇಕ್ಷಕರನ್ನು ರಂಜಿಸಲು. ನವಿರು ಕಥೆಯುಳ್ಳ ಈ ಕಾರ್ಯಕ್ರಮವನ್ನು ಮಕ್ಕಳು ತುಂಬಾ ಚೆನ್ನಾಗಿ ನಿರ್ವಹಿಸಿ ಎಲ್ಲರಿಂದ ಶಹಬ್ಬಾಸ್‌ಗಿರಿ ಪಡೆದುಕೊಂಡರು.ನಿರ್ಮಾಣದ ಮೇಲ್ವಿಚಾರಣೆಯನ್ನು ಏಷ್ಯಾ ಪೆಸಿಫಿಕ್ ಶಾಲೆಯ ನಿರ್ದೇಶಕ ಆಂಟೊನಿ ಡಿಸೋಜಾ ವಹಿಸಿದ್ದರು. ಜೇಮ್ಸ ಸ್ಟಿಫೆನಸ್ ಸಂಗೀತವಿತ್ತು. ಚಿತ್ರಕಥೆ ಕ್ಯಾವಿಡರ್ ಅವರದ್ದ. ದರ್ಶಿನಿ ನೃತ್ಯ ನಿರ್ದೇಶನ ಮಾಡಿದ್ದರೆ, ಚರ್ಚ್‌ನ ಗಾಯನ ವೃಂದದ ನೇತೃತ್ವವನ್ನು ರೋಶಿನಿ ವಹಿಸಿಕೊಂಡಿದ್ದರು. ವಸ್ತ್ರವಿನ್ಯಾಸದಲ್ಲಿ ಶಿರಿನ್, ಪ್ರೋಪ್ಸ್ ಹಾಗೂ ಆಗ್ನೆಸ್ ಡಿಸೋಜಾ ಅವರನ್ನೊಳಗೊಂಡ ತಂಡವು ಭಾಗವಹಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry