ಮಂಗಳವಾರ, ಜೂನ್ 22, 2021
22 °C

ಸಂಗೀತ ವಿವಿ ಕಟ್ಟಡ ನವೀಕರಣಕ್ಕೆ ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಪಾರಂಪರಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ನವೀಕರಣಕ್ಕೆ ರೂ.3 ಕೋಟಿ ಅನುದಾನ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ~ ಎಂದು ಮಹಾನಗರಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಇಲ್ಲಿ ತಿಳಿಸಿದರು.ನಗರದ ಲಕ್ಷ್ಮಿಪುರಂನ ಕೆಎಸ್‌ಜಿಎಚ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ನಡೆದ ಪುರಂದರದಾಸ-ತ್ಯಾಗರಾಜ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕೇಂದ್ರ ಸರ್ಕಾರ ಪ್ರಸ್ತಾವನೆಗೆ ಸಹಮತ ಸೂಚಿಸಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಿಶ್ವವಿದ್ಯಾನಿಲಯ ಆವರಣಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿಕೊಡ ಬೇಕು ಎಂದು ವಿವಿ ಮನವಿ ಮಾಡಿದೆ. ಒಂದು ತಿಂಗಳ ಒಳಗೆ ಕಾಂಪೌಂಡ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾ ಗುವುದು~ ಎಂದು ಹೇಳಿದರು.`ಮೈಸೂರು ಪ್ರವಾಸೋದ್ಯಮ, ಸಂಗೀತ, ಕಲೆ, ಸಂಸ್ಕೃತಿ, ಯೋಗ ಇತ್ಯಾದಿ ವಿಶೇಷಗಳನ್ನು ಹೊಂದುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮೈಸೂರಿನಲ್ಲಿ ಕೆಲಸ ಮಾಡುವುದು ಸವಾಲು. ನರ್ಮ್ ಯೋಜನೆ ಜಾರಿಯಲ್ಲಿದ್ದು, ಅಭಿವೃದ್ಧಿ ಕಾಮಗಾರಿ ಗಳು ನಡೆಯುತ್ತಿವೆ. ಅಂಬೆಗಾಲು ಇಡುತ್ತಿರುವ ಸಂಗೀತ ವಿವಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕು~ ಎಂದು ಶುಭ ಹಾರೈಸಿದರು.ತುಮಕೂರು ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಪೀಠದ ಗೌರವ ಪ್ರಾಧ್ಯಾಪಕ ಡಾ.ಎ.ವಿ.ಪ್ರಸನ್ನ ಮಾತ ನಾಡಿ, `ಸಂಗೀತ ವಿ.ವಿ.ಗೂ ನನಗೂ  ಮೊದಲಿನಿಂದಲೂ ನಂಟಿದೆ. ವಿವಿ ಆರಂಭಕ್ಕೆ ಬೈಲಾ ರಚಿಸಲು ಸರ್ಕಾರ ಕೆಲ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಿಕೊಂಡಿತ್ತು. ಆಗ ಅಗತ್ಯ ಸಲಹೆ ಗಳನ್ನು ನೀಡುವ ಜೊತೆಗೆ ಮೈಸೂರಿನಲ್ಲಿ ವಿವಿ ಆರಂಭಿಸುವುದು ಸೂಕ್ತವೆಂದು ಅಭಿಪ್ರಾಯ ತಿಳಿಸಿದ್ದೆ~ ಎಂದು ಅವರು ಹೇಳಿದರು.`ಸಂಗೀತ ವಿವಿಗೆ ಜಾಗದ ಕೊರತೆ ಇದೆ. ಸ್ಥಳ ಹುಡುಕಾಟದಲ್ಲಿ ಸಾಕಷ್ಟು ಶ್ರಮಪಟ್ಟರೂ ಪ್ರಯೋಜನವಾಗಿಲ್ಲ. ಸುಮಾರು 50-60 ಎಕರೆ ಜಾಗ ಅವಶ್ಯವಿದೆ. ಪುರಂದರ-ತ್ಯಾಗರಾಜರ ಕೀರ್ತನೆಗಳನ್ನು ವಿ.ವಿ. ಸಂಗ್ರಹಿಸುವ ಜೊತೆಗೆ ಸಂಗೀತೋತ್ಸವವನ್ನು ದೊಡ್ಡ ಮಟ್ಟದಲ್ಲಿ ಆಚರಿಸಬೇಕು~ ಎಂದು ಸಲಹೆ ನೀಡಿದರು.ಸಂಗೀತ ವಿದ್ವಾನ್ ವಿದ್ಯಾಭೂಷಣ, ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಹನುಮಣ್ಣನಾಯಕ ದೊರೆ ಉಪಸ್ಥಿತರಿದ್ದರು. ಸಂಗೀತ ವಿವಿ ಕುಲಸಚಿವ ಡಾ.ಎಂ.ಬಸವಣ್ಣ ಸ್ವಾಗತಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಹನುಮಣ್ಣನಾಯಕ ದೊರೆ ಅವರು ಹಿಂದೂಸ್ತಾನಿ ಸಂಗೀತ ಕಛೇರಿ ಮತ್ತು ವಿದ್ಯಾಭೂಷಣ ಅವರು ಕರ್ನಾಟಕ ಸಂಗೀತ ಕಛೇರಿ ನಡೆಸಿಕೊಡುವ ಮೂಲಕ ಪ್ರೇಕ್ಷಕರ ಮನಸೂರೆ ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.