ಸಂಗೀತ ವಿವಿ ಲಾಂಛನ ಅನಾವರಣ

7

ಸಂಗೀತ ವಿವಿ ಲಾಂಛನ ಅನಾವರಣ

Published:
Updated:

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಲಾಂಛನ, ಧ್ಯೇಯವಾಕ್ಯ ಮತ್ತು ಅಂತರ್ಜಾಲ ತಾಣವನ್ನು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಶನಿವಾರ ಇಲ್ಲಿ ಅನಾವರಣಗೊಳಿಸಿದರು.ಬಳಿಕ ಮಾತನಾಡಿದ ಅವರು, `ಇತ್ತೀಚಿನ ದಿನಗಳಲ್ಲಿ ವಿಕೃತಿ- ಸಂಸ್ಕೃತಿ ನಡುವಿನ ಅಂತರ ಹೆಚ್ಚಾಗುತ್ತಿದೆ. ವಿ.ವಿಯ ಧ್ಯೇಯವಾಕ್ಯ ಅನಾದಿಗಾನಮೀ ವಿಶ್ವಂ ಎಂಬುದು ಬಹಳಷ್ಟು ಅರ್ಥಪೂರ್ಣವಾಗಿದೆ. ವಿಶ್ವ ಎಲ್ಲವೂ ಸಂಗೀತಮಯವಾಗಿರಲಿ ಎಂಬುದು ಇದರರ್ಥ. ಇಡೀ ವಿಶ್ವ ಸಂಗೀತಮಯವಾದರೆ ದ್ವೇಷ, ಅಸೂಯೆ, ಜಗಳ, ಯುದ್ಧ ಇಲ್ಲದಂತಾಗುತ್ತದೆ. ಅದಕ್ಕೆಂದೇ ನಮ್ಮ ಪೂರ್ವಿಕರು ಸಂಗೀತ ಭಗವಂತನ ಸೃಷ್ಟಿ ಎಂದು ಭಾವಿಸಿದ್ದರು' ಎಂದು ಹೇಳಿದರು.`ಪ್ರಾಚೀನ ಕಾಲದಲ್ಲಿ ಹಾಡಿನಿಂದ ಮಳೆ ಬರಿಸುತ್ತಿದ್ದರಂತೆ. ವಿಕ್ರಮಾದಿತ್ಯ ರಾಜ ದೀಪಕ ರಾಗವನ್ನು ಹಾಡಿ ನಂದಿರುವ ದೀಪಗಳನ್ನು ಬೆಳಗಿಸುತ್ತಿದ್ದ ಎಂದು ಹೇಳಲಾಗುತ್ತದೆ. ಸಂಗೀತಕ್ಕೆ ತನ್ನದೇ ಆದ ಶಕ್ತಿ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಸಂಗೀತ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಿ ಮುಂದಿನ ಪೀಳಿಗೆಗೆ ಶುದ್ಧ ಸಂಗೀತವನ್ನು ಬಳುವಳಿಯಾಗಿ ನೀಡಬೇಕು' ಎಂದು ತಿಳಿಸಿದರು. ಕುಲಪತಿ ಡಾ.ಹನುಮಣ್ಣ ನಾಯಕ ದೊರೆ, ಕುಲಸಚಿವ ಡಾ.ಎಂ.ಬಸವಣ್ಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry