ಸಂಗೀತ ಶಿಕ್ಷಕರ ನೇಮಕಾತಿ ಎಂದು?

7

ಸಂಗೀತ ಶಿಕ್ಷಕರ ನೇಮಕಾತಿ ಎಂದು?

Published:
Updated:

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯ­ದಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಂಗೀತ ಶಿಕ್ಷಕರ ಹುದ್ದೆ ಖಾಲಿ ಇದೆ. ಸರ್ಕಾ­ರ ಈ ಹಿಂದೆ ಮೊರಾರ್ಜಿ ವಸತಿ ಶಾಲೆ­ಗಳಿಗೆ ಸಂಗೀತ ಶಿಕ್ಷಕರ ನೇಮ­ಕಾತಿ ಅರ್ಜಿ ಕರೆದಿತ್ತು. ಆದರೆ, ಅಂದಿನ ನೇಮ­ಕಾತಿ ಆದೇಶದಲ್ಲಿ ಶಿಕ್ಷಕ­ರ (ಸಂಗೀತ) ಅರ್ಹತೆಯನ್ನು ಬಿ. ಮ್ಯೂಸಿಕ್ ಸ್ನಾತಕಪದವಿ ಆಗಿರಬೇಕು ಎಂದು ಸೂಚಿಸಲಾಗಿತ್ತು.ಸಂದ­ರ್ಶನ ಸಂದರ್ಭದಲ್ಲಿ ಸ್ನಾತಕ­ಪದವಿ ಬದಲಾಗಿ ಸ್ನಾತಕೋತ್ತರ ಪದವಿ ­ಪರಿಗಣಿಸಿ ನೇಮಕಾತಿ ಮಾಡಿ­ಕೊಳ್ಳ­­ಲಾಗಿತ್ತು. ಈ ರೀತಿ ವಿದ್ಯಾ­ರ್ಹತೆಯ ಮಾನದಂಡದ ಗೊಂದಲ­ದಿಂದಾಗಿ ಬಿ.ಮ್ಯೂಸಿಕ್ (ಸ್ನಾತಕ­ಪದವಿ) ಪಡೆದ­ವರಿಗೆ ಅನ್ಯಾಯ-­­ವಾದಂತಾಗಿತ್ತು. ಅಂದು ಸ್ನಾತಕ­ಪದವಿ ಪಡೆದ ನೂರಾರು ಪದವಿೋ­ಧರರು ಸ್ನಾತಕೋ­ತ್ತರ ಪದವಿಯನ್ನು ಪೂರೈಸಿ ಇಂದಿಗೂ ಉದ್ಯೋಗವಿಲ್ಲದೇ ಅಲೆದಾಡು­ತ್ತಿ­ದ್ದಾರೆ. ಖಾಲಿ ಇರುವ ಸಂಗೀತ ಶಿಕ್ಷಕರ ಹುದ್ದೆಗಳ ನೇಮಕಾತಿ­ಗಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ಶೀಘ್ರ ನೇಮಕಾತಿ ಮಾಡಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry