ಭಾನುವಾರ, ಏಪ್ರಿಲ್ 11, 2021
31 °C

ಸಂಘಟನೆಗೆ ನಿರಂತರ ಪ್ರಯತ್ನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಂಘಟನೆ ಸುಲಭದ ಕೆಲಸವಲ್ಲ. ಆದರೆ, ನಿರಾಸೆ ಹೊಂದದೆ ನಿರಂತರವಾಗಿ ಪ್ರಯತ್ನ ಮಾಡಿ ಸಂಘಟನೆ ಮಾಡಬೇಕು ಎಂದು ಬಡಗನಾಡು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ರವಿಶಂಕರ್ ನುಡಿದರು.ನಗರದ ಶಾರದಾಭವನದಲ್ಲಿ ಭಾನುವಾರ ನಡೆದ ಬಡಗನಾಡು ಸಂಘದ ಜಿಲ್ಲಾ ಶಾಖೆಯ ದ್ವಿತೀಯವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಬ್ರಾಹ್ಮಣ ಜನಾಂಗದಲ್ಲಿ ಒಗ್ಗಟ್ಟಿನಲ್ಲಿ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಈ ಜನಾಂಗದಲ್ಲಿ ಕಾಲೆಳೆಯುವ ಸಂಸ್ಕೃತಿ ಇಲ್ಲ. ಜವಾಬ್ದಾರಿ ವಹಿಸಿಕೊಂಡ ಮೇಲೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾರೂ ಕಾಲೆಳೆಯುವುದಿಲ್ಲ ಎಂದರು.ಬೆಂಗಳೂರಿನಲ್ಲಿ 1943ರಿಂದ 1970ರವರೆಗೆ ನಿರ್ಮಿಸಲಾಗಿದ್ದ ಬಡಗನಾಡು ಸಂಘದ ಕಟ್ಟಡ ನೆಲಸಮಗೊಳಿಸಿ ಹೊಸ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗುತ್ತಿದೆ. ್ಙ 5 ಸಾವಿರ ದೇಣಿಗೆ ನೀಡುವವರ ಹೆಸರನ್ನು ನಾಮಫಲಕದಲ್ಲಿ ಹಾಕಲಾಗುವುದು. ಕೇವಲ 250-300 ರೂಪಾಯಿಗೆ ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜನಾಂಗದ ಮಕ್ಕಳು ವಿದ್ಯಾರ್ಥಿನಿಲಯದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.ಬಡಗನಾಡು ಜನಾಂಗದ ಇತಿಹಾಸ, ಪರಂಪರೆ ಬಗ್ಗೆ ಯುವಜನಾಂಗಕ್ಕೆ ತಿಳಿಸುವ ಕಾರ್ಯ ನಡೆಯಬೇಕು ಎಂದು ನುಡಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಸತ್ಯನಾರಾಯಣರಾವ್, ಉಪಾಧ್ಯಕ್ಷ ಶಂಕರರಾಂ, ಕಾರ್ಯದರ್ಶಿ ಕೆ.ಬಿ. ಅಚ್ಯುತರಾಮ್, ಸಹಕಾರ್ಯದರ್ಶಿ ಡಿ.ಜಿ. ಪ್ರಾಣೇಶರಾವ್, ಸಂಘಟನಾ ಕಾರ್ಯದರ್ಶಿ ಮೋಹನರಾವ್, ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಹಾಜರಿದ್ದರು.ಆಯ್ಕೆ: ಬಡಗನಾಡು ಸಂಘದ ಜಿಲ್ಲಾ ಶಾಖೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಆರ್.ಎಸ್. ಸತ್ಯನಾರಾಯಣ ರಾವ್  (ಅಧ್ಯಕ್ಷರು), ಎಚ್.ಕೆ. ವಿಜಯಕುಮಾರ್ (ಉಪಾಧ್ಯಕ್ಷರು), ವಾಸುದೇವ್ ದೀಕ್ಷಿತ್ (ಕಾರ್ಯದರ್ಶಿ), ಎ. ಶೇಷಗಿರಿರಾವ್ (ಜಂಟಿ ಕಾರ್ಯದರ್ಶಿ), ಎಸ್. ಗುರುರಾಜ್‌ರಾವ್ (ಸಂಘಟನಾ ಕಾರ್ಯದರ್ಶಿ), ಟಿ.ಎಸ್. ಚಂದ್ರಶೇಖರ್, ರಾಘವೇಂದ್ರರಾವ್, ಎಸ್. ಸುರೇಶ್‌ಬಾಬು, ಟಿ.ಆರ್. ಮಂಜುನಾಥ್, ಉಷಾದೇವಿ, ಮಹಾಲಕ್ಷ್ಮೀ, ಎಚ್.ಎಸ್. ಗುಂಡೂರಾವ್, ಎಚ್.ಕೆ. ನಾಗರಾಜರಾವ್, ಎಸ್. ಶಾಮರಾವ್ (ಎಲ್ಲರೂ ನಿರ್ದೇಶಕರು).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.