ಸಂಘಟನೆಯಿಂದ ಸಮಾಜದ ಕೊರತೆ ದೂರ

7

ಸಂಘಟನೆಯಿಂದ ಸಮಾಜದ ಕೊರತೆ ದೂರ

Published:
Updated:

ಕೊಕ್ಕರ್ಣೆ (ಬ್ರಹ್ಮಾವರ): `ಮಾನವೀಯತೆ ಬೆಳೆಸಿಕೊಂಡು ಸಮಾಜದ ಕುಂದು ಕೊರತೆಗಳನ್ನು ದೂರಮಾಡಲು ಎಲ್ಲರೂ ಸಂಘಟಿತರಾಗಬೇಕು~ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.ಕೊಕ್ಕರ್ಣೆಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸೇವಾ ಸಂಘದ ಪ್ರೇಮ ಬಾಬು ಪೂಜಾರಿ ರಂಗಮಂದಿರ ಹಾಗೂ ನಾರಾಯಣಗುರು ಸಭಾಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ವಿಧವೆಯರ ಅಗೌರವ ಸಲ್ಲದು. ಮಹಿಳೆಯರ ಮೇಲಿನ ಗೌರವ ಶಾಶ್ವತವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಧರ್ಮ~ ಎಂದರು.ಕಾರ್ಕಳ ಬೊಲ್ಯೊಟ್ಟು ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕ ಕೆ.ರಘುಪತಿ ಭಟ್ ಅನ್ನಪೂರ್ಣ ಭೋಜನಗೃಹ ಉದ್ಘಾಟಿಸಿದರು.ಮೈಸೂರು ಟೊಬ್ಯಾಕೋ ಕಂಪೆನಿಯ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮುಲ್ಕಿಯ ಹರಿಕೃಷ್ಣ ಬಂಟ್ವಾಳ, ಮಂಗಳೂರಿನ ಡಿ.ಡಿ ಕಟ್ಟೇಮಾರ್, ಮಲ್ಪೆ ರಾಘವೇಂದ್ರ, ಸಂತೋಷ್ ಕೋಟ್ಯಾನ್, ಕೊಕ್ಕರ್ಣೆಯ ಉದ್ಯಮಿ ಕೆ.ಬಾಲಕೃಷ್ಣ ಹೆಗ್ಡೆ, ಜಿ.ಪಂ.ಸದಸ್ಯೆ ಗೋಪಿ ಕೆ ನಾಯ್ಕ, ಕೊಕ್ಕರ್ಣೆ ಗ್ರಾ.ಪಂ.ಅಧ್ಯಕ್ಷೆ ದೇವಕಿ ಎಸ್ ಕೋಟ್ಯಾನ್, ಕಾಡೂರು ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಮಲ್ಪೆಯ ಗೋಪಾಲ ಸಿ ಬಂಗೇರ, ಕಟ್ಟಡ ಸಮಿತಿಯ ಅಧ್ಯಕ್ಷ ಕೆ.ವೆಂಕಟೇಶ ಸುವರ್ಣ, ಕೆ.ಸಂಜೀವ ಮಾಸ್ಟರ್, ನಾರಾಯಣಗುರು ಮಹಿಳಾ ವೇದಿಕೆಯ ಬೇಬಿ ಎಸ್.ಪೂಜಾರಿ, ಲಲಿತಾ ವಿ ಸುವರ್ಣ, ಯುವವೇದಿಕೆಯ ಜಯರಾಮ ಪೂಜಾರಿ, ಗಣಪ ಪೂಜಾರಿ, ಸುರೇಶ್ಚಂದ್ರ ಬಾಬು ಮತ್ತಿತರರು ಇದ್ದರು. ಸಮಾರಂಭದಲ್ಲಿ ಕೊಕ್ಕರ್ಣೆಯ ನಿವೃತ್ತ ಶಿಕ್ಷಕ ಹಾಗೂ ನಾರಾಯಣ ಗುರುಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಸಂಜೀವ ಮಾಸ್ಟರ್ ಮತ್ತು ಕಾಡೂರು ಸಂಜಯ್ ದಯಾನಂದ ಅವರನ್ನು ಸನ್ಮಾನಿಸಲಾಯಿತು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಇದಕ್ಕೂ ಮುನ್ನ ಕಾಡೂರು ಬಸ್‌ನಿಲ್ದಾಣದಿಂದ ಕೊಕ್ಕರ್ಣೆ ಶಿವಗಿರಿವರೆಗೆ ಪುರಮೆರವಣಿಗೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry