ಸಂಘಟಿತರಾಗಲು ರೈತರಿಗೆ ಸಲಹೆ

7

ಸಂಘಟಿತರಾಗಲು ರೈತರಿಗೆ ಸಲಹೆ

Published:
Updated:

ಕುಶಾಲನಗರ: ರೈತರು ಸಂಘಟಿತರಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚಿತ್ರಕಲಾ ರಾಜೇಶ್ ಭಾನುವಾರ ಹೇಳಿದರು.ಇಲ್ಲಿಗೆ ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಲ್ಲುಬೆಟ್ಟದಲ್ಲಿ ರೈತ ಸಂಘದ 3ನೇ  ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ವತಿಯಿಂದ ರೈತರಿಗೆ ದೊರಕುವ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದರು.ಕೂಡಿಗೆ ಸಾವಯವ ಕಷಿ ರೈತ ಸೇವಾ ಕೇಂದ್ರದ ಸಂಚಾಲಕ ಗೋವಿಂದರಾಜ್‌ದಾಸ್ ಮಾತನಾಡಿ, ರೈತರು ಸಾವಯವ ಕಷಿಗೆ ಹೆಚ್ಚಿನ ಒತ್ತು ನೀಡಬೇಕು. ಹಳ್ಳಿಯಲ್ಲಿ ಕೆಲವು ರೈತರು ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದರ ವಿರುದ್ಧ ರೈತ ಸಂಘ ಜಾಗೃತಿ ಮೂಡಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ಅಧ್ಯಕ್ಷ ಮಟ್ಟನ ಅಪ್ಪಾಜಿ ಮಾತನಾಡಿ, ಈ ಭಾಗದಲ್ಲಿ ಬೆಳೆಗಳು ಕಾಡಾನೆಗಳ ಪಾಲಾಗುತ್ತಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಕಾಡಾನೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದರು.ಕುಶಾಲನಗರ ಹೋಬಳಿ ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ ಮಾಧವರಾವ್ ಕೃಷಿ ಇಲಾಖೆಯ ಸೌಲಭ್ಯ ಕುರಿತು ರೈತರಿಗೆ ಮಾಹಿತಿ ನೀಡಿದರು.ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಿರ್ವಾಣಪ್ಪ ಮಾತನಾಡಿದರು. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಜೇನುಕಲ್ಲುಬೆಟ್ಟದ ಪ್ರಗತಿಪರ ಕೃಷಿಕ ಆರ್.ಕೆ.ಜವರೇಗೌಡ ಅವರನ್ನು ಕೂಡಿಗೆ ಸಾವಯವ ಕೃಷಿ ರೈತ ಸೇವಾ ಕೇಂದ್ರದ ವತಿಯಿಂದ  ಸನ್ಮಾನಿಸಲಾಯಿತು.ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟಗೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಕುಶಾಲನಗರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಶ್ ಸಾವಯವ ಕೃಷಿ ಸೇವಾ ಕೇಂದ್ರದ ಅಧಿಕಾರಿ ಮಲ್ಲೆೀಶ್, ರೈತ ಸಂಘದ ಕಾರ್ಯದರ್ಶಿ ಎಚ್.ಆರ್.ಚಂದ್ರ, ಖಜಾಂಚಿ ಎ.ಡಿ.ಯೋಗಾನಂದ, ನಿರ್ದೇಶಕರಾದ ಮಲ್ಲೆೀಗೌಡ, ನಾಗೇಂದ್ರ, ಕೆ.ಎ.ಆದಿಲ್ ಪಾಷಾ, ಬಿಜು, ಎಸ್.ಕೆ.ಮಂಜುನಾಥ್, ಕೂಡಿಗೆ ಗ್ರಾಮಪಂಚಾಯಿತಿ ಸದಸ್ಯ ಜಿ.ಪಿ.ಚಂದ್ರಶೇಖರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry