ಬುಧವಾರ, ಜೂನ್ 23, 2021
29 °C

ಸಂಘಟಿತರಾಗಿ ಸೌಲಭ್ಯ ಪಡೆಯಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನೇಕಾರರು ಸಂಘಟಿತರಾಗಿ ಸಹಕಾರ ಸಂಘ ಸ್ಥಾಪಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಚೌಡಪ್ಪ ಹೇಳಿದರು.ಇಲ್ಲಿಗೆ ಸಮೀಪದ ಶೀಗೆಹಳ್ಳಿಯಲ್ಲಿ 60 ನೇಕಾರರ ಮಕ್ಕಳಿಗೆ ಸೋಮವಾರ ಜವಳಿ ಇಲಾಖೆಯಿಂದ ನೀಡಿದ ವಿದ್ಯಾರ್ಥಿ ವೇತನದ ಚೆಕ್ ವಿತರಿಸಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಚಿಕ್ಕಮುನಿಯಪ್ಪ ಮಾತನಾಡಿ ನೇಕಾರರಿಗೆ ತಲುಪಬೇಕಾದ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ವೇದಿಕೆ ಪ್ರಧಾನ ಕಾರ್ಯದರ್ಶಿ ಎ.ಪ್ರಕಾಶ್, ಶೀಗೆಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚನ್ನಪ್ಪ, ಬೆಂಗಳೂರು ಪೂರ್ವ ತಾಲ್ಲೂಕು ತೊಗಟವೀರ ಸಂಘದ ಅಧ್ಯಕ್ಷ ಸೋಮಶೇಖರ್ ಮಾತನಾಡಿದರು.ಮುಖಂಡ ರಾಮಕೃಷ್ಣಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಎಸ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣಕೆರೆ ಗ್ರಾಮದಲ್ಲಿ: ತಾಲ್ಲೂಕಿನ ನಾರಾಯಣಕೆರೆ ಗ್ರಾಮದಲ್ಲಿ ವೀರಾಂಜನೇಯ ವಿದ್ಯುತ್‌ಮಗ್ಗ ನೇಕಾರರ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ 32 ನೇಕಾರರ ಮಕ್ಕಳಿಗೆ ಗ್ರಾಮ ಪಂಚಾಯ್ತಿ ಸದಸ್ಯರಾದ ಪಟೇಲ್ ವೆಂಕಟಾಚಲರೆಡ್ಡಿ, ತಲವಾರ ರಾಜಪ್ಪ ವಿದ್ಯಾರ್ಥಿ ವೇತನದ ಚೆಕ್ ವಿತರಣೆ ಮಾಡಿದರು.ಸಂಘದ ಮುಖ್ಯಸ್ಥರಾದ ಎಂ.ನಾಗಪ್ಪ, ಜಿ.ಗೋವಿಂದರಾಜು, ಮುಖಂಡರಾದ ಎಂ.ಜಗದೀಶ್,ಬಾಲರೆಡ್ಡಿ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.