ಸಂಘಟಿತ ಹೋರಾಟಕ್ಕೆ ಸಿಂಧ್ಯಾ ಕರೆ

7

ಸಂಘಟಿತ ಹೋರಾಟಕ್ಕೆ ಸಿಂಧ್ಯಾ ಕರೆ

Published:
Updated:

ಹಳಿಯಾಳ: ರಾಜ್ಯದ ಅವಿಭಾಜ್ಯ ಅಂಗ ವಾಗಿರುವ ಮರಾಠಿಗರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ವಾಗಿ ಮುಂದೆ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಮರಾಠಿಗರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದು  ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ ಕರೆ ನೀಡಿದರು.ಸ್ಥಳೀಯ ಗ್ರಾಮದೇವಿ ಜಾತ್ರಾ ಮೈದಾನದಲ್ಲಿ ಕ್ಷತ್ರೀಯ ಮರಾಠಾ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಜನಗಣತಿ, ಮಕ್ಕಳ ದಾಖಲಾತಿ ಮಾಡಿಸುವಾಗ ಹಾಗೂ ಸರ್ಕಾರಿ ದಾಖಲೆಗಳನ್ನು ಬರೆಸುವಾಗ ಕ್ಷತ್ರಿಯ ಮರಾಠಾ ಎಂದು ನಮೂದಿಸಿರಿ. ಶಿವಾಜಿ ಮಹಾರಾಜರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ದೇಶ ರಕ್ಷಣೆಯಲ್ಲಿ ಮರಾಠಿಗರ ಪಾತ್ರ ಬಹಳಷ್ಟು ಇದೆ. ಅಂತಹ ಮರಾಠಿಗರು ಈಗ ಸಂಕಟದಲ್ಲಿ ಇದ್ದಾರೆ.ಮರಾಠಿ ಗರನ್ನು ಹಿಂದುಳಿದ ವರ್ಗ, ಪ್ರವರ್ಗ 2ಎ ಗೆ ಸೇರಿಸುವ ಉದ್ದೇಶದಿಂದ ಬೆಂಗಳೂರಿನ ಮರಾಠಾ ಹಾಸ್ಟೇಲ್ ಆವರಣದಲ್ಲಿ ನವೆಂಬರ 9 ರಂದು ರಾಜ್ಯ ಕ್ಷತ್ರೀಯ ಮರಾಠಾ ಮುಖಂಡರುಗಳ ಬ್ರಹತ್ ಸಮಾವೇಶ ವನ್ನು  ಒಕ್ಕೂಟದಿಂದ ಎರ್ಪಡಿಸಲಾಗಿದೆ. ಅಂದು ರಾಜ್ಯದ ಮುಖ್ಯಮಂತ್ರಿ ಗಳು  ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಯವರಿಗೆ ಅಂದು ಮರಾಠಿಗರಿಂದ ಮನವಿ ಸಲ್ಲಿಸಲಾಗುವುದು ಎಂದರು.ಕಲಘಟಗಿ ಶಾಸಕರಾದ ಸಂತೋಷ ಲಾಡ ಮಾತನಾಡಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳಬೇಕು. ಮರಾಠಾ ಸಮಾಜ ಎಲ್ಲ ಕ್ಷೇತ್ರದಲ್ಲಿಯೂ ಬಹಳಷ್ಟು ಹಿಂದೆ ಇದೆ. ಯುವಕರು ಸಂಘಟಿತರಾಗಬೇಕು. ಹಳಿಯಾಳದಲ್ಲಿ ಮರಾಠಾ ಸಮಾಜದಿಂದ 15-20 ಎಕರೆ ಜಮೀನು ಪಡೆದುಕೊಂಡಲ್ಲಿ ಶೈಕ್ಷಣಿಕ ಹಾಗೂ ಇನ್ನಿತರ ವಿವಿಧ ಅಭಿವೃದ್ದಿಗಾಗಿ 25 ಲಕ್ಷ ರೂಪಾಯಿ ಸಮಾಜಕ್ಕೆ ನೀಡುವುದಾಗಿ ಹಾಗೂ ಈಗಾಗಲೇ ಜೀಜಾ ಮಾತಾ ಕ್ಷತ್ರೀಯ ಮಹಿಳಾ ಮಂಡಳಕ್ಕೆ ಸಾಮಾಜಿಕ ಕಾರ್ಯಕ್ಕೆ ತೆರಳಲು ಟ್ರ್ಯಾಕ್ಸ್ ವಾಹನವನ್ನು 60 ದಿನದೊಳಗಾಗಿ ತಲುಪಿಸಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯರಾದ ಎಸ್‌ಎಲ್. ಘೋಟ್ನೇಕರ ಮಾತನಾಡಿ ಮರಾಠಿಗರು ಪ್ರಮಾಣಿಕತೆಯಿಂದ ಕೆಲಸ ಕಾರ್ಯ ನಿರ್ವಹಿಸಬೇಕು. ಸಮಾಜಕ್ಕೆ ಬಂದಂತಹ ಹಣ ಯೋಗ್ಯ ರೀತಿಯಿಂದ ಉಪಯೋಗಿಸಿಕೊಳ್ಳಿರಿ. ದ್ವೇಷವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಸಮಾಜ ಕ್ಕೊಸ್ಕರ ದುಡಿಯಿರಿ ಎಂದರು.ಕರ್ನಾಟಕ ಕ್ಷತ್ರೀಯ ಮರಾಠಾ ಮಹಾ ಒಕ್ಕೂಟ ಬೆಂಗಳೂರಿನ ಅಧ್ಯಕ್ಷರಾದ ವಿ.ಎಸ್.ಶ್ಯಾಮಸುಂದರ ಗಾಯಕವಾಡ, ಜೀಜಾ ಮಾತಾ ಕ್ಷತ್ರೀಯ ಮರಾಠಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲ್ಕರ, ಮಾಜಿ ಸಚಿವ ಪಿ.ಎಸ್.ರಾಣೆ ಮತ್ತಿತರರು ಸಮಾರಂಭದಲ್ಲಿ ಮಾತನಾಡಿದರು.ವೇದಿಕೆ ಮೇಲೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವಿ.ಆರ್. ಚವಾಣ, ಟಿ.ಆರ್.ವೆಂಕಟ್‌ರಾವ ಚವಾಣ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಜಿಲ್ಲಾಧ್ಯಕ್ಷ ಉಡಚಪ್ಪಾ ಬೊಬಾಟಿ. ಬಿ.ಡಿ. ಚೌಗುಲೆ, ಶಂಕರ ಬೆಳಗಾಂವಕರ, ಮಲ್ಲಾರಿ ಘಾಡಿ, ನಾಗೇಂದ್ರ ಜಿವೋಜಿ, ಪ್ರಕಾಶ ಫಾಕ್ರಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry