ಸೋಮವಾರ, ಮೇ 23, 2022
20 °C

ಸಂಘಟಿತ ಹೋರಾಟ ಅಗತ್ಯ: ಜಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ: ಸರ್ಕಾರ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ದಾಳಿ ಮಾಡಿ ರುವುದರಿಂದ ನೈಸರ್ಗಿಕ ಸಂಪನ್ಮೂಲ ಗಳನ್ನು ನಂಬಿಕೊಂಡಿರುವ ಸಮು ದಾಯಗಳ ಹಕ್ಕುಗಳ ಉಲ್ಲಂಘನೆ ಯಾಗುತ್ತಿದೆ ಎಂದು ಗಿರಿಜನರ ಮುಖಂಡ ಜಯಪ್ಪ ತಿಳಿಸಿದರು.  ತಾಲ್ಲೂಕಿನ ಆಲದಕಟ್ಟೆ ಗಿರಿಜನರ ಹಾಡಿಯಲ್ಲಿ ಶನಿವಾರ ನಡೆದ ಸಮುದಾಯ ಹಕ್ಕುಗಳ ಸಂಗಮ ಕಾರ್ಯಕ್ರಮದ ಕಾಲ್ನಡಿಗೆ ಜಾಥಾದ ಜ್ಯೋತಿಯನ್ನು ಉದ್ಘಾಟಿಸಿ ಮಾತನಾಡಿದರು.ಅರಣ್ಯಗಳು ಹಾಗೂ ಸಮು ದಾಯದ ಹಕ್ಕುಗಳನ್ನು ರಕ್ಷಿಸಿಕೊಳ್ಳು ವಲ್ಲಿ ನಾವಿಂದು ಹೊಸದೊಂದು ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಿನಲ್ಲಿ ಇದ್ದೇವೆ. ನಮ್ಮ ನೀರಿನ ಮೂಲ, ಭೂಮಿ, ಅರಣ್ಯ ಹಾಗೂ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಿಕೊಳ್ಳು ಸಂಘಟಿತ ಹೋರಾಟ ಅಗತ್ಯವಿದ್ದು ಇದಕ್ಕಾಗಿ ಸಮುದಾಯ ಹಕ್ಕುಗಳ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ದೇಶದಾದ್ಯಂತ ಇರುವ ಆದಿವಾಸಿ, ಮೀನುಗಾರ, ದಲಿತ, ಅರಣ್ಯ ಕಾರ್ಮಿಕರ, ಮಹಿಳೆ ಮತ್ತು ಮಕ್ಕಳ ಸಂಘಟನೆಗಳ ನಡುವೆ ವಿಶಾಲವಾದ ಸಂಪರ್ಕ ಏರ್ಪಡಿಸುವ ಉದ್ದೇಶದಿಂದ ಸಮುದಾಯ ಹಕ್ಕುಗಳ ಸಂಗಮ ಕಾರ್ಯಕ್ರಮವನ್ನು ಕುಶಾಲನಗರದ ಆರ್‌ಎಂಸಿ ಮೈದಾನದಲ್ಲಿ  ಅ. 9, 10, 11 ಮತ್ತು 12 ರಂದು 4 ದಿನಗಳ ಕಾಲ ಏರ್ಪಡಿಸಲಾಗಿದೆ ಎಂದರು.ತಾಲ್ಲೂಕಿನ ಹಲವು ಹಾಡಿಗಳಿಂದ 500ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, 2 ದಿನಗಳ ಕಾಲ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದ್ದು, ಹಂದಿಗುಡ್ಡ ಕಾವಲನ್ನು ತಲುಪಿ ನಂತರ ಕುಶಾಲನಗರ ತಲುಪಲಿದೆ ಎಂದು ತಿಳಿಸಿದರು.ಆಲದಕಟ್ಟೆ ಹಾಡಿ ಮುಖಂಡ ಲಿಂಗಯ್ಯ, ತಾಲ್ಲೂಕು ಬುಡಕಟ್ಟು ಕಕರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ಹಾಡಿಯ ಮುಖಂಡರಾದ ಜಾನಕಮ್ಮ, ಅಕ್ಕಮ್ಮ, ಸಿದ್ದು, ರಾಜು, ಜಯಪ್ಪ, ಶಾಂತರಾಜು, ನಿಂಗಯ್ಯ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.