ಮಂಗಳವಾರ, ಮೇ 24, 2022
28 °C

ಸಂಘದ ಅಧ್ಯಕ್ಷ ಸಿ.ಮುನಿಸ್ವಾಮಿ ಹೇಳಿಕೆ :ಪೌರಕಾರ್ಮಿಕರಿಗೆ ದೊರಕದ ನಿವೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಿಬಿಎಂಪಿ ವತಿಯಿಂದ ನೀಡಬೇಕಾಗಿದ್ದ ನಿವೇಶನಗಳು ಇನ್ನು ಪೌರಕಾರ್ಮಿಕರಿಗೆ ತಲುಪಿಲ್ಲ~ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಮುನಿಸ್ವಾಮಿ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `44 ನೇ ವಾರ್ಡಿನ ಹೊಸ ವಾರ್ಡ್ ನಂ. 137 ರಲ್ಲಿ ರಾಯಪುರಂ, ವೆಂಕಟಸ್ವಾಮಿ ಗಾರ್ಡನ್ ಈ ಸ್ಥಳಗಳಲ್ಲಿ ಇನ್ನೂ 13 ಜನಕ್ಕೆ ನಿವೇಶನ ನೀಡುವುದು ಬಾಕಿ ಇದೆ~ ಎಂದು ಹೇಳಿದರು.`ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾದಾಗ 44 ನೇ ವಾರ್ಡ್‌ನ 90 ಜನ ಪೌರ ಕಾರ್ಮಿಕರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ್ದರು. ದೀಪಾಂಜಲಿನಗರ, ಮೈಸೂರು ರಸ್ತೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ನ್ಯಾಯಾಲಯದಲ್ಲಿ ತಡೆಯಾಜ್ಞೆ ಆದೇಶವಿದೆಯೆಂದು ರದ್ದು ಮಾಡಿದ್ದರು~ ಎಂದರು.`ಹಳೆ ಗುಡ್ಡದಹಳ್ಳಿ ಬಸ್ ನಿಲ್ದಾಣದ ಎದುರುಗಡೆ ಖಾಲಿ ಜಾಗವನ್ನು ಪೌರ ಕಾರ್ಮಿಕರಿಗೆ ಮಂಜೂರು ಮಾಡಬೇಕೆಂದು ತಹಶೀಲ್ದಾರ್ ಅವರಿಗೆ ಅಧೀನ ಕಾರ್ಯದರ್ಶಿ ಎಸ್.ಎನ್. ಕೃಷ್ಣಕುಮಾರ್ ಪತ್ರವನ್ನು ಬರೆದಿದ್ದರು. ಮತ್ತೆ ಅಧಿಕಾರಿಗಳಿಗೆ ಸರ್ವೇ ಮಾಡುವಂತೆ ತಿಳಿಸಲಾಗಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ~ ಎಂದರು.`ಬಿಬಿಎಂಪಿಯ ಜಗರಯ್ಯನಕೆರೆ ವಸತಿ ಗೃಹಗಳು, ಮಾರೇನಹಳ್ಳಿ, ಕೋಡಿಹಳ್ಳಿ, ಶಾಂತಿನಗರ ಎಲ್ಲ ಕಡೆಯು ನಿವೇಶನಗಳ್ನು ಹಂಚಿದ್ದಾರೆ. ಆದರೆ, ಇನ್ನು 13 ಜನಕ್ಕೆ ಮಾತ್ರ ಬಾಕಿ ಇಟ್ಟುಕೊಂಡು ಅವರಿಗೆ ಅನ್ಯಾಯ ಮಾಡಲಾಗುತ್ತಿದೆ~ ಎಂದು ಹೇಳಿದರು.`ನಿರ್ವಸಿತರಾಗಿರುವ 13 ಜನ ಪೌರ ಕಾರ್ಮಿಕರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು~ ಎಂದು ಒತ್ತಾಯಿಸಿದರು.`ಜೂನ್ 20 ರಂದು ಮುಖ್ಯಮಂತ್ರಿಯವರ ಮನೆಯ ಮುಂದೆ ಧರಣಿ ಮತ್ತು ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದು~ ಎಂದು ಹೇಳಿದರು.ಗೋಷ್ಠಿಯಲ್ಲಿ ಉಪಾಧ್ಯಕ್ಷ ಕುಳ್ಳಾಯಪ್ಪ ಮೇಸ್ತ್ರಿ, ಗೌರವ ಅಧ್ಯಕ್ಷ ನರಸಿಂಹ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.