ಸಂಘದ ಬಲವರ್ಧನೆಗೆ ಸಪ್ತಸೂತ್ರದ ಸಲಹೆ

7

ಸಂಘದ ಬಲವರ್ಧನೆಗೆ ಸಪ್ತಸೂತ್ರದ ಸಲಹೆ

Published:
Updated:
ಸಂಘದ ಬಲವರ್ಧನೆಗೆ ಸಪ್ತಸೂತ್ರದ ಸಲಹೆ

ಚಿತ್ರದುರ್ಗ: ಸಪ್ತಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಕಾರ ಸಂಘಗಳನ್ನು ಬಲಪಡಿಸಬೇಕು ಎಂದು ಶಾಸಕ ಎಸ್.ಕೆ. ಬಸವರಾಜನ್ ಕರೆ ನೀಡಿದರು.ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಚಿತ್ರದುರ್ಗ ತಾಲ್ಲೂಕಿನ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ 58ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಸಹಕಾರ ಪ್ರಜಾಪ್ರಭುತ್ವ ನಾಯಕತ್ವ ಮತ್ತು ಸ್ವಾವಲಂಬಿ ದಿನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಸಹಕಾರಿ ಸಂಘಗಳು ಕೇವಲ ಒಂದು ಜಾತಿ, ಪಕ್ಷ, ವರ್ಗಕ್ಕೆ ಸೀಮಿತವಾಗಬಾರದು. ಸಹಕಾರಿ ಸಂಘಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ವಾಣಿಜ್ಯ ಬ್ಯಾಂಕ್‌ಗಳ ಮೇಲೆ ಅವಲಂಬನೆಯಾಗಬೇಕಾಗಿಲ್ಲ.  ಸಂಘದ ಪದಾಧಿಕಾರಿಗಳು, ಕಾರ್ಯದರ್ಶಿಗಳು, ಅಧಿಕಾರಿಗಳು ಹೇಳುವ ಮಾತನ್ನು ಕೇಳದೆ ಸ್ವತಂತ್ರವಾಗಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.ಭಾರತದಂತಹ ಬಡ ದೇಶಕ್ಕೆ ಸಹಕಾರ ಸಂಘಗಳು ಅತ್ಯಗತ್ಯವಾಗಿವೆ. ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಿಂದ ಮಾತ್ರ ರೈತರು, ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ದೊರೆಯುತ್ತಿದೆ.

ಇನ್ನೂ ನೂರಾರು ವರ್ಷ ಸಹಕಾರ ಸಂಘಗಳ ಅಗತ್ಯ ದೇಶಕ್ಕಿದೆ ಎಂದರು. ಜಿಲ್ಲೆಯಲ್ಲಿ 3-4 ಸಹಕಾರಿ ಸಂಘಗಳು, ಬ್ಯಾಂಕ್‌ಗಳು ಮುಳುಗಿ ಹೋಗಿವೆ. ಬ್ಯಾಂಕ್ ಪದಾಧಿಕಾರಿಗಳ, ನೌಕರರ ಅಪ್ರಮಾಣಿಕತೆ ಇದಕ್ಕೆ ಕಾರಣ. ಇದರಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಈ ರೀತಿ ಘಟನೆಗಳಿಂದ ಸಾರ್ವಜನಿಕರು ಹಣ ಹೂಡಲು ಹಿಂಜರಿಯುತ್ತಾರೆ. ಸಹಕಾರಿ ಸಂಸ್ಥೆಗಳ ಮೇಲೆ ಅನುಮಾನ ಮೂಡದಂತೆ ಕಾರ್ಯನಿರ್ವಹಿಸಬೇಕು. ಎಲ್ಲ ಗೊಂದಲಗಳನ್ನು ನಿವಾರಿಸಬೇಕು ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಮಾತನಾಡಿ, ಸಹಕಾರಿ ಸಂಘಗಳು ರೈತರಿಗೆ ಮತ್ತು ಬಡವರಿಗೆ ಆರ್ಥಿಕವಾಗಿ ಪ್ರಗತಿ ಹೊಂದಲು ಸೌಲಭ್ಯಗಳನ್ನು ಕಲ್ಪಿಸಬೇಕು. ಈ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು ಎಂದರು.ಠೇವಣಿ, ಪಿಗ್ಮಿ ಸಂಗ್ರಹಿಸುವುದು ಮತ್ತು  ಕಾಯಂ ಆದಾಯದ ಮೂಲಕ ಸಹಕಾರ ಸಂಸ್ಥೆಗಳು ಸ್ವಾಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.ಸಹಕಾರ ಸಂಘಗಳ ಉಪ ನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ 6 ಲಕ್ಷ ಸಹಕಾರ ಸಂಸ್ಥೆಗಳಿದ್ದು, 28 ಕೋಟಿ ಸದಸ್ಯರನ್ನು ಹೊಂದಲಾಗಿದೆ. ಈ ಸಂಸ್ಥೆಗಳಲ್ಲಿ ್ಙ 2 ಲಕ್ಷ ಕೋಟಿ ಬಂಡವಾಳ ಹೂಡಲಾಗಿದೆ ಎಂದು ವಿವರಿಸಿದರು.ಕೆಎಂಎಫ್ ಅಧ್ಯಕ್ಷ ಜಿ.ಪಿ. ರೇವಣಸಿದ್ದಪ್ಪ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಈ. ಅಜ್ಜಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಬಿ. ತೀರ್ಥಪ್ಪ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವಿ. ಮಂಜುನಾಥ್, ನಿರ್ದೇಶಕರಾದ ಕೆ.ಆರ್. ರಾಜು, ಎಚ್.ಎಂ. ಮಂಜುನಾಥಪ್ಪ, ಎಸ್.ಆರ್. ಗಿರೀಶ್, ಎಚ್. ಸಿದ್ದಪ್ಪ, ಜಿಂಕಲ್ ಬಸವರಾಜ್, ಎಚ್. ರಾಮಪ್ಪ, ಎಚ್.ಎಂ. ದ್ಯಾಮಣ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ.ವಿ. ಬಸವರಾಜ್, ಶಿವಮೊಗ್ಗ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ತಿಪ್ಪೇಸ್ವಾಮಿ, ವಸೂಲಾಧಿಕಾರಿ ಜಿ. ಓಬಾನಾಯಕ್, ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಸಿ. ಮಹಾರುದ್ರಪ್ಪ ಉಪಸ್ಥಿತರಿದ್ದರು.ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಿ. ಕುಬೇರಪ್ಪ ಸ್ವಾಗತಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry