ಸಂಚಾರಕ್ಕೆ ತೀವ್ರ ತೊಂದರೆ

ಗುರುವಾರ , ಜೂಲೈ 18, 2019
22 °C

ಸಂಚಾರಕ್ಕೆ ತೀವ್ರ ತೊಂದರೆ

Published:
Updated:

ಹುಣಸಗಿ: ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಇಲ್ಲಿನ ಮುಖ್ಯ ರಸ್ತೆಯಲ್ಲಿ ನೀರು ತುಂಬಿ   ನಾರುತ್ತಿದೆ. ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳು ಸರ್ಕಸ್ ಮಾಡುವಂತೆ  ರಸ್ತೆಯ ಮೇಲೆ ಚಲಿಸುತ್ತಿವೆ.ದೊಡ್ಡ ಹೊಂಡಗಳಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸ್ಥಗಿತವಾಗಿದ್ದರಿಂದ ತಿರುಗಾಡಲು ರಸ್ತೆಯೇ ಇಲ್ಲ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ನಮ್ಮ ಹುಣಸಗಿ ರೋಡ್ ಹಿಂಗೆ ರೀ ಸಾಹೇಬರ ಮೂಗು ಮುಚ್ಚಿಕೊಂಡು ತಿರುಗಾಡ ಬೇಕರೀ ಎಂದು ಮಹಿಳೆಯೊಬ್ಬರು ಅಸಹಾಯಕತೆಯಿಂದ ಹೇಳುತ್ತಾರೆ. ರಸ್ತೆ ಪಕ್ಕದಲ್ಲಿಯೇ ಹಣ್ಣು ಕಾಯಿ ಪಲ್ಲೆ ಅಂಗಡಿಗಳು ಇದ್ದುದರಿಂದ ಗ್ರಾಹಕರು ನಿತ್ಯ ತೊಂದರೆ ಅನುಭವಿಸುತ್ತಿರುವದು ಸಾಮಾನ್ಯವಾಗಿದೆ.ಕಾಳಿಕಾ ದೇವಸ್ಥಾನದ ಬಳಿ ಸುಮಾರು ಮೂರು ಅಡಿಗೂ ಅಧಿಕವಾದ ತಗ್ಗುಗಳು ಬ್ದ್ದಿದಿವೆ. ಈ ಮುಖ್ಯ ರಸ್ತೆ ಮೇಲಿನ ಹೊಂಡಗಳನ್ನು ಮುಚ್ಚಲು ಸಂಬಂಧಪಟ್ಟವರು ಇನ್ನೂ ತಲೆಕಡೆಸಿಕೊಂಡಿಲ್ಲ ಇನ್ನು ಮುಂದಾದರೂ ಮುಖ್ಯ ರಸ್ತೆ ಹೊಂಡಗಳನ್ನು ಮುಚ್ಚಲು ಮುಂದಾಗುವರೇ ಎಂದು ಕಾದು ನೋಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry