ಸಂಚಾರಕ್ಕೆ ಮುಂಬೈ ಸುರಕ್ಷಿತ

7

ಸಂಚಾರಕ್ಕೆ ಮುಂಬೈ ಸುರಕ್ಷಿತ

Published:
Updated:

ಮುಂಬೈ (ಪಿಟಿಐ): ವಾಹನ ಚಾಲನೆ ಮತ್ತು ವ್ಯವಸ್ಥಿತ ಸಂಚಾರಕ್ಕೆ ಮುಂಬೈ ದೇಶದಲ್ಲೇ ಸುರಕ್ಷಿತ ಮಹಾ­ನಗರ ಎಂದು ಖಾಸಗಿ ಕಂಪೆನಿ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.ಖಾಸಗಿ ವಿಮೆ ಕಂಪೆನಿ ಐಸಿಐಸಿಐ ಲೊಂಬಾರ್ಡ್‌, ದೇಶದ ಪ್ರಮುಖ ಮಹಾ­­ನಗರಗಳಾದ ನವದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದ­ರಾ­­ಬಾದ್‌ ಮತ್ತು ಕೋಲ್ಕತ್ತದಲ್ಲಿ 987 ಮಾದರಿಗಳನ್ನು ಸಂಗ್ರಹಿಸಿ ಈ ಸಮೀಕ್ಷೆ ಕೈಗೊಂಡಿತ್ತು.‘ಸುರಕ್ಷಿತ ವಾಹನ ಚಾಲನೆ ಹಾಗೂ ಶಿಸ್ತು­ಬದ್ಧ ಸಂಚಾರಕ್ಕೆ ಮುಂಬೈ ಮಹಾ­ನಗರ ಸೂಕ್ತ ಎಂಬುದಾಗಿ ಹೆಚ್ಚಿನ ಜನ ಅಭಿಪ್ರಾ­ಯಪಟ್ಟಿದ್ದಾರೆ’ ಎಂದು  ಐಸಿಐಸಿಐ ಲೊಂಬಾರ್ಡ್‌ ಮುಖ್ಯಸ್ಥ ಸಂಜಯ್‌ ದತ್‌ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ದೆಹಲಿ ಅತ್ಯುತ್ತಮವಾದ ರಸ್ತೆಗ­ಳನ್ನು ಹೊಂದಿದ್ದರೆ, ಬೆಂಗಳೂರು ಅತ್ಯು­ತ್ತಮ ವಾಹನ ಚಾಲನೆ ಸೌಲಭ್ಯದ ಜೊತೆಗೆ ಪೂರಕವಾದ ಪಾದಚಾರಿ ಮಾರ್ಗ, ತುರ್ತು ಅಂಬುಲೆನ್ಸ್‌ ಸೇವೆ ಸೇರಿ­­­ದಂತೆ ಇನ್ನಿತರ ಸೇವೆಗಳನ್ನು  ಹೊಂದಿ­­ರುವುದಾಗಿ ಜನ ಅಭಿಪ್ರಾಯ ಪಟ್ಟಿದ್ದಾಗಿ ಹೇಳಿದ್ದಾರೆ. ದಂಡದ ಮೊತ್ತ­ದ ಹೆಚ್ಚಿಸುವ ಮೂಲಕ ಸಂಚಾರ ನಿಯ­ಮ ಉಲ್ಲಂಘ­ನೆ­­­ ನಿಯಂತ್ರಿಸ­ಬಹು­ದು ಎಂದು ಶೇ 19ರಷ್ಟು ಮಂದಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry