ಶನಿವಾರ, ಮೇ 8, 2021
26 °C

ಸಂಚಾರಿಪೀಠ ಕಾಯಂ: ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಕೇಂದ್ರ ಸಚಿವ ಸಂಪುಟವು ಗುಲ್ಬರ್ಗ ಹೈಕೋರ್ಟ್ಸಂಚಾರಿ ಪೀಠವನ್ನು ಕಾಯಂ ಪೀಠವನ್ನಾಗಿ ಪರಿವರ್ತಿಸಲು ನಿರ್ಧಾರ                   ಕೈಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ವಕೀಲರ ಸಮೂಹದ ಸಂಭ್ರಮಿಸಿದೆ.

 

ಗುಲ್ಬರ್ಗ ವಕೀಲರ ಸಂಘ ಉಚ್ಚ ನ್ಯಾಯಾಲಯ ಘಟಕ ಹಾಗೂ ಜಿಲ್ಲಾ  ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಬುಧವಾರ ಪ್ರತ್ಯೇಕವಾಗಿ  ವಿಜಯೋತ್ಸವ ಆಚರಿಸಿದರು.ಗುಲ್ಬರ್ಗ ವಕೀಲರ ಸಂಘ ಉಚ್ಚ ನ್ಯಾಯಾಲಯ ಘಟಕದ ಪದಾಧಿಕಾರಿಗಳು ನಗರದ ಹೊರವಲಯದಲ್ಲಿರುವ ಗುಲ್ಬರ್ಗ ಉಚ್ಚ ನ್ಯಾಯಾಲಯ ಸಂಚಾರಿ ಪೀಠದ  ಮುಖ್ಯದ್ವಾರದ ಮುಂದೆ ಜಮಾಯಿಸಿ, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು, ಜಯಕಾರ ಹಾಕಿ ವಿಜಯೋತ್ಸವ   ಆಚರಿಸಿದರು.ಈ ಸಂದರ್ಭದಲ್ಲಿ ಗುಲ್ಬರ್ಗ ವಕೀಲರ ಸಂಘ ಉಚ್ಚ ನ್ಯಾಯಾಲಯ ಘಟಕದ ಅಧ್ಯಕ್ಷ ಡಿ.ಕೆ.ಯೂಸುಫ್ ಮಾತನಾಡಿ `ಸಂಚಾರಿ ಪೀಠವನ್ನು ಕಾಯಂ ಪೀಠವನ್ನಾಗಿ ಪರಿವರ್ತಿಸುವಂತಹ ಐತಿಹಾಸಿಕ ನಿರ್ಣಯ ಕೈಗೊಂಡ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಕೆಲಸ ಮಾಡಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್, ಸುಪ್ರೀಂ  ಕೋರ್ಟ್ ಹಾಗೂ ಹೈಕೋಟ್‌ನ ಎಲ್ಲ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿ ಹಾಗೂ ರಾಜ್ಯ ಸರ್ಕಾರಕ್ಕೆ   ಕೃತಜ್ಞರಾಗಿರುತ್ತೇವೆ' ಎಂದು  ಹೇಳಿದರು.ಸಂಘದ ಉಪಾಧ್ಯಕ್ಷ ರವೀಂದ್ರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಶಿವಶಂಕರ ಮನ್ನೂರ, ಜಂಟಿ ಕಾರ್ಯದರ್ಶಿ ಗೌರೀಶ ಎಸ್.ಕಾಶಂಪೂರ, ಖಜಾಂಚಿ ನರೇಶ ಕುಲಕರ್ಣಿ, ವಿಲಾಸಮುಖ್ ಇದ್ದರು.ಜಿಲ್ಲಾ ವಕೀಲರ ಸಂಘ: ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ನಗರದ ಹೃದಯಭಾಗದಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆವರಣದಿಂದ  ಮೆರವಣಿಗೆ ಹೊರಟು, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯಘೋಷ ಮೊಳಗಿಸಿದರು.ಸಂಘದ ಮಾಜಿ ಅಧ್ಯಕ್ಷ ಹಣಮಂತ ರೆಡ್ಡಿ ಮಾತನಾಡಿ, `ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯದ ಎಲ್ಲ                            ನ್ಯಾಯಮೂರ್ತಿಗಳಿಗೆ ಹೈದರಾಬಾದ್ ಕರ್ನಾಟಕದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ.ಆದರೆ ಗುಲ್ಬರ್ಗ ಸಂಚಾರಿ ಪೀಠದ ವ್ಯಾಪ್ತಿಗೆ ಬರಬೇಕಾಗಿದ್ದ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಈ ಹಿಂದೆಯೇ ಧಾರವಾಡ ಸಂಚಾರಿ ಪೀಠಕ್ಕೆ ಸೇರ್ಪಡೆ ಮಾಡಲಾಗಿದೆ. ಇದಕ್ಕೆ ನಮ್ಮ ವಿರೊಧವಿದೆ' ಎಂದರು.`ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ ಪ್ರಾದೇಶಿಕ ಆಯುಕ್ತರ ಕಚೇರಿ (ಕಂದಾಯ), ವಿವಿಧ ಇಲಾಖೆಗಳು, ಈಶಾನ್ಯ                                  ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಿಶ್ವವಿದ್ಯಾಲಯಗಳು ಸೇರಿದಂತೆ ಬಹುತೇಕ ಎಲ್ಲ ಸಂಸ್ಥೆ- ಇಲಾಖೆಗಳ ಆಡಳಿತ ಕೇಂದ್ರವು ಗುಲ್ಬರ್ಗದಲ್ಲಿ ಇದೆ. ಆದರೆ ಕೇವಲ ನ್ಯಾಯಾಲಯಕ್ಕಾಗಿ ಬಳ್ಳಾರಿ ಮತ್ತು ಕೊಪ್ಜ ನತೆ ಧಾರವಾಡಕ್ಕೆ ಹೋಗಬೇಕಾಗಿದೆ.ಇನ್ನೊಂದೆಡೆ ಧಾರವಾಡ ಸಂಚಾರಿ ಪೀಠಕ್ಕೆ 8 ಜಿಲ್ಲೆ ಮತ್ತು ಗುಲ್ಬರ್ಗಕ್ಕೆ 4 ಜಿಲ್ಲೆ ನೀಡಿ ತಾರತಮ್ಯ ಮಾಡಲಾಗಿದೆ. ಬಳ್ಳಾರಿ ಮತ್ತು ಕೊಪ್ಪಳವನ್ನು ಗುಲ್ಬರ್ಗ ಸಂಚಾರಿ ಪೀಠ ವ್ಯಾಪ್ತಿಗೆ ಸೇರಿಸುವ ಮೂಲಕ ಅಸಮಾನತೆಯನ್ನು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ' ಎಂದರು.ಸಂಘದ ಅಧ್ಯಕ್ಷ ಡಿ.ಕೆ.ಯೂಸುಫ್, ಎಂ.ಎನ್. ಪಾಟೀಲ್, ಉಸ್ತಾದ್ ಫಾರೂಕ್ ಹುಸೇನ್, ಶುಭಶ್ಚಂದ್ರ ಕಣಗಿ, ಲಕ್ಷ್ಮೀಕಾಂತ ಕುಲಕರ್ಣಿ, ಬಿ.ಕೆ. ಪಾಟೀಲ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.