ಶುಕ್ರವಾರ, ಆಗಸ್ಟ್ 7, 2020
25 °C

ಸಂಚಾರಿ ಎಂ ಟಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರಿ ಎಂ ಟಿವಿ

ಎಂ  ಟಿವಿ ಭಾರತದಲ್ಲಿ ಆರಂಭವಾಗಿದ್ದೇ ಅಪ್ಪಟ ಸಂಗೀತದ ಚಾನೆಲ್ ಆಗಿ. ಆದರೆ `ವಯಾಕಾಂ 18~ ಇದನ್ನು ಕೇವಲ ಸಂಗೀತದ ಚಾನೆಲ್ ಮಾತ್ರ ಆಗಿರಲು ಬಿಡಲಿಲ್ಲ. ಯುವಜನರ ಬದುಕಿಗೆ ಲಗ್ಗೆ ಇಡುವಂತೆ ಮಾಡಿತು. ಎಂ ಟಿವಿ ರೋಡೀಸ್ ಕಾರ್ಯಕ್ರಮವಂತೂ ಯುವಜನರ ಉತ್ಸಾಹ ಹಾಗೂ ಜೋಷ್, ಸಾಹಸದ ಮನೋಭಾವವನ್ನೇ ಬಂಡವಾಳವಾಗಿರಿಸಿಕೊಂಡಿತು.ಒಮ್ಮೆ ಯುವಜನರ ಮನಗೆದ್ದ ನಂತರ ಎಂ ಟಿವಿ ಇನ್ನೊಂದು ಸಾಹಸಕ್ಕೆ ಮುಂದಾಯಿತು. ಯುವಜನರ ವೈಯಕ್ತಿಕ ಉತ್ಪನ್ನಗಳತ್ತ ಗಮನಹರಿಸಿತು. `ವಯಾಕಾಮ್ 18~ ಇದೀಗ ಗ್ಲೋಬಲ್ ಫ್ರಾಗ್ರನ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.ಆಗಸ್ಟ್‌ನಲ್ಲಿ ಸುಗಂಧದ್ರವ್ಯ ಹಾಗೂ ಇತರ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಿದೆ. ಈ ನಿಟ್ಟಿನಲ್ಲಿ `ವಯಾಕಾಮ್18~ನ ಹಿರಿಯ ಉಪಾಧ್ಯಕ್ಷ ಸಂದೀಪ್ ದಹಿಯಾ ಮಾತನಾಡಿದ್ದಾರೆ.`ವಯಾಕಾಂ18~ ವಾಹಿನಿಯಿಂದ ಗ್ರಾಹಕರ ಉತ್ಪನ್ನದತ್ತ ಸರಿದಿದ್ದು ಹೇಗೆ?

`ವಯಾಕಾಂ 18~ ಭಾರತದಲ್ಲಿ ಆರಂಭಿಸಿದ್ದು ಎಂ ಟಿವಿ ಮೂಲಕ. ನಂತರ ಕಲರ್ಸ್‌, ನಿಕೊಲೊಡಿಯನ್, ಕಲರ್ಸ್‌ ಹಾಗೂ ವಿಎಚ್1 ಚಾನೆಲ್‌ಗಳನ್ನು ಆರಂಭಿಸಿತು. ಕೇವಲ ನಾಲ್ಕು ವರ್ಷಗಳ ಹಿಂದೆ ಎಂ ಟಿವಿ ಯುವಜನರಲ್ಲಿ ಹೊಸ ಛಾಪು ಮೂಡಿಸುವಾಗ ಗ್ರಾಹಕ ಉಪಯೋಗಿ ಉತ್ಪನ್ನಗಳನ್ನು ಆರಂಭಿಸುವ ಯೋಚನೆ ಬಂದಿತು.ಎಂ ಟಿವಿ ಉತ್ಪನ್ನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವವು ಯಾವವು?

ಎಲ್ಲವೂ ಎಂದೇ ಹೇಳಬಹುದು. ಆದರೆ ಬೈಕ್‌ಗಳಿಗಿಂತಲೂ ಹೆಚ್ಚಾಗಿ ಜನಪ್ರಿಯಗೊಳ್ಳುತ್ತಿರುವುದು ಕನ್ನಡಕ, ಚಪ್ಪಲಿಯಂಥ ಸಣ್ಣ ಸಣ್ಣ ಉತ್ಪನ್ನಗಳು. ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗುವುದರಿಂದ ಯುವಜನರು ಬಲುಬೇಗನೆ ಆಕರ್ಷಿತರಾಗುತ್ತಾರೆ.ಸ್ಥಾಪಿತ ಬ್ರ್ಯಾಂಡ್‌ಗಳೊಡನೆ ಸಂಧಾನ ಮಾಡಿಕೊಳ್ಳುವುದರಿಂದ ಎಂಟಿವಿ ಬ್ರ್ಯಾಂಡ್ ಹೇಗಾದೀತು?

ಹೌದು... ಇದೊಂಥರ ಮಾರುಕಟ್ಟೆಯ ತಂತ್ರ ಎಂದೇ ಹೇಳಬಹುದು. ಮೋಚಿ ಜೊತೆಗೆ ಚಪ್ಪಲಿಗಾಗಿ ಒಪ್ಪಂದ ಮಾಡಿಕೊಂಡಿದ್ದೇವೆ. ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಡಿಯೊಡರಂಟ್ ಮತ್ತಿತರ ಉತ್ಪನ್ನಗಳಿಗೆ ಗ್ಲೋಬಲ್‌ಫೈನಾನ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಗುಣಮಟ್ಟದ ಉತ್ಪನ್ನ ನೀಡುವುದು. ಜೊತೆಗೆ ಎಂ ಟಿವಿಯ ಜನಪ್ರಿಯತೆ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.ಒಳ ಉಡುಪು, ಲಿಂಗ್ರಿ ಹಾಗೂ ಕಾಂಡೋಂ ಮಾರಾಟದತ್ತ ಗಮನ ಹರಿದಿದ್ದು ಹೇಗೆ?

ಇವು ಮಾರುಕಟ್ಟೆಯಲ್ಲಿ ಕಡೆಗಣಿಸಿರುವಂಥ ಉತ್ಪನ್ನಗಳು. ಯುವಜನರಿಗೆ ಈಗ ಪ್ರತಿಯೊಂದರಲ್ಲೂ ವಿಭಿನ್ನವಾಗಿರಬೇಕು ಎಂಬ ಹುಮ್ಮಸ್ಸು ಇದೆ.

 

ಉತ್ಸುಕತೆ ಇದೆ. ಒಳ ಉಡುಪುಗಳ ಬಗ್ಗೆ ಒಂದು ಸಾಂಪ್ರದಾಯಿಕವಾದ ಮನಃಸ್ಥಿತಿಯೇ ಇತ್ತು. ಅದನ್ನೂ ಫ್ಯಾಶನೇಬಲ್ ಮತ್ತು ಟ್ರೆಂಡಿ ಮಾಡುವತ್ತ ಯೋಚಿಸಿ, ಈ ಕ್ಷೇತ್ರಕ್ಕೆ ಕಾಲಿಟ್ಟೆವು. ಇವೊತ್ತು ಜನರಿಗೆ ಬೇಕಿರುವುದು ಗುಣಮಟ್ಟ ಜೊತೆಗೆ ಟ್ರೆಂಡ್. ಇದನ್ನೇ ಎಂ ಟಿವಿ ಉತ್ಪನ್ನಗಳು ಜನಪ್ರಿಯವಾಗಲು ಕಾರಣವಾಯಿತು.ಟ್ರೆಂಡ್ ಮತ್ತು ಬ್ರ್ಯಾಂಡ್ ಇಗ ಅಷ್ಟು ಮುಖ್ಯವಾಗಿವೆಯೇ?

ಹೌದು, ಒಂದು ಕಾಲಕ್ಕೆ ಹಣ ಮತ್ತು ಅಂತಸ್ತು ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ ಈಗ ಫ್ಯಾಶನ್ ಹಾಗೂ ಸ್ಟೈಲ್ ಐಕಾನ್ ಆಗಿರುವುದು ಪ್ರತಿಷ್ಠೆಯ ಸಂಕೇತವಾಗಿದೆ. ಪ್ರತಿಯೊಬ್ಬರೂ ಆರಾಮದಾಯಕ ಆಗಿರುವುದರೊಂದಿಗೆ ವಿಭಿನ್ನವಾಗಿಯೂ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಎಂ ಟಿವಿ ಉಡುಪುಗಳು ಜನಪ್ರಿಯವಾಗಿವೆ.ಮುಂದಿನ ಯೋಜನೆಗಳು..?

ಜನರ ಅಗತ್ಯದ ಪರಿಕರಗಳಲ್ಲಿಯೂ ಎಂ ಟಿವಿಯ ಛಾಪನ್ನು ಒತ್ತುವುದು... ಈಗಾಗಲೇ ಬಹುತೇಕ ಕ್ಷೇತ್ರಗಳನ್ನು ಪ್ರವೇಶಿಸಿ ಆಗಿದೆ. ಅಲ್ಲಿ ಆಧಿಪತ್ಯ ಸ್ಥಾಪಿಸುವ ಬಗ್ಗೆ ಯೋಚಿಸಲಾಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.