ಶನಿವಾರ, ಅಕ್ಟೋಬರ್ 19, 2019
28 °C

ಸಂಚಾರ ನಿಯಮ ಪಾಲಿಸಿ

Published:
Updated:

ಹಾವೇರಿ: `ಪ್ರತಿಯೊಬ್ಬರೂ ಸಂಚಾರ ನಿಯಮ ಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿದಾಗ ಮಾತ್ರ ಅಪಘಾತಗಳ ಸಂಖ್ಯೆ ಗಣನೀಯವಾಗಿ ತಡೆಯಲು ಸಾಧ್ಯ~ ಎಂದು ವಾಹನ ನಿರೀಕ್ಷಕ ಕೆ.ವಿ.ನಾಗರಾಜ ಹೇಳಿದರು.23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಭಾನುವಾರ ನಗರದ ಕೆಇಬಿ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಸ್ತೆಯಲ್ಲಿ ವೇಗದ ಮಿತಿ ಅಳವಡಿಕೆ ಹಾಗೂ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಸೆಟ್ ಬೆಲ್ಟ್ ಬಳಕೆ ಮಾಡುವುದನ್ನು ರೂಢಿಸಿ ಕೊಳ್ಳಬೇಕು. ಇದರಿಂದ ಅಮೂಲ್ಯ ಪ್ರಾಣ  ಉಳಿಸಿಕೊಳ್ಳಬಹುದಲ್ಲದೇ, ಬೇರೆಯವರ ಪ್ರಾಣವನ್ನು ರಕ್ಷಿಸಬಹುದಾಗಿದೆ ಎಂದರು.ದೇಶದಲ್ಲಿ ಪ್ರತಿ ವರ್ಷ ಅಪಘಾತದಿಂದ ಒಂದು ಲಕ್ಷ ಜನ ಸಾಯತ್ತಾರೆ. ರಸ್ತೆ ಸುರಕ್ಷತಾ  ಕ್ರಮ ಗಳನ್ನು ಅಳವಡಿಸುವುದರಿಂದ ಈ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ. ರಸ್ತೆ ಸುರಕ್ಷತಾ ಸಾಪ್ತಾಹದಲ್ಲಿ ತಿಳಿಸುವ ಸಂಚಾರಿ ನಿಯಮಗಳನ್ನು ಜೀವನ ದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಸಲಹೆ ಮಾಡಿದರು.  ಡಿವೈಎಸ್ಪಿ ಎಸ್.ಎಲ್.ಸಿಂಗದ ಮಾತನಾಡಿ, ನಿತ್ಯದ ಜೀವನದಲ್ಲಿ ರಸ್ತೆ ನಿಯಮ ಪಾಲನೆ, ವಾಹನ ಚಾಲನಾ ಪತ್ರ, ಜೀವ ವಿಮೆ, ಪಡೆಯುವುದು ಅವಶ್ಯವಾಗಿದ್ದು, ಸುರಕ್ಷತೆಯ ಬಗ್ಗೆ ಚಾಲಕರು ಹೆಚ್ಚಿನ ಗಮನಹರಿಸಬೇಕು ಎಂದರು. ಸಂಚಾರ ಸಮಯ ದಲ್ಲಿ ಶೋಕಿಗಾಗಿ ಮೊಬೈಲ್ ಬಳಕೆ ಮಾಡು ವುದರಿಂದ ದ್ವಿಚಕ್ರ ವಾಹನಗಳ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಆದ್ದರಿಂದ ಯುವಕರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಕಡ್ಡಾಯ ವಾಗಿ ಮೊಬೈಲ್ ಬಳಕೆ ಮಾಡ ಬಾರದು.ಹೆಲ್ಮೆಟ್ ಹಾಗೂ ಸಮಚಿತ್ತದಿಂದ ವಾಹನ ಚಾಲನೆ ಮಾಡಬೇಕು ಎಂದರು. ಅಧ್ಯಕ್ಷತೆಯನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ.ಅಗಡಿ ವಹಿಸಿ ದ್ದರು. ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದಲ್ಲಿ ಪೊಲೀಸ್ ಸಿಬ್ಬಂದಿ ಸಂಚಾರ ನಿಯಮಗಳ ಘೋಷಣೆಗಳನ್ನು ಹಿಡಿದು ಬೈಕ್ ರ‌್ಯಾಲಿ ನಡೆಸಿದರು.ನಗರ ಸಿಪಿಐ ಪಂಪಾಪತಿ, ಪಿಎಸ್‌ಐ ಇಂಗಳೆ, ಗೋವಿಂದಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.  ಶಹರ ಪೊಲೀಸ್ ಕ್ರಾಸ್‌ನಲ್ಲಿ ಅಳವಡಿಸಿದ ಸಿಗ್ನಲ್ ಲೈಟ್‌ಗಳನ್ನು ಶಾಸಕ ನೆಹರೂ ಓಲೇಕಾರ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ಉಪಾಧ್ಯಕ್ಷ ಲಲಿತಾ ಗುಂಡೇನಹಳ್ಳಿ,ಸದಸ್ಯ ವಿಜಯಕುಮಾರ ಚಿನ್ನಿಕಟ್ಟಿ ಮತ್ತಿತರರು ಹಾಜರಿದ್ದರು.

Post Comments (+)