ಬುಧವಾರ, ಮೇ 19, 2021
24 °C

ಸಂಚಾರ ಪುನರಾರಂಭಿಸಲು ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂಟ್ ನಂಬರ್ 500 ಮತ್ತು ಇತರೆ ಬಸ್‌ಗಳನ್ನು (ಬನಶಂಕರಿಯಿಂದ ಕೆ.ಆರ್.ಪುರಂ, ಮಾರತ್‌ಹಳ್ಳಿ, ವೈಟ್‌ಫೀಲ್ಡ್ ಕಡೆ) ಜೆ.ಪಿ ನಗರ 15ನೇ ಕ್ರಾಸ್ (ರಿಂಗ್‌ರೋಡ್) ಮೂಲಕ ಓಡಿಸುವಂತೆ ಮನವಿ ಮಾಡಿದ್ದೆ. ಆದರೆ ಇದುವರೆಗೂ ಬಿಎಂಟಿಸಿ ಸ್ಪಂದಿಸಿಲ್ಲ.ಸುಮಾರು ಮೂರು ವರ್ಷಗಳ ಹಿಂದೆ ಸದರಿ ಮಾರ್ಗದಲ್ಲಿ 500ನೆ ನಂಬರ್ ಬಸ್‌ಗಳು ಸಂಚರಿಸುವಾಗ ಇಲ್ಲಿನ ಜನತೆಗೆ ಬಹಳ ಅನುಕೂಲವಾಗಿತ್ತು. ಜೆ.ಪಿ.ನಗರ 24ನೇ ಮುಖ್ಯ ರಸ್ತೆ 15ನೇ ಕ್ರಾಸ್‌ನಲ್ಲಿ ಅಂಡರ್‌ಪಾಸ್ ಪ್ರಾರಂಭವಾದಾಗ ಈ ರೂಟ್‌ನಲ್ಲಿ ಓಡಾಡುವ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.ಆದರೆ ಈಗ ಸದರಿ ಅಂಡರ್‌ಪಾಸ್ ಪ್ರಾರಂಭವಾಗಿ ಒಂದು ವರ್ಷ ಕಳೆದರೂ ಸಹ ಈ ರೂಟ್‌ನಲ್ಲಿ ಬಸ್ಸುಗಳ ಸಂಚಾರ ಪುನರಾರಂಭ ಆಗಿಲ್ಲ. ಇದರಿಂದ ಇಲ್ಲಿನ ಜನ ಜಯನಗರ 5ನೇ ಬ್ಲಾಕ್‌ನ ರಿಂಗ್‌ರೋಡ್ ಸ್ಟಾಪ್‌ಗೆ ಹೋಗಿ ಪ್ರಯಾಣ ಮಾಡಬೇಕು. ಹೀಗಾಗಿ ಬಹಳ ತೊಂದರೆ ಆಗಿದೆ.ಆಟೊ, ಟ್ಯಾಕ್ಸಿ ಹಿಡಿದು ತಮ್ಮ ಸ್ಥಳ ತಲುಪುವಷ್ಟು ಜೆ.ಪಿ.ನಗರ ಸಾಮಾನ್ಯ ಜನರು ಶ್ರೀಮಂತರಲ್ಲ. ಆದ್ದರಿಂದ ನಮ್ಮ ಮೊರೆ ಆಲಿಸಿ. ಕೂಡಲೆ ಈ ಮಾರ್ಗದಲ್ಲಿ ಬಸ್ ಓಡಿಸಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.