ಸಂಚಿತಾಗೆ ಮೆರಿಟ್‌ಟ್ರಾಕ್ ಪ್ರಶಸ್ತಿ

7

ಸಂಚಿತಾಗೆ ಮೆರಿಟ್‌ಟ್ರಾಕ್ ಪ್ರಶಸ್ತಿ

Published:
Updated:
ಸಂಚಿತಾಗೆ ಮೆರಿಟ್‌ಟ್ರಾಕ್ ಪ್ರಶಸ್ತಿ

ಇತರೆ ಬಿ-ಸ್ಕೂಲ್‌ಗಳಿಗಿಂತ ಭಿನ್ನ ಎನಿಸಿಕೊಂಡಿರುವ ಬಿಸಿನೆಸ್ ಮ್ಯೋನೇಜ್‌ಮೆಂಟ್ ಸ್ಕೂಲ್ ಐಬಿಎಸ್. ಈ ಶಾಲೆಗೆ ಈಗ ಮತ್ತೊಂದು ಹಿರಿಮೆಯ ಗರಿ. ಮೆರಿಟ್ರಾಕ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನೀಡುವ ಪ್ರತಿಷ್ಠಿತ ಮೆರಿಟ್‌ಟ್ರಾಕ್ `ಎಚ್‌ಆರ್ ಎಕ್ಸಲೆನ್ಸ್ ಪ್ರಶಸ್ತಿ~ಯನ್ನು ಐಬಿಎಸ್ ವಿದ್ಯಾರ್ಥಿನಿ ಸಂಚಿತಾ ಸಿಂಗ್ ಪಡೆದು ಕೊಂಡಿದ್ದಾರೆ.ಸಂಚಿತಾ ಸಿಂಗ್ ಅವರಿಗೆ ಮೆರಿಟ್‌ಟ್ರಾಕ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಎಸ್.ಮುರಳೀಧರ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯನ್ನು ಐಬಿಎಸ್ ಬೆಂಗಳೂರು ವಿದ್ಯಾರ್ಥಿನಿ ಸೋನಾಲಿ ಭವಸಾರ್ ಅವರ ನೆನಪಿನಲ್ಲಿ 2009ರಿಂದ ನೀಡಲಾಗುತ್ತಿದೆ.  ಪ್ರಶಸ್ತಿಯು ರೂ.25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ.`ಪೂರ್ಣಕಾಲಿಕ ಸಿಬ್ಬಂದಿಗೆ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಗುತ್ತಿಗೆ ಆಧಾರದ ಸಿಬ್ಬಂದಿಗೆ ನೀಡಬೇಕೆ/ಬೇಡವೇ ಎನ್ನುವುದು ಚರ್ಚೆಯ ವಿಷಯವಾಗಿತ್ತು. ಅಂತಿಮ ಸುತ್ತಿನಲ್ಲಿ ಐದು ಮಂದಿ ವಿದ್ಯಾರ್ಥಿಗಳು ಕಣದಲ್ಲಿದ್ದರು. ಶ್ವೇತನ್ ಶ್ರಿರಾಮ್, ದಕ್ಷ್ ಭಟ್ನಾಗರ್, ನಂದಿನಿ ಸಿನ್ಹಾ ಮತ್ತು ಹರ್ಷ ವಿಜಯ್ ವರ್ಗಿಯಾ ಸಂಚಿತಾ ಜತೆಗೆ ಸ್ಪರ್ಧೆಯಲ್ಲಿದ್ದ ಇತರೆ ವಿದ್ಯಾರ್ಥಿಗಳು. ಮೆರಿಟ್ ಟ್ರಾಕ್ ಸರ್ವೀಸಸ್‌ನ ಎಸ್.ಮುರಳೀಧರ್ ಮತ್ತು ಅಸೋಸಿಯೇಟ್ ಡೀನ್ ಮತ್ತು ಅಕಡೆಮಿಕ್ ಕೋ-ಆರ್ಡಿನೇಟರ್ ಕವಿತಾ ಸೋಮಶೇಖರ್, ಐಬಿಎಸ್ ಬೆಂಗಳೂರು 3ಐ ಸೆಲ್‌ನ ಅಧ್ಯಕ್ಷ ಡಾ.ಡೆನ್ನಿಸ್ ಜೆ. ರಾಜ್‌ಕುಮಾರ್, ಸಾಫ್ಟ್ ಸ್ಕಿಲ್ಸ್ ಕೋ ಆರ್ಡಿನೇಟರ್ ಪ್ರೊ.ಶೈಲೇಂದ್ರ ದಾಸರಿ, ಪ್ರೊ.ಸಾಧನಾ ದೇಶಮುಖ್ ತೀರ್ಪುಗಾರರಾಗಿದ್ದರು.  ವಿಷಯದ ವಿವಿಧ ಆಯಾಮಗಳ ಕುರಿತು ವಿದ್ಯಾರ್ಥಿಗಳು ಬೆಳಕು ಚೆಲ್ಲಿದ ರೀತಿಗೆ ಮುರಳೀಧರ್ ಸಂತೋಷಪಟ್ಟರು. ಐಬಿಎಸ್ ಬೆಂಗಳೂರು ನಿರ್ದೇಶಕಿ ಡಾ.ಲತಾ ಚಕ್ರವರ್ತಿ ಉಪಸ್ಥಿತರಿದ್ದರು.                                          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry