ಸಂಜನಾ ಇಷ್ಟಗಳು

7

ಸಂಜನಾ ಇಷ್ಟಗಳು

Published:
Updated:

ಮಲ್ಲೇಶ್ವರದ ಗ್ರೀನ್ ಟ್ರೆಂಡ್ಸ್ (ಹೇರ್ ಅಂಡ್ ಸ್ಟೈಲ್ ಸಲೂನ್ )ನಲ್ಲಿ ಫ್ಯಾಷನ್‌ಪ್ರಿಯರ ಕಲರವ...  ಸ್ಟೆಪ್ ಕಟ್, ಯು ಕಟ್, ಲೇಯರ್ ಕಟ್...ಹೀಗೆ ಹತ್ತಾರು ಬಗೆಯ ಕೇಶಶೈಲಿ ಹೊಂದಿದ ಯುವತಿಯರು. ತಂತಮ್ಮ ಸಂಗಾತಿಯ ಜೊತೆ ಬಂದ ಯುವಕರು...ಅವರೆಲ್ಲ ಮುತ್ತಿದ್ದು ಕನ್ನಡದ ಹಾಟ್ ತಾರೆ ಸಂಜನಾ ಅವರನ್ನು ನೋಡಲು. ಗ್ರೀನ್ ಟ್ರೆಂಡ್ಸ್‌ನ 9ನೇ ಮಳಿಗೆಯನ್ನು ಉದ್ಘಾಟಿಸಲು ಸಂಜನಾ ಬಂದಿದ್ದರು.ಮಳಿಗೆ ಉದ್ಘಾಟಿಸಿ ಮೆಟ್ರೊದೊಂದಿಗೆ ಮಾತಿಗಿಳಿದ ಸಂಜನಾ ಹೇಳಿಕೊಂಡಿದ್ದು ಇಷ್ಟು...

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಆಟಗಾರರನ್ನು ಹುರಿದುಂಬಿಸುತ್ತಿದ್ದ ನೀವು ಕ್ರಿಕೆಟ್ ಪ್ರೇಮಿನಾ?ಹೌದು ನನಗೆ ಚಿಕ್ಕ ವಯಸ್ಸಿನಿಂದ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಚಿತ್ರರಂಗದಲ್ಲಿ ದುಡಿಯುವವರಿಗೆ ಇದೊಂದು ವಿನೂತನ ಅನುಭವ ಬರಿ ನಟನೆ ಮಾಡುವುದು ಅಷ್ಟರಲ್ಲಿಯೇ ಇರುತ್ತಿದ್ದ ನಟರಿಗೆ ಕೈಯಲ್ಲಿ ಬ್ಯಾಟ್ ಕೊಟ್ಟರೆ ಹೇಗೆ ಇರುತ್ತದೆ ಅಲ್ಲವಾ? ಈ ಬಾರಿ ಸಿಸಿಎಲ್‌ನಲ್ಲಿ ನನ್ನ ನೆಚ್ಚಿನ ಆಟಗಾರ ಧ್ರುವ.ನೀವು ಇಷ್ಟು ಫಿಟ್ ಆಗಿರುವ ಹಿಂದಿನ ರಹಸ್ಯ ಏನು?

ಡ್ಯಾನ್ಸ್, ಏರೋಬಿಕ್ಸ್ ಮತ್ತೆ ಜಿಮ್‌ಗೆ ಹೋಗುತ್ತೀನಷ್ಟೆ.

ನೆಚ್ಚಿನ ಆಹಾರ?

ನನಗೆ ನಿರ್ದಿಷ್ಟವಾಗಿ ಇಂಥದ್ದೇ ಅಂತೇನೂ ಇಲ್ಲ; ಎಲ್ಲ ರೀತಿಯ ಮಾಂಸಹಾರದ ಊಟ ತುಂಬಾ ಇಷ್ಟ.ಇಷ್ಟದ ಫುಡ್ ಜಾಯಿಂಟ್?

ಹೊರಗೆ ತಿನ್ನುವುದು ತುಂಬಾ ಕಡಿಮೆ. ಮನೆಯಲ್ಲಿ ಅಮ್ಮ ತಯಾರಿಸಿರುವ ಅಡುಗೆ ಇಷ್ಟ.ಉಡುಗೆ

ನನಗೆ ಜೀನ್ಸ್ ಮತ್ತು ಟಿ-ಶರ್ಟ್, ಒನ್ ಪೀಸ್ ಡ್ರೆಸ್ ಹೆಚ್ಚು ಕಂಫರ್ಟ್ ನೀಡುತ್ತದೆ. ಅಪರೂಪಕ್ಕೆ ಸೀರೆ ಮತ್ತು ಚೂಡಿದಾರ್ ಧರಿಸಲು ಇಷ್ಟ.ಡಿಸೈನರ್

ರಮೇಶ್ ಡೆಂಬ್ಲಾ ಮತ್ತು ಮನಿಷ್ ಮಲ್ಹೋತ್ರಶಾಪಿಂಗ್ ಮಾಡುವ ಜಾಗ

ನಾನು ಭಾರತದಲ್ಲಿ ಶಾಪಿಂಗ್ ಮಾಡುವುದು ತುಂಬಾ ಕಡಿಮೆ. ಅಮೆರಿಕಾದಲ್ಲಿ ಹೆಚ್ಚು ಶಾಪಿಂಗ್ ಮಾಡುತ್ತೀನಿ. ಅಲ್ಲಿ ಮಹಿಳೆಯರ ಡ್ರೆಸ್ ಕಲೆಕ್ಷನ್ ಚೆನ್ನಾಗಿರುತ್ತದೆ. ನಿಮ್ಮ ಲುಕ್ ಬಗ್ಗೆ ಹೇಳಿ?

ಸ್ಟೆಪ್ ಲೇಯರ್ ಕಟ್ ಜೊತೆಗೆ ಕೂದಲಿಗೆ ಹೈಲೈಟ್ ಆಗುವ ಕಲರಿಂಗ್ ಮಾಡಿಸಿದ್ದೀನಿ ಅಷ್ಟೆ.ಮನೆಯಿಂದ ಹೊರಗೆ ಹೋಗುವಾಗ ಯಾವ ಎರಡು ವಸ್ತುಗಳು ನಿಮ್ಮ ಜೊತೆ ಇರಲೇಬೇಕು?

ಕಾಜಲ್ (ಕಣ್ಣುಕಪ್ಪು) ಮತ್ತು ಲಿಪ್‌ಗ್ಲೊಸ್. ಜೊತೆಗೆ ಮೊಬೈಲ್ ಕೂಡ.`ನರಸಿಂಹ~ ಚಿತ್ರದಲ್ಲಿ ರವಿಚಂದ್ರನ್ ಜೊತೆ ಅಭಿನಯಿಸಿದ ಅನುಭವ?

ತುಂಬಾ ಚೆನ್ನಾಗಿತ್ತು. ಬಾಲ್ಯದಲ್ಲಿ ಪ್ರೇಮಲೋಕ ಸಿನಿಮಾ ನೋಡಿ ಬೆಳೆದ ನನಗೆ ಅವರ ಜೊತೆಯಲ್ಲಿಯೇ ಕೆಲಸ ಮಾಡಿದ ಅವಕಾಶ ಸಿಕ್ಕಿದ್ದು ಅದೃಷ್ಟ.ಗಾಸಿಪ್‌ಗಳ ಬಗ್ಗೆ...

ಸೆಲೆಬ್ರಿಟಿ ಆಗಿರುವುದರಿಂದ ಜನರಿಗೆ ಖಾಸಗಿ ಬದುಕು ತಿಳಿದುಕೊಳ್ಳುವ ಕುತೂಹಲ. ಸ್ನೇಹಿತರ ಜೊತೆಯಲ್ಲಿ ಹೋದರೂ ಬಾಯ್ ಫ್ರೆಂಡ್ ಜೊತೆ ಓಡಾಡುತ್ತಾ ಇ್ದ್ದದೀವಿ ಅನ್ನುವ ಭ್ರಮೆ ಅಷ್ಟೆ.ಸ್ಕ್ರಿಪ್ಟ್ ಹೇಗೆ ಆಯ್ಕೆ ಮಾಡಿಕೊಳ್ಳುತ್ತಿರಾ?

ಆ ತರಹ ಏನು ಇಲ್ಲ. ಯಾವುದು ಸುಂದರ ಕಥೆ ಇರುತ್ತದೆ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತೀನಿ.ಎಕ್ಸ್‌ಪೋಸ್ ಜಾಸ್ತಿ ಮಾಡುತ್ತೀರಿ ಅನ್ನುವ ಆರೋಪ ನಿಮ್ಮ ಮೇಲೆ ಇದೆಯಲ್ಲಾ?

ಕೆಲವೊಂದು ಬಾರಿ ಸಿನಿಮಾಕ್ಕೆ ಅನಿವಾರ್ಯ ಇರುತ್ತದೆ.ಕನಸಿನ ಹುಡುಗ?

ತುಂಬಾ ಸಹಜವಾಗಿ ಮತ್ತು ನಿಜ ಹೇಳುವಂತಹ ಮನಸ್ಥಿತಿ ಇರುವಂತಹ ಹುಡುಗ ಇಷ್ಟ.

ಮುಂದಿನ ಸಿನಿಮಾಗಳು...`ನರಸಿಂಹ~, `ಸಾಗರ್~ (ಪ್ರಜ್ವಲ್ ದೇವರಾಜ್), `ಒಂದು ಕ್ಷಣದಲ್ಲಿ~, `ತೆಲುಗು ಮತ್ತು ಮಲೆಯಾಳಂನಲ್ಲೂ ಚಿತ್ರಗಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry