ಮಂಗಳವಾರ, ನವೆಂಬರ್ 19, 2019
29 °C

ಸಂಜಯ್‌ಗೆ ಶಿಕ್ಷೆ: ರಾಜ್ಯಪಾಲರಿಗೆ ಮನವಿಗಳ ರಾಶಿ

Published:
Updated:

ಮುಂಬೈ (ಐಎಎನ್‌ಎಸ್): ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ತ ಅವರಿಗೆ ಕ್ಷಮಾದಾನ ನೀಡುವಂತೆ ಕೋರಿ ಹಾಗೂ ವಿರೋಧಿಸಿ ಮಹಾರಾಷ್ಟ್ರ ರಾಜ್ಯಪಾಲ ಕೆ ಶಂಕರನಾರಾಯಣನ್ ಅವರಿಗೆ ಮನವಿಗಳ ಮಹಾಪೂರವೇ ಹರಿದು ಬರುತ್ತಿದ್ದು, ಕನಿಷ್ಠ  60 ಮನವಿಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.ಸಂಜಯ್ ದತ್ತ ಅವರಿಗೆ ಸುಪ್ರೀಂ ಕೋರ್ಟ್  ಐದು ವರ್ಷ ಶಿಕ್ಷೆ ವಿಧಿಸಿದ ಬಳಿಕ ದೇಶದ್ಲ್ಲೆಲೆಡೆಯಿಂದ  ರಾಜಕಾರಣಿಗಳು ಮತ್ತು ತಾರಾ ಬಳಗ ಸೇರಿದಂತೆ ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಈ ಮನವಿಗಳು ಬಂದಿವೆ.ಎಲ್ಲವನ್ನು ರಾಜ್ಯಪಾಲರ ಕಾರ್ಯದರ್ಶಿ ವಿ. ಸಿ ರಸ್ತೋಗಿ, ರಾಜ್ಯ ಗೃಹ ಇಲಾಖೆಯ ಪ್ರಧಾನಕಾರ್ಯದರ್ಶಿಗಳಿಗೆ ಕಳುಹಿಸಿದ್ದಾರೆ. ಸಂಜಯ್ ದತ್ತ ಅವರ ಪರ ಕ್ಷಮಾದಾನ ಬೆಂಬಲಿಸಿ ಮನವಿ ಸಲ್ಲಿಸಿರುವ ವರಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ. ಮಾರ್ಕಂಡೇಯ ಕಟ್ಜು, ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಜಯಪ್ರದಾ ಅವರು ಪ್ರಮುಖರಾಗಿದ್ದಾರೆ.

ಪ್ರತಿಕ್ರಿಯಿಸಿ (+)