ಸಂಜೆಯ ರಾಗಕೆ...

7

ಸಂಜೆಯ ರಾಗಕೆ...

Published:
Updated:

ಪಶ್ಚಿಮದ ಗಾಳಿ ಬೀಸದ ಅಪ್ಪಟ ಭಾರತ ಹೇಗಿತ್ತು ಎಂದು ನೋಡಬೇಕೆ? ಅರಮನೆಗಳು, ಕಟ್ಟಡಗಳ ಗತಕಾಲದಲ್ಲಿ ಮೀಯಬೇಕೆ? ಹಾಗಿದ್ದರೆ ಸಿದ್ಧರಾಗಿ. ಇಂಗ್ಲೆಂಡ್‌ನ ಛಾಯಾಗ್ರಾಹಕ ಡೆರ‌್ರಿ ಮೂರ್ ಛಾಯಾಚಿತ್ರ ನಿಮ್ಮನ್ನು ಆ ಕಾಲಕ್ಕೆ ಕರೆದೊಯ್ಯಲಿದೆ. ಅವರ ಸಹಿ ಇರುವ ಸುಮಾರು ಅರವತ್ತಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ನೀವು ನೋಡಬಹುದು.ಡೆರ‌್ರಿ ಅವರ ಪರಿಚಯ ಹೀಗಿದೆ- ಇಂಗ್ಲೆಂಡ್‌ನ ಪ್ರತಿಷ್ಠಿತ ಮನೆತನವೊಂದಕ್ಕೆ ಸೇರಿದ ಅವರು ಮೊದಲು ಕಲಿತದ್ದು ಚಿತ್ರಕಲೆಯನ್ನು. ಕೆಲದಿನಗಳ ಕಾಲ ಅಮೆರಿಕದಲ್ಲಿ ದುಡಿಮೆ. ನಂತರ ಛಾಯಾಗ್ರಹಣದ ಬೆನ್ನೇರಿದರು. ಕೇವಲ ಛಾಯಾಗ್ರಾಹಕನಾಗಿ ಮಾತ್ರವಲ್ಲ, ಬರಹಗಾರನಾಗಿಯೂ ಗಮನ ಸೆಳೆದರು. ಎಪ್ಪತ್ತರ ದಶಕದಲ್ಲಿ ಭಾರತಕ್ಕೆ ಬಂದು ನೂರಾರು ಛಾಯಾಚಿತ್ರಗಳನ್ನು ತೆಗೆದರು. ಭಾರತದ ಅನುಭವ ಕುರಿತು `ಈವ್‌ನಿಂಗ್ ರಾಗಾಸ್~ ಎಂಬ ಪುಸ್ತಕವನ್ನೂ ಹೊರತಂದರು.ಈಗ ಅವರಿಗೆ ಎಪ್ಪತ್ತರ ಹರಯ. ಬದುಕಿನ ಸಂಜೆಕಾಲ. ಈ ಸಮಯದಲ್ಲಿ ಅವರ ಮತ್ತೊಂದು ಸಂಜೆ ತೆರೆದುಕೊಂಡಿದೆ. ಹೆಸರು `ಡೆರ‌್ರಿ ಮೂರ್: ಈವೆನಿಂಗ್ ರಾಗಾಸ್~ ಛಾಯಾಚಿತ್ರಗಳ ಪ್ರದರ್ಶನ. ಅಕ್ಟೋಬರ್ 15ರಿಂದ ಆರಂಭವಾಗುವ ಪ್ರದರ್ಶನ ನವೆಂಬರ್ 30ರವರೆಗೆ ನಡೆಯಲಿದೆ. ವಿಶಿಷ್ಟ ಸಂವೇದನೆಯ ವಾಸ್ತುಶಿಲ್ಪ, ಭಾವಚಿತ್ರ, ಒಳಾಂಗಣ ಛಾಯಾಚಿತ್ರಗಳು ಪ್ರದರ್ಶನದಲ್ಲುಂಟು.ದಿ ಗ್ಯಾಲರಿ ಅಟ್ ಸುವಾ ಹೌಸ್, 26/1, ಕಸ್ತೂರಬಾ ಕ್ರಾಸ್ ರಸ್ತೆ ಇಲ್ಲಿ ಪ್ರದರ್ಶನ ನಡೆಯುತ್ತಿದೆ. ದಮಿಯಾನಿ ಜ್ಯೂಯಲ್ಸ್ ಹಾಗೂ ಲಕ್ಷುರ್ ಲೂಯಿಸ್ ಫಿಲಿಪ್ಪೆ ಪ್ರದರ್ಶನವನ್ನು ಪ್ರಾಯೋಜಿಸುತ್ತಿದ್ದಾರೆ. ಸಮಯ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ. ಭಾನುವಾರ ರಜೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: www.tasveerarts.com.

.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry