ಸಂಡೂರು: ಇಂದು ಮಾಜಿ ಸಚಿವ ಘೋರ್ಪಡೆ ಅಂತ್ಯಕ್ರಿಯೆ

7

ಸಂಡೂರು: ಇಂದು ಮಾಜಿ ಸಚಿವ ಘೋರ್ಪಡೆ ಅಂತ್ಯಕ್ರಿಯೆ

Published:
Updated:

ಬಳ್ಳಾರಿ: ಬೆಂಗಳೂರಿನಲ್ಲಿ ಶನಿವಾರ  ನಿಧನರಾದ ಮಾಜಿ ಸಚಿವ ಎಂ.ವೈ. ಘೋರ್ಪಡೆಯವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಭಾನುವಾರ ತರಲಾಯಿತು. ಅಭಿಮಾನಿಗಳು,  ಸಾರ್ವಜನಿಕರು, ಕುಟುಂಬ ಸದಸ್ಯರು, ಗಣ್ಯರು ಅಂತಿಮ ದರ್ಶನ ಪಡೆದರು.ಘೋರ್ಪಡೆ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಬೆಳಿಗ್ಗೆ 11ಕ್ಕೆ ಸ್ಥಳೀಯ ಮರಾಠ ಸಮಾಜದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು. ಬೆಂಗಳೂರಿನಿಂದ ಮಧ್ಯಾಹ್ನ 12ಕ್ಕೆ ರಸ್ತೆ ಮಾರ್ಗವಾಗಿ ಬಂದ ಪಾರ್ಥಿವ ಶರೀರವನ್ನು ಶಿವಪುರದ ಅವರ ನಿವಾಸದಲ್ಲಿ ಇರಿಸಲಾಗಿದೆ.  ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಪಟ್ಟಣದ ನಿವಾಸಿಗಳು, ಸತ್ತಮುತ್ತಲಿನ ಗ್ರಾಮಸ್ಥರು ಸಾಲುಗಟ್ಟಿ ನಿಂತು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಘೋರ್ಪಡೆ ಸಂಬಂಧಿಗಳಾದ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಗೋವಾ ವಿಧಾನಸಭಾಧ್ಯಕ್ಷ ಪ್ರತಾಪಸಿಂಹ ರಾಣೆ, ಘೋರ್ಪಡೆ ಅವರ ಸೋದರಿ ನಿರ್ಮಲಾ ದೇವಿ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಬಿ.ಶ್ರೀರಾಮುಲು, ಭಾಗೀರಥಿ ಮರುಳಸಿದ್ದನಗೌಡ, ಸಂಸದರಾದ ಜೆ.ಶಾಂತ, ಸಣ್ಣಫಕೀರಪ್ಪ, ಶಾಸಕರಾದ ನಾಗೇಂದ್ರ, ನೇಮಿರಾಜ ನಾಯ್ಕ, ತುಕಾರಾಂ, ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಮಾಜಿ ಶಾಸಕರಾದ ಶಂಕರರೆಡ್ಡಿ, ಶಿರಾಜ್ ಶೇಖ್, ಕೆ.ಎಸ್.ಎಲ್. ಸ್ವಾಮಿ, ಭೂಪತಿ, ಜಿಲ್ಲಾ ಪಂಚಾಯಿತಿ ಸದಸ್ಯರು ಆಗಮಿಸಿ  ಅಂತಿಮ ದರ್ಶನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry