ಗುರುವಾರ , ಜೂನ್ 17, 2021
21 °C

ಸಂಡೆ ಸೋಲ್ ಸಂತೆಯಲ್ಲಿ ರೂಪದರ್ಶಿಯರ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ವೈಟ್‌ಫೀಲ್ಡ್ ಬಳಿಯ ಕ್ರಿಕೆಟ್ ಆಟದ ಮೈದಾನದಲ್ಲಿ ‘ಸಂಡೆ ಸೋಲ್ ಸಂತೆ ಬಜಾರ್ ಯುಗಾದಿ ೨೦೧೪’ ಆಯೋಜಿಸಲಾಗಿತ್ತು.ಫ್ಯಾಷನ್ ಮತ್ತು ಜೀವನಶೈಲಿಗೆ ಸಂಬಂಧಪಟ್ಟ ಸುಮಾರು ೨೦೦ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ನಮೂನೆಯ ಕರಕುಶಲ ವಸ್ತುಗಳು, ಚಿತ್ರಕಲಾಕೃತಿ, ದೇಶಿ, ವಿದೇಶಿ ಉತ್ಪನ್ನಗಳು, ಹಳೆಯ ಮತ್ತು ಸಮಕಾಲೀನ ಮಾದರಿಯ ಚಿನ್ನಾಭರಣಗಳು ಮತ್ತು ಮಡಕೆ ಹಾಗೂ ಇತರೆ ಕರಕುಶಲ ವಸ್ತುಗಳ ಮಾರಾಟ ಏರ್ಪಡಿಸಲಾಗಿತ್ತು.ಮೋನಿತಾ ಬಾಲ್ ಅವರು ಫನ್ ಕ್ಲಬ್ ಮತ್ತು ಮನರಂಜನಾ ವಿಭಾಗದ ಕೇಂದ್ರಬಿಂದುವಾಗಿದ್ದರು. ಅಲ್ಲದೆ ಡಿಜೆ ಸ್ಟಾರ್ಲಿಂಗ್ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನರ ಮನಸೂರೆಗೊಂಡಿತು. ಅಲ್ಲದೆ, ಫ್ಯಾಷನ್ ಗುರು ಪ್ರಸಾದ್ ಬಿದಪ್ಪ ಅವರ ನೇತೃತ್ವದಲ್ಲಿ ನಡೆದ ಫ್ಯಾಷನ್‌ ಷೋನಲ್ಲಿ ರೂಪದರ್ಶಿಯರು ಹೆಜ್ಜೆ ಹಾಕಿ ವಿಶೇಷ ಗಮನ ಸೆಳೆದರು. ಮಕ್ಕಳಿಗಾಗಿಯೇ ವಿಶೇಷವಾಗಿ ಮಾಡಲಾಗಿದ್ದ ‘ಕಿಡ್ಸ್ ಕಾರ್ನರ್’ ನಲ್ಲಿ ಮಕ್ಕಳು ಗಾಳಿಪಟ ಮಾಡುವುದು, ಚಿತ್ರ ಬಿಡಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು.ಭೋಜನಪ್ರಿಯರಿಗೆ ದೇಶಿ ಮತ್ತು ವಿದೇಶಿ ಊಟದ  ವಿವಿಧ ಮಳಿಗೆಗಳು ಮತ್ತು ತರಹೇವಾರಿ ಖಾದ್ಯಗಳು ಸಹ ಲಭ್ಯವಿದ್ದವು. ಯುಗಾದಿ ಹಬ್ಬಕ್ಕೆ ಮುಂಚಿತವಾಗಿ ಏರ್ಪಡಿಸಲಾಗಿದ್ದ ಈ ಸಂಡೆ ಸೋಲ್ ಸಂತೆ ಜನರಿಗೆ ಹೆಚ್ಚು ಮನರಂಜನೆ ನೀಡಿತು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.