ಭಾನುವಾರ, ಜೂನ್ 20, 2021
23 °C

ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ; ಕೃಷ್ಣಮೂರ್ತಿಗೆ ಬಂಪರ್ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪುರುಷರ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿದ್ದವರಿಗಾಗಿ ಇರಿಸಿದ್ದ ಬಂಪರ್ ಬಹುಮಾನ ಕೃಷ್ಣಮೂರ್ತಿ ಎಂಬುವರಿಗೆ ಲಭಿಸಿದೆ.ಶಸ್ತ್ರಚಿಕಿತ್ಸೆಗೆ ಒಳಗಾದಂತಹ ವ್ಯಕ್ತಿಗಳ ಹೆಸರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಬಂಪರ್ ಬಹುಮಾನ ವಿಜೇತ ಕೃಷ್ಣಮೂರ್ತಿ ಎಂಬುವರಿಗೆ ಶಾಸಕ ಎಸ್.ಮುನಿರಾಜು ವೈಯಕ್ತಿಕವಾಗಿ ಇಲಾಖೆಗೆ ದಾನ ಮಾಡಿದ ನ್ಯಾನೊ ಕಾರಿನ ಕೀ ವಿತರಿಸಿದರು.ಆನಂತರ ಮಾತನಾಡಿದ ಅವರು, ಮಹಿಳೆಯರಂತೆ ಪುರುಷರು ಕೂಡ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಂಡು ದೇಶದಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಪ್ರಮುಖ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು.ಅಧಿಕಾರಿಗಳಾದ ಡಾ.ಎಂ.ತಿಮ್ಮಪ್ಪ, ಡಾ.ಪ್ರಭುಚಂದ್ರ, ಡಾ.ಎಂ.ಪ್ರಕಾಶ್, ರವಿಶಂಕರ್, ಮುಖಂಡರಾದ ಎಂ.ಸಿ. ಮುನಿರಾಜು, ಶ್ರೀನಿವಾಸಬಾಬು, ನವೀನ್ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.