ಸಂತುಷ್ಟ ಗೃಹಿಣಿಯಿಂದ ಕುಟುಂಬದ ಸಂತೃಪ್ತಿ

7

ಸಂತುಷ್ಟ ಗೃಹಿಣಿಯಿಂದ ಕುಟುಂಬದ ಸಂತೃಪ್ತಿ

Published:
Updated:

ವೇಣೂರು (ಬೆಳ್ತಂಗಡಿ): ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಮನೆಯ ಆರ್ಥಿಕ ನಿರ್ವಹಣೆ ಜವಾಬ್ದಾರಿಯುತವಾಗಿ ನಡೆಸಬೇಕು. ಸಂತುಷ್ಟ ಗೃಹಿಣಿಯಿಂದ ಕುಟುಂಬದ ಸಂತೃಪ್ತ ಜೀವನ ಸಾಧ್ಯ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಸನದ ಕೇಸರಿ ರತ್ನರಾಜಯ್ಯ ಹೇಳಿದರು.ವೇಣೂರಿನಲ್ಲಿ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಬುಧವಾರ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು, ಶಿಕ್ಷಣ, ಉದ್ಯೋಗದೊಂದಿಗೆ ಮಹಿಳೆ ಸ್ವಾವಲಂಬಿ ಜೀವನ ನಡೆಸಬೇಕು. ಪಾಶ್ಚಾತ್ಯ ಸಂಸ್ಕೃತಿ ಅಂಧಾನುಕರಣೆ ಮಾಡದೆ ನಮ್ಮ ಧರ್ಮ-ಸಂಸ್ಕೃತಿ ರಕ್ಷಣೆಗಾಗಿ ಮಹಿಳೆ ಶ್ರಮಿಸಬೇಕು ಎಂದರು.

ಧರ್ಮ, ಸಂಸ್ಕೃತಿ ಸಂವರ್ಧನೆಯಲ್ಲಿ ಮಹಿಳೆ ಪಾತ್ರ ಕುರಿತು ಮಾತನಾಡಿದ ರಾಜಶ್ರೀ ಎಸ್.ಹೆಗ್ಡೆ ಮಾತನಾಡಿದರು.ಬೆಂಗಳೂರಿನ ಪ್ರೊ. ವಾಣಿ ಆರ್. ಬಲ್ಲಾಳ್, `ಬದಲಾದ ಪರಿಸ್ಥಿತಿಯಲ್ಲಿ ಹಣಕಾಸಿನ ನಿರ್ವಹಣೆ~ ವಿಚಾರ ಮಂಡಿಸಿದರು.  ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಪ್ರಿಯಕಾರಿಣಿ ರಾಜೇಶ್, ಈ ಸಂದರ್ಭದಲ್ಲಿ ಮಾತನಾಡಿದರು.

 ಮನೆ ಕೆಲಸದ ಒತ್ತಡ, ಲಿಂಗ ತಾರತಮ್ಯ, ಮೇಲಧಿಕಾರಿ ಲೈಂಗಿಕ ಕಿರುಕುಳ, ಪ್ರಯಾಣ ಸಮಸ್ಯೆ ಸಹಿತ ಹಲವು ಸವಾಲುಗಳನ್ನು ಉದ್ಯೋಗಸ್ಥ ಮಹಿಳೆ ಅನಿವಾರ್ಯವಾಗಿ ಎದುರಿಸಬೇಕಿದೆ. ಧೈರ್ಯ, ಸಕಾರಾತ್ಮಕ ಭಾವ, ಸ್ವಂತಿಕೆ ಉಳಿಸಿಕೊಂಡು ದೃಢಸಂಕಲ್ಪ, ಆತ್ಮವಿಶ್ವಾಸದಿಂದ ಇಂಥ ಸವಾಲುಗಳನ್ನು ಎದುರಿಸಬೇಕು ಎಂದು ಜಾಗೃತಿ ಮೂಡಿಸಲೆತ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry