ಶುಕ್ರವಾರ, ಮೇ 27, 2022
30 °C

ಸಂತ್ರಸ್ತರ ಮನೆಗಳಿಗೆ ಶಾಸಕರ ನೇತೃತ್ವದ ತಂಡ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂದಿಕೂರು (ಪಡುಬಿದ್ರಿ): `ವಿವಾದಿತ ಯುಪಿಸಿಎಲ್ ವಿದ್ಯುತ್ ಸ್ಥಾವರ ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿದ್ದು, ಕೇಂದ್ರ ಸರ್ಕಾರದ ಸಹಕಾರವೂ ಈ ಕಂಪೆನಿಗೆ ಇದೆ~ ಎಂದು ಶಾಸಕ ಲಾಲಾಜಿ ಮೆಂಡನ್ ಆರೋಪಿಸಿದರು.ಸ್ಥಾವರ ಸಂತ್ರಸ್ತ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

`ಕಂಪೆನಿ ಸ್ಥಾಪನೆಯಾದಾಗ ಪರವಾನಗಿ ಪಡೆದಿರಲಿಲ್ಲ. ಹಿಂದಿನ ಕೇಂದ್ರ,  ರಾಜ್ಯ ಸರ್ಕಾರಗಳು ಯೋಜನೆಗೆ ಅನುಮತಿ ನೀಡಿವೆ. ಸ್ಥಾವರದಿಂದ ಸ್ಥಳೀಯ ಜನರು ದಿನನಿತ್ಯ ಸಮಸ್ಯೆಗೊಳಗಾಗುತ್ತಿರುವುದ ನಿಜ.ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ  ಸ್ಥಾವರ ಮುಚ್ಚುವ ಪ್ರಶ್ನೆಯೇ ಇಲ್ಲ. ಇದರಿಂದಆಗುತ್ತಿರುವ ಸಮಸ್ಯೆ ಬಗ್ಗೆ ಸರ್ಕಾರದ ಗಮನಸೆಳೆದು ಪರಿಹಾರ ಕಂಡುಕೊಳ್ಳುವುದಾಗಿ~ ಭರವಸೆ ನೀಡಿದರು.`ಸ್ಥಳೀಯರು ಕಂಪೆನಿಯಿಂದಾಗಿ ಹಲವಾರು ರೀತಿಯ ಸಮಸ್ಯೆ ಎದುರಿಸಿದ್ದಾರೆ. ಈ ನಿಟ್ಟಿನಲ್ಲಿ ಕಂಪೆನಿ ಶೀಘ್ರ ಸೂಕ್ತ ವ್ಯವಸ್ಥೆ ಮಾಡದಿದ್ದಲ್ಲಿ ಕಂಪೆನಿಯನ್ನು ತಾತ್ಕಾಲಿಕ ಮುಚ್ಚಲು ಹಿಂಜರಿಯುವುದಿಲ್ಲ~ ಎಂದು ಜಿ.ಪಂ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಎಚ್ಚರಿಸಿದರು.`ಎರಡು ದಿನಗಳಲ್ಲಿ ಸಭೆ ಕರೆದು ಚರ್ಚಿಸಿ ಕಂಪೆನಿಯಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು~ ಎಂದು ಹೇಳಿದರು.ಚುನಾವಣಾ ಗಿಮಿಕ್ ಅಲ್ಲ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, `ಈ ಭೇಟಿ ಚುನಾವಣಾ ಗಿಮಿಕ್ ಅಲ್ಲ~ ಎಂದರು.  ಯುಪಿಸಿಎಲ್‌ಗೆ 138 ಎಕ್ರೆ ಜಾಗ ನೀಡಿದ ಕೊಳಚೂರು ಗುತ್ತು ಕುಟುಂಬದ ಮನೆಗೆ, ಕೊಳಚೂರು ಗರಡಿ, ಭೋಜ ಶೆಟ್ಟಿ ಮನೆಗೂ ತಂಡ ಭೇಟಿ ನೀಡಿ ಅಹವಾಲು ಆಲಿಸಿತು.ತಾ.ಪಂ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಜಿ.ಪಂ ಸದಸ್ಯ ಅರುಣ್‌ಶೆಟ್ಟಿ ಪಾದೂರು, ನವೀನ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮಾಕಾಂತ್ ದೇವಾಡಿಗ, ವಿಜಯಲಕ್ಷ್ಮಿ ಆಚಾರ್ಯ, ನಾಗೇಶ್ ಭಟ್, ಜಯಂತ್ ಭಟ್, ಲಕ್ಷ್ಮಣ್ ಶೆಟ್ಟಿ, ಶ್ರೀನಿವಾಸ ಶರ್ಮ, ಪ್ರವೀಣ್ ಶೆಟ್ಟಿ ಗುರ್ಮೆ, ಮನೋಹರ್ ಶೆಟ್ಟಿ, ಐತಪ್ಪ ಪೂಜಾರಿ, ಜಗನ್ನಾಥ್ ಶೆಟ್ಟಿ ಕೊಳಚೂರು, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ,  ಕೃಷ್ಣ ಶೆಟ್ಟಿ, ನಾಗರಾಜ ಶೆಟ್ಟಿ, ಹರೀಶ್ ಶೆಟ್ಟಿ, ದಾಮೋದರ, ಅಶೋಕ್ ಪೂಜಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.