ಸಂದೀಪ್ ರಾವ್‌ಗೆ ಯುವ ವಿಜ್ಞಾನಿ ಪ್ರಶಸ್ತಿ

7

ಸಂದೀಪ್ ರಾವ್‌ಗೆ ಯುವ ವಿಜ್ಞಾನಿ ಪ್ರಶಸ್ತಿ

Published:
Updated:
ಸಂದೀಪ್ ರಾವ್‌ಗೆ ಯುವ ವಿಜ್ಞಾನಿ ಪ್ರಶಸ್ತಿ

ಮಡಿಕೇರಿ: ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಯು ಉಡುಪಿ ಜಿಲ್ಲೆಯ ಕನ್ನಾರಪಾಡಿಯ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ಸಂದೀಪ್ ರಾವ್ ಕೊರಡ್ಕಳ್ ಅವರಿಗೆ ಲಭಿಸಿದೆ.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಶನಿವಾರ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಚಿಕ್ಕಮಗಳೂರು ಸಂತ ಜೋಸೆಫರ ಬಾಲಕರ ಪ್ರೌಢಶಾಲೆಯ ಬಿ.ಸಿ.ನಿತಿನ್ ವಿವೇಕ್ ದ್ವಿತೀಯ ಸ್ಥಾನ ಪಡೆದರೆ, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಎಸ್‌ಎಸ್ ಪಾಟೀಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾಜಿದ್ ಆರ್. ದಫೇದಾರ್ ಅವರಿಗೆ ತೃತೀಯ ಸ್ಥಾನ ಲಭಿಸಿದೆ.ಯುವ ವಿಜ್ಞಾನಿಗಳಿಗೆ  ಕ್ರಮವಾಗಿ ರೂ.10 ಸಾವಿರ, ರೂ.7 ಸಾವಿರ , ರೂ.5 ಸಾವಿರ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry