ಸಂದೀಪ್-ವಿಹಾರ್ ಉತ್ತಮ ಆಟ

7

ಸಂದೀಪ್-ವಿಹಾರ್ ಉತ್ತಮ ಆಟ

Published:
Updated:

ಧಾರವಾಡ: ಸಂದೀಪ್ ಅಸೂಟಿ (17ಕ್ಕೆ4) ಉತ್ತಮ ಬೌಲಿಂಗ್ ಮತ್ತು ವಿಹಾರ್ ಭಟ್ (ಅಜೇಯ 50; 39ಎಸೆತ, 5ಬೌಂಡರಿ) ಅರ್ಧಶತಕದ ನೆರವಿನಿಂದ ಕೆ.ಇ. ಬೋರ್ಡ್ಸ್ ಶಾಲೆಯು ಇಲ್ಲಿ ನಡೆಯುತ್ತಿರುವ ಕಾಸ್ಮಸ್ ಕಪ್ ಟೂರ್ನಿಯಲ್ಲಿ ಭಾನುವಾರ 6 ವಿಕೆಟ್‌ಗಳಿಂದ ಆರ್‌ಎಲ್‌ಎಸ್ ಶಾಲೆ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಪವನ ಶಾಲೆ ತಂಡವು 110 ರನ್ನುಗಳಿಂದ ಬಾಸೆಲ್ ಮಿಷನ್ (ಬಿ) ತಂಡದ ವಿರುದ್ಧ ಜಯಿಸಿತು. ಸ್ಕೋರು: ಆರ್‌ಎಲ್‌ಎಸ್ ಶಾಲೆ ಧಾರವಾಡ: 20 ಓವರುಗಳಲ್ಲಿ 9 ವಿಕೆಟ್‌ಗಳಿಗೆ 129 (ಶಿವಯೋಗಿ ಡಿಗ್ಗಿಮಠ 20, ಸಂದೀಪ್ ಅಸೂಟಿ 17ಕ್ಕೆ4) ; ಕೆಇ ಬೋರ್ಡ್ಸ್ ಇಂಗ್ಲಿಷ್ ಶಾಲೆ: 14 ಓವರುಗಳಲ್ಲಿ 4 ವಿಕೆಟ್‌ಗಳಿಗೆ 131 (ವಿಹಾರ್ ಭಟ್ ಔಟಾಗದೇ 50, ಪ್ರವೀಣ ಹಿರೇಮಠ 18, ವೆಂಕಟೇಶ ಪೂಜಾರ 20ಕ್ಕೆ2, ಪೂರ್ವಜ್ ಕಟ್ಟಿ 16ಕ್ಕೆ2) ಫಲಿತಾಂಶ: ಕೆಇಬೋರ್ಡ್ಸ್ ಶಾಲೆಗೆ 6 ವಿಕೆಟ್ ಜಯ.ಪವನ ಶಾಲೆ ಧಾರವಾಡ: 25 ಓವರುಗಳಲ್ಲಿ 3 ವಿಕೆಟ್‌ಗೆ 205 (ಮಂಜುನಾಥ ವೆಲ್ಲೂರ 62, ಅಕ್ಷಯ್ ಹಿರೇಮಠ 53, ನಿರಂಜನ್ 41ಕ್ಕೆ2); ಬಾಸೆಲ್ ಮಿಷನ್ (ಬಿ) ಧಾರವಾಡ: 16 ಓವರುಗಳಲ್ಲಿ 95 (ಅಜಯ್ ಪಾಟೀಲ 18, ಸಿದ್ಧಾರ್ಥ 23ಕ್ಕೆ4, ಅರಭಾಜ್ ಅಹ್ಮದ್ 24ಕ್ಕೆ2) ಫಲಿತಾಂಶ: ಪವನ ಶಾಲೆಗೆ 110 ರನ್ನುಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry