ಸಂಪನ್ಮೂಲಗಳ ಮಿತಬಳಕೆ ಅಗತ್ಯ

ಶುಕ್ರವಾರ, ಮೇ 24, 2019
23 °C

ಸಂಪನ್ಮೂಲಗಳ ಮಿತಬಳಕೆ ಅಗತ್ಯ

Published:
Updated:

ಜಮಖಂಡಿ: ಸುಧಾರಣೆಯ ಸೋಗಿನಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹಾಳಾಗುತ್ತಿವೆ. ಕಾರಣ ಸರಳ ಜೀವನ ನಡೆಸಬೇಕು. ನೈಸರ್ಗಿಕ ವಸ್ತುಗಳನ್ನು ಹಿತಮಿತವಾಗಿ ಬಳಸುವುದರ ಜೊತೆಗೆ ಪುನರ್ ಬಳಕೆ ಮಾಡಬೇಕು ಎಂದು ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಹೇಳಿದರು.ಅವರು ಸ್ಥಳೀಯ ಬಿಎಲ್‌ಡಿಇಎ ಕಾಲೇಜಿನ ಎನ್‌ಎಸಿಸಿ ಹಾಗೂ ಎನ್‌ಎಸ್‌ಎಸ್ ಘಟಕಗಳು ಜಂಟಿಯಾಗಿ ಏರ್ಪಡಿಸಿದ್ದ `ನನ್ನ ಭೂಮಿ-ನನ್ನ ಕರ್ತವ್ಯ~ ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜನಸಂಖ್ಯೆ ಹೆಚ್ಚುತ್ತಿದೆ. ಕೃಷಿಭೂಮಿ ಕ್ಷೇತ್ರ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಪಾಯಕಾರಿ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಪಿ. ಗಿರಡ್ಡಿ, ಭೂಮಿಯ ಮೇಲಿನ ಒಟ್ಟು ನೀರಿನ ಪ್ರಮಾಣದ ಪೈಕಿ ಶೇ. 97ರಷ್ಟಿರುವ ಸಮುದ್ರದ ನೀರು ನಿರುಪಯುಕ್ತವಾಗಿದೆ.

 

ಶೇ. 2ರಷ್ಟು ನೀರು ಹಿಮದ ರೂಪದಲ್ಲಿದೆ. ಶೇ.1 ಕ್ಕಿಂತ ಕಡಿಮೆ ಪ್ರಮಾಣದ ನೀರು ಮಾತ್ರ ನೀರಾವರಿಗೆ ಮತ್ತು ಕುಡಿಯಲು ಯೋಗ್ಯವಾಗಿದೆ. ಮುಂದೊಂದು ದಿನ ಶುದ್ಧ ಕುಡಿಯುವ ನೀರು ದೊರೆಯುವುದು ಅಸಾಧ್ಯವಾಗಬಹುದು ಎಂದರು.ಎನ್‌ಸಿಸಿ ಅಧಿಕಾರಿ ಡಾ.ಆರ್.ಟಿ. ಪತ್ತಾರ `ಪರಿಸರ ರಕ್ಷಣೆ~ಯ ಪ್ರತಿಜ್ಞಾ ವಿಧಿಯನ್ನು ಎನ್‌ಸಿಸಿ ಕೆಡೆಟ್‌ಗಳಿಗೆ ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಬೋಧಿಸಿದರು. ವಿಜಾಪುರ ಎನ್‌ಸಿಸಿ ಬಟಾಲಿಯನ್‌ನ ಅಧಿಕಾರಿ ತನ್ವೀರ್ ಸಿಂಗ್ ವೇದಿಕೆಯಲ್ಲಿದ್ದರು.ವಿದ್ಯಾ ಹೊಸಕೋಟಿ, ವೀಣಾ ಪ್ರಾರ್ಥನಾ ಗೀತೆ ಹಾಡಿದರು. ರವೀಂದ್ರ ಬಿರಾದಾರ ಸ್ವಾಗತಿಸಿದರು.  ಶಿವಯ್ಯ ಹಿರೇಮಠ ನಿರೂಪಿಸಿದರು.ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಎ.ವಿ. ಸೂರ್ಯವಂಶಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry