ಸಂಪನ್ಮೂಲ ಸದ್ಬಳಕೆ: ವಿದ್ಯಾರ್ಥಿಗಳಿಗೆ ಕರೆ

7

ಸಂಪನ್ಮೂಲ ಸದ್ಬಳಕೆ: ವಿದ್ಯಾರ್ಥಿಗಳಿಗೆ ಕರೆ

Published:
Updated:
ಸಂಪನ್ಮೂಲ ಸದ್ಬಳಕೆ: ವಿದ್ಯಾರ್ಥಿಗಳಿಗೆ ಕರೆ

ಬೆಂಗಳೂರು:  ‘ಎಂಜಿನಿಯರಿಂಗ್ ಕ್ಷೇತ್ರ ದಿನದಿಂದ ದಿನಕ್ಕೆ ಬದಲಾವಣೆ ಹೊಂದುತ್ತಿದ್ದು, ಸಂಪನ್ಮೂಲಗಳ ಸದ್ಬಳಕೆಯ ಬಗ್ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಗಮನ ಹರಿಸಬೇಕು’ ಎಂದು ಕೆನಡಾದ ಮ್ಯೋಕ್‌ಮಾಸ್ಟರ್ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಮ ಶಂಕರ್ ಸಿಂಗ್ ಹೇಳಿದರು.ನಗರದ ಪಿಇಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಮಿತವಾದ ಸಂಪನ್ಮೂಲಗಳನ್ನು ಬಳಸಿಕೊಂಡು ಅಪರಿಮಿತ ಸೇವೆ ಹಾಗೂ ಉತ್ಪನ್ನಗಳನ್ನು ಒದಗಿಸುವುದು ಇಂದಿನ ಸವಾಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಸಂಶೋ­ಧನೆ­ಯಲ್ಲಿ ತೊಡಗಬೇಕು’  ಎಂದು ಅವರು ಕರೆ ನೀಡಿದರು.ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರೊ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ‘ಇಂಧನ, ಭದ್ರತೆ, ಸಾರಿಗೆ, ಆಹಾರ, ಆರೋಗ್ಯ, ನೀರಿನ ಪೂರೈಕೆ ಹಾಗೂ ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳನ್ನು ಮಾನವ ಜನಾಂಗ ಎದುರಿಸುತ್ತಿದೆ. ತಂತ್ರಜ್ಞಾನಗಳನ್ನು ಉಪಯೋಗಿಸಿ ಸದ್ಯದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುವತ್ತ ವಿಶ್ವವಿದ್ಯಾಲಯಗಳು, ಪ್ರಯೋಗಾಲಯಗಳು ಹಾಗೂ ಖಾಸಗಿ ಕಂಪನಿಗಳು ಕಾರ್ಯನಿರತ­ವಾಗಿವೆ.

ಪ್ರಸ್ತುತ ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಬೇಕು’ ಎಂದರು. ಕಾರ್ಯಕ್ರಮದಲ್ಲಿ 830 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry