ಸಂಪರ್ಕ ರಸ್ತೆ ಕಾಮಗಾರಿ ಅವೈಜ್ಞಾನಿಕ: ಆರೋಪ

7

ಸಂಪರ್ಕ ರಸ್ತೆ ಕಾಮಗಾರಿ ಅವೈಜ್ಞಾನಿಕ: ಆರೋಪ

Published:
Updated:
ಸಂಪರ್ಕ ರಸ್ತೆ ಕಾಮಗಾರಿ ಅವೈಜ್ಞಾನಿಕ: ಆರೋಪ

ಹುಣಸೂರು: ಪಟ್ಟಣದ ಬಸ್ ನಿಲ್ದಾಣದಿಂದ ಬೆಂಗಳೂರು-ಮಂಗಳೂರು ವಿಭಜಿತ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸದೆ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುತ್ತಿದೆ.ಬಸ್ ನಿಲ್ದಾಣದಿಂದ ಏಕಮುಖವಾಗಿ ಸಂಚರಿಸಬೇಕಿದ್ದ ವಾಹನಗಳ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಶಾಸಕ  ಎಚ್. ಪಿ.ಮಂಜುನಾಥ್, ಪುರಸಭೆ ಸದಸ್ಯ ಮೊಯುದ್ದಿನ್ ಅವರಿಗೆ ಸೇರಿದ ಭೂಮಿಯನ್ನು ಕೆಲವೊಂದು ಷರತ್ತುಗಳ ಮೇಲೆ ರಸ್ತೆ ಸಾರಿಗೆ ಇಲಾಖೆಗೆ ಹಸ್ತಾಂತರ ಮಾಡಿಕೊಡಿಸಿದ್ದರು.ಇಲಾಖೆಗೆ ಹಸ್ತಾಂತರಗೊಂಡ ಬಳಿಕ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಈ ಭಾಗದಲ್ಲಿದ್ದ ಕಟ್ಟಡಗಳನ್ನು ಸಮರ್ಪಕವಾಗಿ ತೆರವುಗೊಳಿಸದೆ  ಚರಂಡಿ ನಿರ್ಮಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಬಸವಲಿಂಗಯ್ಯ ಆರೋಪಿಸಿದ್ದಾರೆ.ಹೊಸದಾಗಿ 40 ಅಡಿ ರಸ್ತೆ ನಿರ್ಮಿಸುತ್ತಿರುವ ಸ್ಥಳದ ಒಂದು ಭಾಗದಲ್ಲಿ ಆರ್.ಸಿ.ಸಿ. ಚಾವಣಿ ತೆರವುಗೊಳಿಸದೆ ರಸ್ತೆ ನಿರ್ಮಾಣ ನಡೆದಿದ್ದು, ಮತ್ತೊಂದು ಭಾಗದಲ್ಲಿ ರಸ್ತೆಯ ಚರಂಡಿ ಮನೆಯೊಂದರ ಅಡಿಪಾಯಕ್ಕೆ ಸೇರಿಕೊಂಡಿದೆ.

 

ವಾಸ್ತವವಾಗಿ ರಸ್ತೆಗೆ ಹೊಂದಿಕೊಂಡಿರುವ ಮನೆ ಅಥವಾ ಯಾವುದೇ ಕಟ್ಟಡವಿದ್ದರೂ ತೆರವುಗೊಳಿಸಿ ಬಸ್ ಸಂಚಾರಕ್ಕೆ ಸುಗಮ ಮಾರ್ಗ ನಿರ್ಮಿಸಬೇಕು ಎಂಬ ನಿಯಮವಿದ್ದರೂ ಇಲಾಖೆ ಅಧಿಕಾರಿಗಳು ಎಲ್ಲಾ ನಿಯಮವನ್ನು ಗಾಳಿಗೆ ತೂರಿ ರಸ್ತೆ ಕಾಮಗಾರಿಯನ್ನು ಆತುರದಲ್ಲಿ ಮುಕ್ತಾಯಗೊಳಿಸುತ್ತಿದ್ದಾರೆ ಎಂದು ದೂರಿದ್ದಾರೆ.ತೆರವುಗೊಳಿಸಿ: ರಸ್ತೆ ನಿರ್ಮಾಣಕ್ಕೂ ಮುನ್ನ ಅಡ್ಡಲಾಗಿರುವ ಕಟ್ಟಡವನ್ನು ಸಂಪೂರ್ಣ ತೆರವು ಗೊಳಿಸಿ ಕಾಮಗಾರಿ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ  ದಿನಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ.ಭೂ ಮಾಲೀಕ ಮೊಹಿದುಲ್ಲಾ ಅವರ ಸಹೋದರ ನವಿದುಲ್ಲಾ ಮಾತನಾಡಿ, ಸರ್ಕಾರಕ್ಕೆ 40 *150 ಅಡಿ ಭೂಮಿಯನ್ನು ಒಪ್ಪಂದದಂತೆ  ಹಸ್ತಾಂತರ ಮಾಡಿದ್ದೇವೆ. ಈ ಹಿಂದೆ ನಿರ್ಮಿಸಿದ ಕಟ್ಟಡತೆರವುಗೊಳಿಸಬೇಕಿದ್ದು,ಈಗಾಗಲೇ ಒಂದು ಭಾಗ ತೆರವುಗೊಳಿಸಿದೆ. ಆರ್.ಸಿ.ಸಿ. ಚಾವಣಿ ತೆರವುಗೊಳಿಸಿವ ಕಾರ್ಯ ಬಾಕಿ ಇದೆ ಎಂದು ತಿಳಿಸಿದರು. 40 ಅಡಿ ಅಗಲ ಭೂಮಿ ನೀಡಿದ್ದು, ರಸ್ತೆ ಸಾರಿಗೆ ಇಲಾಖೆ 40 ಅಡಿಯೂ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಚರಂಡಿ ನಿರ್ಮಿಸಲು ಸ್ಥಳವಿಲ್ಲದೆ  ನಮಗೆ ಸೇರಿದ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಿಸುತ್ತಿದ್ದಾರೆ. ಇದರಲ್ಲಿ ತಮ್ಮ ತಪ್ಪು ಏನೂ ಇಲ್ಲ ಎಂದು ತಿಳಿಸಿದ್ದಾರೆ.ಫುಟ್‌ಪಾತ್ ಮಾಯ: ಹೊಸದಾಗಿ ನಿರ್ಮಿಸುತ್ತಿರುವ ರಸ್ತೆಯಲ್ಲಿ ಪಾದಚಾರಿ ರಸ್ತೆ ಇಲ್ಲ. ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ರಸ್ತೆಯಲ್ಲೇ ನಡೆದು ಬಸ್ ನಿಲ್ದಾಣಕ್ಕೆ ಬರಬೇಕಿದ್ದು, ಸಾರಿಗೆ ಬಸ್ ಚಾಲಕರು ಜಾಗರೂಕರಾಗಿ ಬಸ್ ಚಲಿಸಬೇಕಿದೆ. ತಪ್ಪಿದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry