ಭಾನುವಾರ, ಏಪ್ರಿಲ್ 11, 2021
22 °C

ಸಂಪುಟಕ್ಕೆ ರಾಹುಲ್ ಪ್ರವೇಶ ಸ್ವಾಗತಾರ್ಹ: ಪ್ರಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ಅವರಿಗೆ ~ದೊಡ್ಡ ಪಾತ್ರ~ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನಲ್ಲಿ ಹೆಚ್ಚುತ್ತಿರುವುದರ ಮಧ್ಯೆಯೇ ಪ್ರಧಾನಿ ಮನಮೋಹನ್ ಸಿಂಗ್ ಅವರು  ~ಸಂಪುಟಕ್ಕೆ ಯುವ ನಾಯಕನ ಪ್ರವೇಶ ಸ್ವಾಗತಾರ್ಹ ಬೆಳವಣಿಗೆ~ ಎಂಬುದಾಗಿ ಶನಿವಾರ ಹೇಳಿದ್ದಾರೆ.~ಸರ್ಕಾರಕ್ಕೆ ರಾಹುಲ್ ಗಾಂಧಿ ಅವರ ಪ್ರವೇಶವನ್ನು ನಾನು ಎಂದಿನಿಂದಲೋ ಸ್ವಾಗತಿಸುತ್ತಾ ಬಂದಿದ್ದೇನೆ~ ಎಂದು ಸಿಂಗ್ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.ಈವರೆಗೆ ಎನ್ ಎಸ್ ಯು ಐ ಮತ್ತು ಯುವ ಕಾಂಗ್ರೆಸ್ಸಿನಲ್ಲಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸಮಾಡುತ್ತಿರುವುದಕ್ಕಿಂತ ~ದೊಡ್ಡ ಪಾತ್ರ~ವನ್ನು ರಾಹುಲ್ ಗಾಂಧಿಯವರು ವಹಿಸಬಹುದು ಎಂಬ ಸೂಚನೆಗಳು ಬರುತ್ತಿರುವ ಹೊತ್ತಿನಲ್ಲಿಯೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಬಂದಿರುವ ಈ ಹೇಳಿಕೆ ಭಾರಿ ಮಹತ್ವ ಪಡೆದಿದೆ.ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದರೆ ರಾಹುಲ್ ಗಾಂಧಿಯವರು ಹೆಚ್ಚಿನ ಪಾತ್ರ ವಹಿಸಬಹುದು. ಇದೇ ಸಮಯದಲ್ಲಿ ಮುಂದಿನ ಮಹಾಚುನಾವಣೆಗೆ ಮುನ್ನ ಪ್ರಧಾನಿಯಾಗಿ ಬಿಂಬಿಸುವುದಕ್ಕೂ ಮೊದಲು ಅವರು ಸಂಪುಟ ಸಚಿವರಾಗಿ ಸರ್ಕಾರದಲ್ಲಿ ಪಾಲ್ಗೊಳ್ಳುವುದು ಒಳಿತು ಎಂಬುದಾಗಿ ಕಾಂಗ್ರೆಸ್ಸಿನ ಒಂದು  ವರ್ಗ ಭಾವಿಸುತ್ತಿದೆ.ಕಾಂಗ್ರೆಸ್ ಮತ್ತು ಸರ್ಕಾರದಲ್ಲಿ ತಾವು ಹೆಚ್ಚು ಸಕ್ರಿಯ ಪಾತ್ರ ವಹಿಸುವುದಾಗಿ ರಾಹುಲ್ ಸ್ವತಃ ಕಳೆದ ತಿಂಗಳು ಹೇಳಿದ್ದರು. ಆದರೆ ಸಮಯವನ್ನು ಪಕ್ಷದ ಇಬ್ಬರು ವರಿಷ್ಠರಾದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ನಿರ್ಧರಿಸುವರು ಎಂದು ತಿಳಿಸಿದ್ದರು.ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮತ್ತು ಸರ್ಕಾರದಲ್ಲಿ ಏಕಕಾಲದಲ್ಲಿ ನಾಯಕರು ಜವಾಬ್ದಾರಿ ನಿರ್ವಹಿಸಿದ ಉದಾಹರಣೆಗಳು ಇದ್ದು, ಏಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಗುಲಾಂ ನಬಿ ಆಜಾದ್ ಮತ್ತು ಮುಕುಲ್ ವಾಸ್ನಿಕ್ ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.ರಾಹುಲ್ ಗಾಂಧಿ ಅವರನ್ನು ಉಪಾಧ್ಯಕ್ಷ ಅಥವಾ ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಮಾತುಗಳೂ ಕೇಳಿ ಬಂದಿದ್ದು, ಪಕ್ಷದ ಮುಖ್ಯಸ್ಥರಾದ ಸೋನಿಯಾ ಗಾಂಧಿ ಅವರು ಸಕ್ರಿಯಪಾತ್ರ ವಹಿಸದಿದ್ದರೆ ಮಾತ್ರ ಈ ಸಾಧ್ಯತೆ ಇದೆ ಕಾಂಗ್ರೆಸ್ ಮೂಲಗಳು ಹೇಳಿವೆ.ಸೆಪ್ಟೆಂಬರ್ ತಿಂಗಳಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ಮುಗಿದ ಬಳಿಕ ಸರ್ಕಾರದಲ್ಲಿ ವ್ಯಾಪಕ ಬದಲಾವಣೆಗಳು ಆಗುವ ಸಾಧ್ಯತೆಗಳು ಇವೆ ಎಂಬುದಾಗಿ ಪಕ್ಷದ ಮೂಲಗಳು ಹೇಳುತ್ತಿವೆ.ಮುಂದಿನ ತಿಂಗಳು ಸಂಪುಟ ಪುನರ್ರಚನೆ ಸಾಧ್ಯತೆ ಬಗ್ಗೆ ಪ್ರಶ್ನಿಸಿದಾಗ ಪ್ರಧಾನಿ ~ಅದು ಆದಾಗ ನಿಮಗೇ ಗೊತ್ತಾಗುತ್ತದೆ~ ಎಂದು ಉತ್ತರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.