ಶುಕ್ರವಾರ, ಜೂನ್ 18, 2021
25 °C

ಸಂಪೂರ್ಣ ಪರೀಕ್ಷಾ ಶುಲ್ಕ ವಸೂಲಿಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಯಾವುದೇ ಶುಲ್ಕ ವಿನಾಯಿತಿ ಇಲ್ಲದೇ ಸಂಪೂರ್ಣ ಪರೀಕ್ಷೆ ಶುಲ್ಕವನ್ನು ಭರಿಸಬೇಕೆನ್ನುವ ಕಾಲೇಜಿನ ನಿರ್ಧಾರದ ವಿರುದ್ಧ ಎಐಡಿಎಸ್ಓ ಹಾಗೂ ಎಐಡಿವೈಓ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.ಸಂಘಟನೆಯ ಮುಖಂಡರೊಂದಿಗೆ ಪ್ರಾಚಾ ರ್ಯರು ಮಾತುಕತೆ ನಡೆಸಿ ದರು. ನಗರದ ಬಹುತೇಕ ಪದವಿ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ನೀಡಿದ್ದು, ಈ ಕಾಲೇಜಿನಲ್ಲಿ ಮಾತ್ರ ಸಂಪೂರ್ಣ ಶುಲ್ಕ ಏಕೆ ತೆಗೆದುಕೊಳ್ಳು ತ್ತಿದೆ ಎಂಬುದಕ್ಕೆ ಸಮರ್ಪಕ ಉತ್ತರ ದೊರೆಯದಿದ್ದಾಗ ವಿದ್ಯಾರ್ಥಿಗಳೆಲ್ಲರೂ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೆೇಶಕರ ಬಳಿಗೆ ತೆರಳಿದರು.ಜಂಟಿ ನಿರ್ದೇಶಕ ಡಾ.ದೇವಾನಂದ ಗಾಂವಕರ್‌, ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸುಮಾ ರು ಹೊತ್ತು ಚರ್ಚಿಸಿದ ನಂತರ ಶುಲ್ಕ ವಿನಾಯಿತಿ ಘೋಷಿಸಿದರು.ವಿದ್ಯಾರ್ಥಿಗಳು ಕಳೆದ ಸೆಮಿಸ್ಟರ್‌ ನಲ್ಲಿ ಕಟ್ಟಿದಷ್ಟೇ ವಿನಾಯಿತಿ ಸಹಿತ ಶುಲ್ಕವನ್ನು ಕಟ್ಟಬೇಕೆಂದು ಹೇಳಿದರು.

ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಶರಣು ಗೋನವಾರ, ಎಐಡಿವೈಓ ಉಪಾಧ್ಯಕ್ಷ ರಮೇಶ ಹೊಸಮನಿ ಹೋರಾಟದ ನೇತೃತ್ವ ವಹಿಸಿದ್ದರು.ಮಂಜುಳಾ, ಬಸವರಾಜ, ದೇವರಾಜ, ಲಾಲ ಸಾಬ್‌ ಮುಂತಾದವರು ಹೋರಾಟದಲ್ಲಿ ಭಾಗ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.