ಸೋಮವಾರ, ಮೇ 25, 2020
27 °C

ಸಂಪ್ರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಕ್ಷತ್ರ’ (1960), ‘ಸಂಕ್ರಾಂತಿ’ (1965) ಎನ್ನುವ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರುವ ಧಾರವಾಡದ ಪ್ರೊ.ಆರ್.ವ್ಹಿ.ಹೊರಡಿ ನಲವತ್ತೈದು ವರ್ಷಗಳ ನಂತರ ತಮ್ಮ ಮೂರನೇ ಸಂಕಲನ ‘ಸಂಪ್ರಿಯಾ’ ಪ್ರಕಟಿಸಿದ್ದಾರೆ. ಈ ಸಂಕಲನದ ಇಪ್ಪತ್ತೊಂಬತ್ತು ಕವಿತೆಗಳು ಹಾಗೂ ಐವತ್ತೆಂಟು ಹನಿಗವಿತೆಗಳ ವಸ್ತು ಹಾಗೂ ಶಿಲ್ಪವನ್ನು ನೋಡಿದರೆ, ಕಳೆದ ನಾಲ್ಕೂವರೆ ದಶಕಗಳಲ್ಲಿ ಕನ್ನಡ ಕಾವ್ಯಲೋಕದಲ್ಲಿ ಹರಿದ ನೀರನ್ನು ಹೊರಡಿ ಅವರು ಗಮನಿಸಿಲ್ಲ ಅನ್ನಿಸುತ್ತದೆ. ಕೆಲವು ತುಣುಕುಗಳನ್ನು ನೋಡಿ:

‘ಹೆಸರು ಮೋಹನದಾಸ/ ಉಸಿರು ಭಾರತ ದೇಶ/ ಮನುಕುಲದ ಉನ್ನತಿಯೆ ಅವನ ಘನ ಉದ್ದೇಶ’‘ನಮ್ಮದು ರಜಾಪ್ರಿಯರ/ ಪ್ರಜಾಪ್ರಭುತ್ವ! ವಿಧಾನ-/ ಸೌಧದಲಿ ಎಲ್ಲವೂ ನಿಧಾನ/ ‘ಆಗ ಬಾ, ಈಗ ಬಾ/ ಹೋಗಿ ಬಾ’ ಎಂದೆನುವ/ ಅಧಿಕಾರಿಗಳ ಅಧ್ವಾನ’‘ಈಗ ಈ ದೇಶದ ಮುಖ್ಯ/ ಕಸಬು- ಕೃಷಿಯಲ್ಲ!/ ಡೆಮಾಕ್ರಸಿಯ ಹೆಸರಲ್ಲಿ/ ಹುಲುಸಾಗಿ ಬೆಳೆದಿದೆ ಹಿಪಾಕ್ರಸಿ!/ ಪ್ರಜೆ ಪ್ರಭುವಲ್ಲ/ ಪರದೇಶಿ’ಹೀಗೆ, ಪ್ರಾಸಬದ್ಧವಾಗಿ ಬರೆಯುವ ಕವಿ, ಒಂದೆಡೆ ಗಾಂಧಿತತ್ವಗಳನ್ನು ಆರಾಧಿಸುತ್ತ, ಇನ್ನೊಂದೆಡೆ ವ್ಯವಸ್ಥೆ ಕಲುಷಿತಗೊಳುತ್ತಿರುವ ಬಗೆಗೆ ಮರುಗುತ್ತಾರೆ. ಈ ಆರಾಧನೆ-ವಿಷಾದಗಳ ನಡುವೆ ಇರಬಹುದಾದ ಕಾವ್ಯವನ್ನು ದಕ್ಕಿಸಿಕೊಳ್ಳುವ ಪ್ರಯತ್ನಕ್ಕೆ ಹೊರಡಿ ಅವರು ಕೈಹಾಕಿಲ್ಲ.ಸಂಪ್ರಿಯಾ

ಪ್ರೊ.ಆರ್.ವ್ಹಿ.ಹೊರಡಿ; ಪು:120; ಬೆ: ರೂ.60; ಪ್ರ: ಕಣ್ವ ಪ್ರಕಾಶನ, ನಂ.11/26, 10ನೇ ‘ಡಿ’ ಕ್ರಾಸ್, 2ನೇ ಹಂತ, ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರಂ, ಬೆಂಗಳೂರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.