ಸಂಬಂಧಿಕರಿಂದ ಸ್ಥಿರಾಸ್ತಿ ವಂಚನೆ: ಆರೋಪ

7

ಸಂಬಂಧಿಕರಿಂದ ಸ್ಥಿರಾಸ್ತಿ ವಂಚನೆ: ಆರೋಪ

Published:
Updated:

ರಾಮನಗರ: `ತಾವರೆಕೆರೆ ಹೋಬಳಿಯ ಚುಂಚನಕುಪ್ಪೆಯಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 15 ಎಕರೆ ಆಸ್ತಿಯನ್ನು ಚಿಕ್ಕಪ್ಪಂದಿರು ಹಾಗೂ ರಕ್ತ ಸಂಬಂಧಿಗಳೇ ಕಬಳಿಸಿ ವಂಚಿಸಿದ್ದಾರೆ~ ಎಂದು ಚುಂಚನಕುಪ್ಪೆ ಗ್ರಾಮದ ನಿವಾಸಿ ಶಂಕರಪ್ಪ ಅವರ ಪತ್ನಿ ಪ್ರೇಮಾ ಆರೋಪಿಸಿದರು.`ಪತಿ ಶಂಕರಪ್ಪ ಅವರ ಚಿಕ್ಕಪ್ಪ ಸಿದ್ದರಾಜು ಮೋಸ ಮಾಡಿ, ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ವಂಚಿಸಿದ್ದಾರೆ~ ಎಂದು ಅವರು ಶುಕ್ರವಾರ ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.`ಅವಿದ್ಯಾವಂತರಾದ ನಮಗೆ 20 ಲಕ್ಷ ರೂಪಾಯಿ ನೀಡಿ, ಖಾಲಿ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಸುಮಾರು ಎಂಟು ಕೋಟಿ ರೂಪಾಯಿ ಬೆಲೆಯ ಭೂಮಿಯನ್ನು ಹೀಗೆ ಮೋಸ ಮಾಡಿ, ವಂಚಿಸಿ ಸಂಬಂಧಿಕರೇ ಕಬಳಿಸಿದ್ದಾರೆ ಎಂದು ಅವರು ಆರೋಪಿಸಿದರು.ಇದೇ ವ್ಯಸನದಲ್ಲಿ ಪತಿ ಶಂಕರಪ್ಪ ಅವರ ಆರೋಗ್ಯ ಹದಗೆಟ್ಟಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿಯ ಒಡೆಯರಾಗಿದ್ದರೂ ಬೇರೆ ಹೊಲದಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸಬೇಕಾದ ದುಃಸ್ಥಿತಿ ಬಂದಿದೆ~ ಎಂದು ಅವರು ತಮ್ಮ ಅಳಲು ತೋಡಿಕೊಂಡರು.`ನಮಗೆ ಮೋಸ ಮಾಡಿ ಕಬಳಿಸಿರುವ ಜಮೀನಿನಲ್ಲಿ ಅವರು ನಿವೇಶನಗಳನ್ನು ನಿರ್ಮಿಸಿಕೊಂಡು ಮಾರಾಟಕ್ಕಿಟ್ಟು ಕೋಟ್ಯಂತರ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಪ್ರತಿಭಟಿಸಲು ಮುಂದಾದರೆ ಪ್ರಾಣಭಯ ಒಡ್ಡಿದ್ದಾರೆ~ ಎಂದು ಅವರು ದೂರಿದರು.ಈ ಕುರಿತು ನ್ಯಾಯ ದೊರಕಿಸಿಕೊಡುವಂತೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ ಎಂದರು.ಪತಿ ಶಂಕರಪ್ಪ, ಪುತ್ರಿಯರಾದ ಗಂಗಮ್ಮ, ಜ್ಯೋತಿ ಹಾಗೂ ಗ್ರಾಮದ ಮುಖಂಡರಾದ ಹೊನ್ನಯ್ಯ, ಸಿದ್ದ ಹನುಮಯ್ಯ ಇತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry