ಶುಕ್ರವಾರ, ಮೇ 14, 2021
25 °C

ಸಂಬಂಧ ಬೆಸೆಯುವ ಸಾಧನ ಸಾಹಿತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಸಾಹಿತ್ಯ ಜನರಲ್ಲಿ ಮಾನವೀಯ ಗುಣಗಳನ್ನು ಮೂಡಿ ಸುವುದರ ಜತೆಗೆ ಮನುಷ್ಯರ ನಡುವಿನ ಸಂಬಂಧ ಬೆಸೆಯುವ ಸಾಧನ ಎಂದು  ಸಾಹಿತಿ ಹಳೇಹಳ್ಳಿ ಕಿರಣ್‌ಕುಮಾರ್ ಅಭಿಪ್ರಾಯ ಪಟ್ಟರು.ಪಟ್ಟಣದ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಈಚೆಗೆ ಶಿಕ್ಷಕ ರಾಯಲ್ ಮಂಜುನಾಥ್ ಮನೆಯಲ್ಲಿ ನಡೆದ ಮನೆಗೊಂದು ಕವಿಗೋಷ್ಠಿ ಉದ್ಘಾಟಿಸಿ ಮಾತ ನಾಡಿದರು.`ಕವಿಗಳು ಮತ್ತು ಕಲಾವಿದರು ತಮ್ಮ ಕೃತಿ ಮತ್ತು ಕಲೆಯ ಮೂಲಕ ಸಮಾಜದಲ್ಲಿನ ಮೂಢನಂಬಿಕೆಗಳ ಜತೆಗೆ ಹಲವು ಅಂಕುಡೊಂಕುಗಳನ್ನು ತಿದ್ದಬಹುದು. ನೈತಿಕತೆ ಕಾಪಾಡುವಲ್ಲಿ ಸಹ ಸಾಹಿತ್ಯ ಸಹಕಾರಿ~ ಎಂದು ತಿಳಿಸಿದರು.ಚಿಂತಕಿ ಹಸೀನಾಬೇಗಂ ಮಾತನಾಡಿ, ಕವಿಗೋಷ್ಠಿಗಳು ಕಾವ್ಯಾಸಕ್ತರ ಮತ್ತು ಸಮಾನ ಮನಸ್ಕರ ಕೂಟಗಳಾಗಿವೆ.  ಇವು ಸಾಮಾಜಿಕ ಚಿಂತನೆಗೆ ವೇದಿಕೆಗಳಾಗಬೇಕು. ಸಮಾಜದ ಹಿತ ರಕ್ಷಣೆ ಮಾಡಲು ಕಾವ್ಯಾಸಕ್ತರು ಗಂಭೀರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.ವೇದಿಕೆ ಗೌರವಾಧ್ಯಕ್ಷ ಕಾಗತಿ ವೆಂಕಟರತ್ನಂ ಹಾಗೂ ಕಲಾವಿದೆ ರಮಾದೇವಿ ಮಾತನಾಡಿದರು.ಗೋಷ್ಠಿಯಲ್ಲಿ ಕೋಟಗಲ್ ನಾಗಸುಬ್ರಮಣ್ಯಂ, ವಿಶ್ವನಾಥ್, ಭೋಜ ರಾಜ್, ಕೆ.ಎಸ್.ನೂರುಲ್ಲಾ, ಸಾಯಿನಾಥ್, ರಾಮಚಂದ್ರ, ಶಿ.ಮಂಜು ನಾಥ್, ಎಂ.ವಿ.ಅಶ್ವತ್ಥ ನಾರಾಯಣ ಇನ್ನಿತರರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.ಮಹೇಶ್‌ಕುಮಾರ್, ಸುರೇಶ್, ಬಾಲಕೃಷ್ಣ, ವೆಂಕಟೇಶ್ವರರಾವ್, ಸೀಕಲ್ ನರಸಿಂಹಪ್ಪ, ನಂಜುಂಡೇಗೌಡ, ಆಂಜಿನಮ್ಮ ಹಾಗೂ ಪುಟಾಣಿಗಳಾದ ಸಬೀಹಾಬಾನು, ಫರ್ಹಿನ್ ಬಾನು, ನಯನ, ಕೀರ್ತಿ, ಮೌಲ್ಯ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.