ಸಂಬಳದಲ್ಲಿ ಕಾರ್ಯ ನಿರ್ವಹಿಸಲು ಆಗುವುದಿಲ್ಲವೇ?

7
ಸೇವಾ ನಿರ್ಲಕ್ಷ್ಯ: ಉಪಲೋಕಾಯುಕ್ತ ನ್ಯಾ. ಎಸ್.ಬಿ. ಮಜಗೆ ಅಸಮಾಧಾನ

ಸಂಬಳದಲ್ಲಿ ಕಾರ್ಯ ನಿರ್ವಹಿಸಲು ಆಗುವುದಿಲ್ಲವೇ?

Published:
Updated:

ಬೈಲಹೊಂಗಲ: `ಸರ್ಕಾರ ನೀಡುವ ಸಂಬಳಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸಲು ಆಗುವುದಿಲ್ಲವೇ? ಎಂದು ರಾಜ್ಯ ಉಪಲೋಕಾಯುಕ್ತ ನ್ಯಾ. ಎಸ್.ಬಿ. ಮಜಗೆ ಅವರು ಎ.ಪಿ.ಎಂ.ಸಿ. ಕಾರ್ಯದರ್ಶಿ ಕೋಡಿಗೌಡ ಅವರನ್ನು ಪ್ರಶ್ನಿಸಿದರು.ಎಪಿಎಂಸಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಚೇರಿಯ ಟೈಲ್ಸ್ ಕಾಮಗಾರಿ ಅಪೂರ್ಣಗೊಂಡಿರುವುದನ್ನು ಗಮನಿಸಿದ ಲೋಕಾಯುಕ್ತರು, ಕಾಮಗಾರಿ ವೆಚ್ಚ, ವಿಳಂಬಕ್ಕೆ ಕಾರಣ ಕೇಳಿದರು.ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ ನೀಡುತ್ತಿರುವ ಕುರಿತು ಕಾರ್ಮಿಕರನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಪತ್ರಿಕೆಗಳಿಗೆ ಜಾಹೀರಾತು ನೀಡಲು ಕಾರ್ಯದರ್ಶಿ ಹಣ ಕೇಳುತ್ತಾರೆ ಎನ್ನುವ ಕುರಿತು ಪತ್ರಿಕಾ ವರದಿಗಾರರು ಗಮನ ಸೆಳೆದಾಗ ಮಜಗೆ ಅವರು, `ಸರ್ಕಾರ ಎಷ್ಟು ಸಂಬಳ ಕೊಡುತ್ತೆ?' ಎಂದು ಖಾರವಾಗಿ ಪ್ರಶ್ನಿಸಿದರು. ಎಲ್ಲ ಪ್ರಶ್ನೆಗಳಿಗೆ ಕಾರ್ಯದರ್ಶಿ ಉತ್ತರಿಸದೆ ಮೌನವಹಿಸಿದ್ದರು.ಲೋಕಾಯುಕ್ತರ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯದರ್ಶಿ ಕಚೇರಿಯಲ್ಲಿ ಇರಲಿಲ್ಲ. ಹಾಜರಿ ಪುಸ್ತಕ ಪರಿಶೀಲನೆ ನಡೆಸಿ ದೂರವಾಣಿ ಮುಖಾಂತರ ಸಂಪರ್ಕಿಸಿದ ನಂತರ 11.20ಕ್ಕೆ ಕಚೇರಿಗೆ ಆಗಮಿಸಿದರು.ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ರೋಗಿಗಳ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ಪರಿಶೀಲನೆ ನಡೆಸಿದಾಗ ಸಿಬ್ಬಂದಿಯ ಮೂತ್ರಾಲಯ ಹಾಗೂ ಸಿಂಕ್ ಸ್ವಚ್ಛಗೊಳಿಸಿರುವುದನ್ನು ಗಮನಿಸಿ, ರೋಗಿಗಳ ಕುರಿತು ನಿರ್ಲಕ್ಷ ಹಾಗೂ ನಿಮ್ಮ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟಿದ್ದು, ತಾರತಮ್ಯ ಮಾಡುತ್ತಿರುವ ಬಗ್ಗೆ ತಾಕೀತು ಮಾಡಿದರು.;ಸಾರ್ವಜನಿಕರ ದೂರು, ಅಧಿಕಾರಿಗಳ ಭ್ರಷ್ಟಾಚಾರ ಕುರಿತು ಪರಿಶೀಲನೆ ಮಾಡಿ ಶಿಫಾರಸು ಮಾಡುವ ಕೆಲಸ ನಮ್ಮದು, ಅವಧಿ ಪೂರ್ಣಗೊಳಿಸಿದ ಅಧಿಕಾರಿಗಳ ವರ್ಗಾವಣೆ ಮಾಡುವ ಅಧಿಕಾರ ನಮ್ಮ ವ್ಯಾಪ್ತಿಗೆ ಇಲ್ಲ' ಎಂದು ನ್ಯಾ. ಎಸ್.ಬಿ. ಮಜಗೆ ಹೇಳಿದರು.

ಬೆಳಗಾವಿ ವಿಭಾಗದ ಲೋಕಾಯುಕ್ತ ಡಿವೈಎಸ್‌ಪಿ ಜಿ.ಆರ್. ಪಾಟೀಲ, ನಿರೀಕ್ಷಕ ಬಿ.ಎಸ್. ಪಾಟೀಲ ಉಪಸ್ಥಿತರಿದ್ದರು.ಟೆಕ್ವಾಂಡೂ ಆಯ್ಕೆ ಟ್ರಯಲ್ಸ್

ಬೆಳಗಾವಿ:
ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪಂಚಾಯಿತಿ ಯುವ ಕ್ರೀಡಾ ಮತ್ತು ಖೇಲ್ ಅಭಿಯಾನ ಪಂದ್ಯಾವಳಿಯಲ್ಲಿ ಭಾಗವಹಿಸುವ ಜಿಲ್ಲಾಮಟ್ಟದ ಟೆಕ್ವಾಂಡೂ ತಂಡದ ಆಯ್ಕೆ ಟ್ರಯಲ್ಸ್ ಅನ್ನು ಸೆ. 21 ರಂದು ಸಂಕೇಶ್ವರದ ಲಕ್ಷ್ಮೀ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.16 ವರ್ಷದೊಳಗಿನ ಗ್ರಾಮೀಣ ಪ್ರದೇಶದ ಬಾಲಕ ಹಾಗೂ ಬಾಲಕಿಯರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಈ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಇದೇ 21ರಂದು ಬೆಳಿಗ್ಗೆ 9 ರೊಳಗಾಗಿ ಸಂಘಟಕರಲ್ಲಿ ಹೆಸರು ನೋಂದಾಯಿಸಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2470757 ಅಥವಾ ಮೊ. ಸಂಖ್ಯೆ 9844625902ಗೆ ಸಂಪರ್ಕಿಸಬಹುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry