ಶುಕ್ರವಾರ, ಜನವರಿ 24, 2020
16 °C

ಸಂಭವನೀಯರ ಸ್ಯಾಂಪಲ್ ಪಡೆದ ನಾಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತದ ಬ್ಯಾಡ್ಮಿಂಟನ್ ತಂಡದ ಸಂಭವನೀಯರ ಮೂತ್ರದ ಸ್ಯಾಂಪಲ್ ಅನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಪಡೆದುಕೊಂಡಿದೆ.`ನಾಡಾ ಅಧಿಕಾರಿಗಳು ನಗರದಲ್ಲಿರುವ ಟಾಟಾ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಒಲಿಂಪಿಕ್ ಸಂಭವನೀಯರ ಮೂತ್ರದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ~ ಎಂದು 76ನೇ ರಾಷ್ಟ್ರೀಯ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಟೂರ್ನಿ ನಿರ್ದೇಶಕರಾದ ಯು. ವಿಮಲ್ ಕುಮಾರ್ ತಿಳಿಸಿದ್ದಾರೆ.ಅರವಿಂದ್ ಭಟ್, ಅನೂಪ್ ಶ್ರೀಧರ್, ಆದಿತ್ಯ ಪ್ರಕಾಶ್ ಅವರ ಸ್ಯಾಂಪಲ್ ಅನ್ನು ನಾಡಾ ಅಧಿಕಾರಿಗಳು ಪಡೆದಿದ್ದಾರೆಂದು ವಿಮಲ್ ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)