ಸಂಭಾವನೆ ಇಲ್ಲದೆ ನಟನೆ

7

ಸಂಭಾವನೆ ಇಲ್ಲದೆ ನಟನೆ

Published:
Updated:
ಸಂಭಾವನೆ ಇಲ್ಲದೆ ನಟನೆ

ನಾಸಿರುದ್ದಿನ್ ಶಾ ಸಂಭಾವನೆ ಪಡೆಯದೆ ನಟಿಸುತ್ತಿದ್ದಾರೆ. `ಚಾರ್ಲಿ ಕೆ ಚಕ್ಕರ್‌ಮೇ~ ಚಿತ್ರದಲ್ಲಿ. ರಂಗಭೂಮಿಯ ನಟರು ಸಣ್ಣ ಬಜೆಟ್‌ನ ಚಿತ್ರ ತಯಾರಿಸುತ್ತಿದ್ದು, ಅದರಲ್ಲಿ ನಾಸಿರ್ ಸಹ ನಟಿಸಲಿ ಎಂದು ಬಯಸಿದ್ದರು.ನಿರ್ಮಾಪಕ ಕರಣ್ ಅರೋರಾ ಈ ವಿಷಯವನ್ನು ಘೋಷಿಸಿದ್ದಾರೆ. ಅವರ ಹೊಸ ಚಿತ್ರ ಹೊಸ ಮುಖಗಳನ್ನು ಪರಿಚಯಿಸುತ್ತಿದೆ. `ಎಲ್ಲರೂ ರಂಗಭೂಮಿಯ ಮೂಲದವರು. ನಿರ್ದೇಶಕ ಮನೀಶ್ ಶ್ರೀವಾಸ್ತವ್ ನಾಸಿರ್ ಅವರೊಂದಿಗೆ ಮಾತನಾಡಿದ್ದರು.ಸ್ಕ್ರಿಪ್ಟ್ ಓದಿದ ಮೇಲೆ ನಾಸಿರ್ ನಟಿಸಲು ಒಪ್ಪಿಕೊಂಡರು. ಮಾತ್ರವಲ್ಲ, ತಮ್ಮ ಸಂಭಾವನೆಯೂ ಬೇಡವೆಂದರು. ಕಿರಿಯ ಕಲಾವಿದರನ್ನು ಬೆಂಬಲಿಸಲು ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದರು~ ಎಂದೂ ಅರೋರಾ ತಿಳಿಸಿದ್ದಾರೆ.

ಹಾಗಂತ ಈ ಚಿತ್ರದಲ್ಲಿ ಅವರದ್ದು ಕೇವಲ ಬಂದು ಹೋಗುವ ಪಾತ್ರವಲ್ಲ. ಪೂರ್ಣ ಪ್ರಮಾಣದ ಪಾತ್ರವಿದೆ.ಈ ಚಿತ್ರಕತೆಯು ಇತ್ತೀಚೆಗೆ ಕೊಲೆಯಾದ ಚಿತ್ರಗೀತೆ ರಚನಕಾರ ಕರಣ್‌ಕುಮಾರ್‌ಕಕ್ಕಡ್ ಕೊಲೆ ಕತೆಯನ್ನೇ ಹೋಲುತ್ತದೆ. ಆದರೆ ಸ್ಕ್ರಿಪ್ಟ್ ಈ ಘಟನೆ ಸಂಭವಿಸುವ ವರ್ಷಗಳ ಮೊದಲೇ ಬರೆಯಲಾಗಿತ್ತು.ಕತೆ ವಾಸ್ತವಕ್ಕೆ ಸಮೀಪವಾಗಿದೆ ಅಂತ ಅನಿಸಿದ್ದು, ಈ ಘಟನೆ ಸಂಭವಿಸಿದಾಗ. ಮತ್ತು ಇಂಥ ಜನರೂ ಇದ್ದಾರೆ, ನಮ್ಮ ನಡುವೆಯೇ ಇದ್ದಾರೆ ಎನ್ನುವುದೇ ಚಿತ್ರಕತೆಯಾಗಿದೆ ಎನ್ನುತ್ತಾರೆ ಅರೋರಾ. ಚಿತ್ರದಲ್ಲಿ ನಾಸಿರುದ್ದೀನ್ ಶಾ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದಾರೆ ಎಂದೂ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry