ಶುಕ್ರವಾರ, ಜನವರಿ 24, 2020
16 °C

ಸಂಭ್ರಮದ ಗ್ರಾಮೀಣ ಜಾನಪದ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೊಯ್ಸಳ ಜಾನಪದ ಕಲಾ ಸಂಸ್ಥೆ, ಸಿ.ಎಂ.ಎಸ್.ಎ.ಎಸ್.ಸಂಸ್ಥೆ, ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ ಪುರುಷ ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಚೌರಿಕೊಪ್ಪಲು ಗ್ರಾಮದಲ್ಲಿ ಶನಿವಾರ ಜಿಲ್ಲಾ ಮಟ್ಟದ ಗ್ರಾಮೀಣ ಜಾನಪದ ಉತ್ಸವ ಏರ್ಪಡಿಸಲಾಯಿತು.ಜಾನಪದ ನೃತ್ಯ, ಕಂಸಾಳೆ, ವೀರಗಾಸೆ, ಸುಗ್ಗಿ ಕುಣಿತ, ಜಾನಪದ ಗೀತೆ, ಕೋಲಾಟ ಮತ್ತಿತರ ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು. ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಎಂ.ಎಸ್.ಎಸ್. ಸಂಸ್ಥೆಯ ಫಾದರ್ ಫೆಲಿಕ್ಸ್ ಥಾಮಸ್ ರೋಜಾರಿಯೋ, ‘ದೇಶದ ಮೂಲ ಸಂಸ್ಕೃತಿಯಾಗಿರುವ ಜಾನಪದವನ್ನು ಉಳಿಸಿ ಬೆಳಸಬೇಕಾಗಿದೆ. ತಾಯಿ ಹಾಗೂ ಪರಿಸರದಿಂದ ಬಳುವಳಿಯಾಗಿ ಬಂದ ಜಾನಪದ ಕಲೆ, ಜಾನಪದ ಗೀತೆಗಳು, ಕೋಲಾಟ, ಕಂಸಾಳೆ ಪದ, ವೀರಗಾಸಿ, ಸೋಬಾನೆ ಪದ ಗೀತೆಗಳು ಗಾಯನ ಮುಂತಾದ ಕಲಾ ಪ್ರಕಾರಗಳು ಇಂದು ಪ್ರೋತ್ಸಾಹದ ಕೊರತೆಯಿಂದ ಸೊರಗುತ್ತಿವೆ’ ಎಂದರು.ಅಪ್ನಾ ದೇಶ್ ಅಸೋಸಿಯೇಷನ್ ಉಪಾಧ್ಯಕ್ಷ, ಕೆ.ಎ.ಎಸ್.ಅಧಿಕಾರಿ ರಾಜಾ ನಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ, ಕನರ್ನಾಟಕ ಜ್ಞಾನ ವಿಜ್ಞಾನ ಪರಿಷತ್‌ನ ಬಸವರಾಜ, ವಾರ್ತಾಧಿಕಾರಿ ವಿನೋದ್ ಚಂದ್ರ, ಪ್ರಾದೇಶಿಕ ಸಾರಿಗೆ ಇಲಾಖೆಯ ಪಾಶ, ಅನುಗನಾಳು ಕೃಷ್ಣಮೂರ್ತಿ, ಸುರೇಶ್ ಮತ್ತಿತರರು ಹಾಜರಿದ್ದರು. ಬಿ.ಟಿ.ಮಾನವ ಸ್ವಾಗತಿಸಿದರು. ಹೊಯ್ಸಳ ಜಾನಪದ ಕಲಾ ಸಂಸ್ಥೆ ಕಾರ್ಯದರ್ಶಿ ವಂದಿಸಿದರು.

ಪ್ರತಿಕ್ರಿಯಿಸಿ (+)