ಸಂಭ್ರಮದ ಗ್ರಾಮೀಣ ದಸರಾ ಕ್ರೀಡಾಕೂಟ

7

ಸಂಭ್ರಮದ ಗ್ರಾಮೀಣ ದಸರಾ ಕ್ರೀಡಾಕೂಟ

Published:
Updated:
ಸಂಭ್ರಮದ ಗ್ರಾಮೀಣ ದಸರಾ ಕ್ರೀಡಾಕೂಟ

ಎಚ್.ಡಿ.ಕೋಟೆ: ಗ್ರಾಮೀಣ ದಸರಾ ಕ್ರೀಡಾಕೂಟಕ್ಕೆ ಗುಂಡು ಎತ್ತುವುದರ ಮೂಲಕ ತಾಲ್ಲೂಕಿನಲ್ಲಿ ಗ್ರಾಮೀಣ ದಸರಾಗೆ ಅದ್ದೂರಿ ಚಾಲನೆ ನೀಡಲಾಯಿತು. ತಾಲ್ಲೂಕು ಕ್ರೀಡಾಂಗಣದಲ್ಲಿ ದಸರಾ ಗ್ರಾಮೀಣ ಸಮಿತಿ ಆಯೋಜಿಸಿದ್ದ ಗುಂಡು ಎತ್ತುವ ಹಾಗೂ ಹಗ್ಗಜಗ್ಗಾಟ ಸ್ಪರ್ದೆಗೆ ಗುರುವಾರ ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಯುವ ಉತ್ಸಾಹಿಗಳೂ ಸೇರಿದಂತೆ ಮಹಿಳೆಯರು, ಪುರುಷರು, ಸಂಘ ಸಂಸ್ಥೆಗಳ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು.ಕ್ರೀಡಾಕೂಟವನ್ನು ತಾಲ್ಲೂಕು ದಂಡಾಧಿಕಾರಿ ಕೆ. ಕೃಷ್ಣ ಉದ್ಘಾಟಿಸಿದರು.

ಕೆಸರು ಗದ್ದೆ ಓಟವನ್ನು ಮೇಟಿಕುಪ್ಪೆ ರಸ್ತೆಯಲ್ಲಿರುವ ಬಸ್ಡಿಪೋ ಪಕ್ಕದ ಗದ್ದೆಯಲ್ಲಿ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯನ್ನು ಪಟ್ಟಣದ ಬೆಳಗನಹಳ್ಳಿ ರಸ್ತೆಯಲ್ಲಿರುವ ಗುರುಭವನದಲ್ಲಿ ಏರ್ಪಡಿಸಲಾಗಿತ್ತು.ಫಲಿತಾಂಶ: ಪುರುಷರ ಕ್ರೀಡೆಗಳು– ಕೆಸರುಗದ್ದೆ ಓಟ: ಮಹದೇವನಾಯಕ (ಪ್ರಥಮ), ಶ್ರೀನಿವಾಸನಾಯಕ (ದ್ವಿತೀಯ), ಕಾಳಹುಚ್ಚೇಗೌಡ (ತೃತೀಯ)ಗುಂಡು ಎತ್ತುವ ಸ್ಪರ್ಧೆ: ಸದಾನಂದಕುಮಾರ್ (ಪ್ರಥಮ), ಲೋಕೇಶ್ (ದ್ವಿತೀಯ), ಶಿವಮಲ್ಲು ಹಾಗೂ ಮಂಜುನಾಥ್ (ತೃತೀಯ).ಗೋಣೀಚೀಲದ ಓಟ: ಚಿಕ್ಕನಾಯಕ (ಪ್ರಥಮ), ಅಶ್ವತ್‌ಕುಮಾರ್(ದ್ವೀತೀಯ),ಸಣ್ಣಸ್ವಾಮಿ (ತೃತೀಯ) ಗೊಬ್ಬರದ ಮೂಟೆ ಒತ್ತು ಓಡುವ ಸ್ಪರ್ಧೆ 100 ಮೀಟರ್: ಸದಾನಂದಕುಮಾರ್ (ಪ್ರಥಮ), ಕಾಳಹುಚ್ಚೇಗೌಡ(ದ್ವೀತೀಯ),ಶಿವಮಲ್ಲ (ತೃತೀಯ).ಹಗ್ಗ ಜಗ್ಗಾಟ: ಎಚ್.ಡಿ. ಕೋಟೆ ಪಟ್ಟಣದ ವಾಲ್ಮೀಕಿ ತಂಡ (ಪ್ರಥಮ), ಅಂತರಸಂತೆ ತಂಡ(ದ್ವಿತೀಯ)

ಮಹಿಳೆಯರ ಕ್ರೀಡೆಗಳು– ಬಿಂದಿಗೆಯಲ್ಲಿ ನೀರು ತುಂಬಿ 100 ಮೀಟರ್ ಓಡುವುದು, 18ರಿಂದ 30ರ ವಯೋಮಾನದವರು: ಮಮತಾ (ಪ್ರಥಮ), ಶೋಭಾ (ದ್ವಿತೀಯ), ಲಕ್ಷ್ಮೀ (ತೃತೀಯ).30 ವರ್ಷ ಮೇಲ್ಪಟ್ಟ ವಯೋಮಾನದವರು:  ಚಲುವಮ್ಮ (ಪ್ರಥಮ), ಪುಟ್ಟಮ್ಮಣಿ (ದ್ವಿತೀಯ), ವೀಣಾ (ತೃತೀಯ).

ಚಮಚದಲ್ಲಿ ನಿಂಬೇಹಣ್ಣು ಇಟ್ಟು ಓಡುವುದು, 18ರಿಂದ 30ರ ವಯೋಮಾನದವರು: ಬಸವನಗಿರಿ ಹಾಡಿಯ ಜಯಮ್ಮ  (ಪ್ರಥಮ), ಹೊಸಹಳ್ಳಿ ಗೀತಾ( ಧ್ವಿತೀಯ), ಬೊಪ್ಪನಹಳ್ಳಿ ಶೋಭಾ (ತೃತೀಯ).30 ವರ್ಷ ಮೇಲ್ಪಟ್ಟ ವಯೋಮಾನದವರು: ಪಟ್ಟಣದ ಮಂಗಳಗೌರಿ(ಪ್ರಥಮ), ಕಾಳಿದಾಸ ರಸ್ತೆಯ ಲೀಲಾವತಿ (ದ್ವೀತೀಯ), ಬೀಚನಹಳ್ಳಿ ನಾಗರತ್ನ (ತೃತೀಯ)ರಾಗಿಯನ್ನು ಬುಟ್ಟಿಯಲ್ಲಿ ತುಂಬಿ 100 ಮೀಟರ್ ಓಡುವುದು, 18ರಿಂದ 30ರ ವಯೋಮಾನದವರು: ಮಮತಾ (ಪ್ರಥಮ), ಹೀರೇಹಳ್ಳಿ ಶೋಭಾ (ದ್ವಿತೀಯ), ರತ್ನಮ್ಮ (ತೃತೀಯ).30 ವರ್ಷ ಮೇಲ್ಪಟ್ಟ ವಯೋಮಾನದವರು: ಚೆಲುವಮ್ಮ (ಪ್ರಥಮ), ಹೊಸಹಳ್ಳಿ ಪ್ರೇಮಕುಮಾರಿ (ದ್ವಿತೀಯ), ಮೀನಾ (ತೃತೀಯ) ಸ್ಥಾನ ಪಡೆದಿದ್ದಾರೆ.ರಂಗೋಲಿ ಸ್ಪರ್ಧೆ: ಪಾರ್ವತಿ ಎ.ಆರ್. (ಪ್ರಥಮ), ಚಂದ್ರಿಕಾ (ದ್ವಿತೀಯ), ನಂಜನಾಯಕನಹಳ್ಳಿ ಹಾಡಿಯ ಗಿರಿಜನ ಮಹಿಳೆ ಸುನೀತಾ (ತೃತೀಯ)ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಅನಿಲ್, ಪುಟ್ಟಬಸವ, ನರಸಿಂಹಮೂರ್ತಿ, ಕನ್ನಡಪ್ರಮೋದ್, ಅಧಿಕಾರಿಗಳಾದ ಕರೀಮುಲ್ಲ, ಲಿಂಗರಾಜು, ಜಯರಾಮ್, ರಾಮಕೃಷ್ಣಯ್ಯ, ವಿಜಯ್‌ಕುಮಾರ್, ಮಂಜುನಾಥ್, ಗಂಗಾಧರ್, ಶಿವಣ್ಣ, ಪೇದೆ ಅಶೋಕ್, ಮಂಜುಕೋಟೆ, ರವಿಕುಮಾರ್ ಎಂ.ಎಲ್, ಬಿ. ಬಸವರಾಜು, ಚಿಕ್ಕನಾಯಕ, ಯಳವನಾಯಕ, ನಾಗರಾಜು, ಆನಗಟ್ಟಿ ರಾಜು ಇದ್ದರು.ಪಿರಿಯಾಪಟ್ಟಣದಲ್ಲಿ ಕಳೆಗಟ್ಟಿದ ಆಚರಣೆ

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಮೀಣ ದಸರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ವೆಂಕಟೇಶ್ ವಹಿಸಿದ್ದರು. ಪ್ರತಿ ಬಾರಿ ದಸರಾ ಅಚರಣೆಗೆ ಸರ್ಕಾರದಿಂದ ರೂ.1 ಲಕ್ಷ ನೀಡುತ್ತಿದ್ದು ಈ ಬಾರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ರಾಮೀಣ ದಸರಾ ಆಚರಣೆ ರೂ.4 ಲಕ್ಷ ನೀಡಿರುವುದು ಉತ್ತಮ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಹದೇವ್, ಗ್ರಾಮೀಣ ದಸರಾ ಹಬ್ಬದ ಆಚರಣಾ ಸಮಿತಿ ಅಧ್ಯಕ್ಷ ಕೋಟೆ ಹುಂಡಿ ಮಹದೇವ್, ತಹಶೀಲ್ದಾರ್ ಎಂ.ಕೆ. ಸವಿತಾ, ತಾ.ಪಂ. ಅಧ್ಯಕ್ಷೆ ಬಿ. ಪವಿತ್ರಾ, ಉಪಾಧ್ಯಕ್ಷ ಎಚ್.ಎಸ್. ಪ್ರಕಾಶ್, ಜಿ.ಪಂ. ಸದಸ್ಯೆ ಕಾವೇರಿ ಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಜೆ. ಪುಟ್ಟರಾಜು, ಎಪಿಎಂಸಿ ಅಧ್ಯಕ್ಷ ಕೆ. ಹೊಲದಪ್ಪ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಸ್.ಕೆ. ಲಕ್ಷ್ಮೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಪ್ರಕಾಶ್, ತಾ.ಪಂ. ಸದಸ್ಯರಾದ ಆರ್.ಎಸ್.ಮಹದೇವ್, ಚಂದ್ರು, ಅತ್ತರ್ ಮತೀನ್, ಜವರಪ್ಪ, ಬಿ.ವಿ.ಅನಿತಾ, ಪ್ರಭಾರ ಇಒ ಮನೋಹರ್, ಬಿಇಒ ಸಿ.ಎಸ್. ರಾಮಲಿಂಗು, ಎಇಇ ಮಂಜುನಾಥ್,  ಸರ್ಕಲ್ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್ ಹಾಜರಿದ್ದರು. ಮೆರವಣಿಗೆ ಮತ್ತು ಸಾಂಸ್ಕೃತಿ ಕಾರ್ಯಕ್ರಮ: ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಮತ್ತು ಸಂಘಸಂಸ್ಥೆಗಳಿಂದ ಆಯೋಜಿಸಿದ್ದ ಗ್ರಾಮೀಣ ಪ್ರತಿಭೆ ಸಂಸ್ಕೃತಿಯನ್ನು ಸಾರುವ  ಸ್ತಬ್ಧ ಚಿತ್ರಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯಲ್ಲಿ ಸಾಗಿ ಕಾಲೇಜು ಮೈದಾನ ತಲುಪಿದವು. ಸಮಾರಂಭದಲ್ಲಿ ವಿವಿಧ ಶಾಲಾ ಕಾಲೇಜು ಮತ್ತುಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡುವ ಜೊತೆಗೆ ವಿವಿಧ ಕಲಾ ತಂಡಗಳು ಪ್ರದರ್ಶನ ನಡೆಸಿಕೊಟ್ಟವು.

ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಗೊರವರ ಕುಣಿತ, ಕಂಸಾಳೆ, ವೀರಭದ್ರ ಕುಣಿತ, ಶ್ರೀ ಪಟ್ಟಾಲದಮ್ಮ ಯುವಕ ಸಂಘದ ತಮಟೆ ಮತ್ತು ನಗಾರಿ, ಡೊಳ್ಳು ಕುಣಿತ, ಗಾರುಡಿ ಗೊಂಬೆ ಕುಣಿತ, ಪೂಜಾ ನೃತ್ಯ, ನಾಗರಿಕರ ಗಮನ ಸೆಳೆಯಿತು.ತಿ. ನರಸಿಪುರದಲ್ಲಿ ರೈತ ದಸರಾ

ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಪಟ್ಟಣದ ವಿದ್ಯೋದಯ ಕಾಲೇಜು ಕ್ರೀಡಾಂಗಣದಲ್ಲಿ  ಗ್ರಾಮೀಣಾ ದಸರಾ ಕ್ರೀಡಾಕೂಟ ಉದ್ಘಾಟಿಸಿದರು. ಮೈಸೂರು ಸಂಸ್ಥಾನದ ಐತಿಹಾಸಿಕ ಪರಂಪರೆ ಬಿಂಬಿಸುವ ದಸರಾ ಉತ್ಸವ ಈಗ ಗ್ರಾಮೀಣ ಸಂಸ್ಕೃತಿ, ಕ್ರೀಡೆ  ಹಾಗೂ ಕಲಾ ಪ್ರಕಾರಗಳನ್ನು ಪ್ರದಶಿರ್ಸುವ ಮೂಲಕ ಹಳ್ಳಿ ಜನರಲ್ಲೂ ದಸರಾ ಉತ್ಸವ ಕಾಣುವ ಅವಕಾಶ ದೊರಕಿದೆ ಎಂದರು. ವಿದ್ಯೋದಯ ಕ್ರೀಡಾಂಗಣದಲ್ಲಿ ನಡೆದ ಗ್ರಾಮೀಣಾ ದಸರಾ ಕ್ರೀಡಾಕೂಟದಲ್ಲಿ ಮಹಿಳೆಯರು ತುಂಬಿದ ಬಿಂದಿಗೆಯನ್ನು ಹೊತ್ತು ಓಡುವ ಸ್ಪರ್ಧೆಗೆ  ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ರಂಗೋಲಿ ಸ್ಪರ್ಧೆ,  ಪುರುಷರಿಗೆ ಗುಂಡು ಎತ್ತುವ ಸ್ಪರ್ಧೆ ನಡೆಯಿತು. ತಲಕಾಡು ಮುಖ್ಯ ರಸ್ತೆಯ ಚೌಹಳ್ಳಿ ಗ್ರಾಮದ ಬಳಿ  ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತುಂಬಲ ಅಂದಾನಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ವೆಂಕಟೇಶ್, ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೃಷ್ಣ, ತಹಶೀಲ್ದಾರ್ ಎಚ್.ಎಸ್. ಅರುಣಪ್ರಭ, ಸಹಾಯಕ ಕೃಷಿ ನಿದರ್ೇಶಕ ಎನ್.ಕೃಷ್ಣಮೂರ್ತಿ,  ದೈಹಿಕ ಪರಿವೀಕ್ಷಣಾಧಿಕಾರಿ ಸಂಪತ್ ದೊರೈರಾಜ್, ತಾ.ಪಂ ಸದಸ್ಯರಾದ ಬಸವರಾಜು, ನಂಜಮ್ಮ, ರೂಪಶ್ರೀ, ಶಿವಮ್ಮ ಮಹದೇವ, ಗ್ರಾಮೀಣಾ ದಸರಾ ಆರೋಗ್ಯ ಉಪ ಸಮಿತಿ ಅಧ್ಯಕ್ಷ ಆರ್. ಪ್ರಕಾಶ್‌ ಕುಮಾರ್, ಕಂದಾಯಾಧಿಕಾರಿ ಆನಂದರಾವ್, ಮಲ್ಲೇಶ, ನಾಗೇಂದ್ರಪ್ಪ, ದೈಹಿಕ ಶಿಕ್ಷಕರಾದ ಪೀಟರ್ ಪ್ರೇಮ್‌ ಕುಮಾರ್, ಬಿ. ಶಶಿಧರ, ಶಿವಮೂರ್ತಿ, ಕೃಷಿ ಅಧಿಕಾರಿ ಕುಮಾರಸ್ವಾಮಿ ಹಾಜರಿದ್ದರು. ರೈತ ದಸರಾ   ಕ್ರೀಡಾ ವಿಜೇತರು– ಗೊಬ್ಬರ ಮೂಟೆ ಎತ್ತಿಕೊಂಡು ಓಡುವ ಸ್ಪರ್ಧೆ:  ಡಣಾಯಕನಪುರ ಮನೋಜ್‌ಕುಮಾರ್‌ (ಪ್ರಥಮ), ಸೋಸಲೆ ಲಿಂಗರಾಜು(ದ್ವಿತೀಯ).ಕಲ್ಲು ಗುಂಡು ಎತ್ತುವ ಸ್ಪರ್ಧೆ:  ಲಿರಗಸೂರು ಮಲ್ಲಿಕಾರ್ಜುನ (ಪ್ರಥಮ), ಕೆಂಡನಕೊಪ್ಪಲು ಶಶಿಕುಮಾರ್‌ (ದ್ವಿತೀಯ).

ಕೆಸರು ಗದ್ದೆ ಓಟದ ಸ್ಪರ್ಧೆ: ಸೋಸಲೆ ಲಿಂಗರಾಜು (ಪ್ರಥಮ),  ಡಿ. ಮನೋಜ್‌ಕುಮಾರ್‌ (ದ್ವಿತೀಯ)30 ವಯೋಮಾನದೊಳಗಿನ  ರೈತ ಮಹಿಳೆಯರಿಗಾಗಿ ನಡೆಸಿದ ರಂಗೋಲಿ ಸ್ಪರ್ಧೆ: ಸಿಬಿಹುಂಡಿ ಹೇಮಾವತಿ (ಪ್ರಥಮ), ಕಲಿಯೂರು ಹೇಮಲತಾ(ದ್ವಿತೀಯ) 30 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ಬೈರಾಪುರ ಮಹಾದೇವಮ್ಮ (ಪ್ರಥಮ), ಯಾಚೇನ­ಹಳ್ಳಿ ಸವಿತಾ (ದ್ವಿತೀಯ).30 ವಯೋಮಾನದೊಳಗಿನ  ಮಹಿಳೆಯರಿಗಾಗಿ ನಡೆಸಿದ  ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ: ಕಲಿಯೂರು ಹೇಮಲತಾ (ಪ್ರಥಮ), ಮುತ್ತತ್ತಿ ಪಲ್ಲವಿ (ದ್ವಿತೀಯ)  ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಚಂದ್ರಿಕಾ ಕುಮಾರ್ (ಪ್ರಥಮ), ಸುಲೋಚನಾ ನಾಗರಾಜು ಬಹುಮಾನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry